ಟಾಲಿವುಡ್‌ ಸೆನ್ಸೇಷನ್ ಫಿಲ್ಮ್‌ 'ಅರ್ಜುನ್ ರೆಡ್ಡಿ' ಚಿತ್ರದ ನಾಯಕಿ  ಶಾಲಿನಿ ಪಾಂಡೆ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಾಗಿದೆ. ಇದಕ್ಕೆ ಎರಡು ತಿರುವುಗಳಿದ್ದು ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.  

ರಾತ್ರೋರಾತ್ರಿ ಟಾಲಿವುಡ್‌ನಲ್ಲಿ ಬಿಗ್ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ ಜೋಡಿ ಅಂದ್ರೆ ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ. 'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ಇಬ್ಬರಿಬ್ಬರ ನಡುವೆ ಇದ್ದ ಡಿಫರೆಂಟ್ ಕೆಮಿಸ್ಟ್ರಿಗೆ ಮನಸೋತವರು ಒಬ್ಬರಾ? ಇಬ್ಬರಾ? ಅರ್ಜುನ್ ರೆಡ್ಡಿ ಯಶಸ್ಸಿನ ನಂತರ ಈ ಜೋಡಿಗೆ ಚಿತ್ರರಂಗದಿಂದ ಅವಕಾಶಗಳು ಹರಿದು ಬಂದಿತ್ತು. 

ಬಾಲಿವುಡ್‌ ಸಿನಿಮಾಗೆ ವಿಜಯ್ ದೇವರಕೊಂಡ ಸಂಭಾವನೆ ಕೇಳಿದ್ರೆ ಅಬ್ಬಬ್ಬಾ..!

ಹಿಟ್ ಫಿಲ್ಮ್‌ಗಳನ್ನು ಮಾಡುತ್ತಾ ಪರಭಾಷೆಗಳಿಗೆ ಹಾರಿದ ವಿಜಯ್ ದೇವರಕೊಂಡ ಈಗ ಬಾಲಿವುಡ್‌ನಲ್ಲಿ ಜಾಹ್ನವಿ ಕಪೂ ಜೊತೆ ಮಿಂಚಲಿದ್ದಾರೆ. ಇನ್ನು ಮಾಡೆಲಿಂಗ್ ಮಾಡುತ್ತಾ ಅವಕಾಶಗಳನ್ನು ಗಿಟ್ಟಿಸಿಕೊಂಡ ಶಾಲಿನಿ ಪಾಂಡೆ 'ಅಗ್ನಿ ಸಿರಗುಗಲ್' ಚಿತ್ರತಂಡದವರಿಗೆ ಮೋಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯ್ ಅಂಟೋನಿ ಹಾಗೂ ಅರುಣ್‌ಗೆ ನಾಯಕಿಯಾಗಿ ಮಿಂಚುತ್ತಿರುವ ಶಾಲಿನಿ ಕೇವಲ 27 ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ. ಇನ್ನುಳಿದ ಭಾಗಕ್ಕೆ ಶೂಟಿಂಗ್‌ ಬರುತ್ತಿಲ್ಲ ಎಂದು ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. 

ಸಿಹಿ-ಕಹಿ ಚಂದ್ರು ಕಿರಿಯ ಪುತ್ರಿ 'ಖುಷಿ' ಹೀಗಿದ್ದಾರೆ ನೋಡಿ!

ಶಾಲಿನಿ ಅವರನ್ನು ಸಾಕಷ್ಟು ಬಾರಿ ಸಂಪರ್ಕಿಸಲು ಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರು ಪ್ರಯತ್ನ ಪಟ್ಟರೂ ವಿಫಲರಾದ ನಂತರ ಠಾಣೆಯಲ್ಲಿ ದೂರು ನೀಡಿ ತೆಲುಗು ಹಾಗೂ ತಮಿಳು ನಿರ್ಮಾಪಕರ ಸಂಘದಲ್ಲಿ ದೂರ ದಾಖಲಿಸಿದ್ದಾರೆ. ಇದನ್ನು ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ ಶಾಲಿನಿ ಅವರಿಗೆ ಬಾಲಿವುಡ್‌ನಲ್ಲಿ ರಣ್ವೀರ್ ಸಿಂಗ್‌ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಈ ಕಾರಣಕ್ಕೆ ಸೌತ್ ಫಿಲ್ಮ್‌ಗಳಿಂದ ಹೊರ ಹೋಗುತ್ತಿದ್ದಾರೆ ಎಂದು ಕೆಲ ಖಾಸಗಿ ವಾಹಿನಿಗಳಲ್ಲಿ ಪ್ರಕಟವಾಗುತ್ತಿದೆ.