ಗುರುತೇ ಸಿಗದ ಹಾಗೆ ಬದಲಾದ ಚಿಯಾನ್ ವಿಕ್ರಮ್ ನೋಡಿ ಅಭಿಮಾನಿಗಳಿಗೆ ಅಚ್ಚರಿ. ಹುಟ್ಟುಹಬ್ಬದಂದು ಚಿಯಾನ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಸೌತ್ ಸಿನಿಮಾರಂಗದ ಖ್ಯಾತ ನಟರಲ್ಲಿ ಚಿಯಾನ್ ವಿಕ್ರಮ್ ಕೂಡ ಒಬ್ಬರು. ತಮಿಳಿನ ಈ ಸ್ಟಾರ್ ಯಾವಾಗಲೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಪಾತ್ರಕ್ಕಾಗಿ ವಿಕ್ರಮ್ ಯಾವ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತಾರೆ. ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತಯಾರಿ ನಡೆಸುವ ವಿಕ್ರಮ್ ಅನ್ನಿಯನ್ ಮತ್ತು ಐ ಅಂತಹ ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಇದೀಗ ವಿಕ್ರಮ್ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ತಂಗಲಾನ್‌ ಸಿನಿಮಾ ಮೂಲಕ ವಿಕ್ರಮ್ ಮತ್ತೊಂದು ಹೊಸ ಅವತಾರದ ಮೂಲಕ ಅಭಿಮಾನಿಗಳ ಬರ್ತಿದ್ದಾರೆ. 

ಚಿಯಾನ್ ವಿಕ್ರಮ್ ಅವರಿಗೆ ಇಂದು (ಏಪ್ರಿಲ್ 17) ಹುಟ್ಟುಹಬ್ಬದ ಸಂಭ್ರಮ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ವಿಕ್ರಮ್ ಅವರಿಗೆ ಅಭಿಮಾನಿಗಳು, ಸಿನಿಮಾ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿಯೇ ತಂಗಲಾನ್‌ ಸಿನಿಮಾದ ಮೇಕಿಂಗ್ ರಿಲೀಸ್ ಮಾಡಲಾಗಿದೆ. ವಿಡೋಯೋ ರಿಲೀಸ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿಯಾನ್ ಲುಕ್ ನೋಡಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಗುರುತೇ ಸಿಗದಹಾಗೆ ಚಿಯಾನ್ ಬದಲಾಗಿದ್ದಾರೆ. ಅಷ್ಟು ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಬದಲಾದ ಚಿಯಾನ್ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. 

ತಂಗಲಾನ್‌ ನೈಜ ಘಟನೆ ಆಧಾರಿತ ಸಿನಿಮಾ. ಕೋಲಾರದ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ಸಿನಿಮಾ ಎನ್ನಲಾಗಿದೆ. ಮೇಕಿಂಗ್ ವಿಡಿಯೋ ನೋಡಿದ ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಬ್ಲಾಕ್‌ಬಸ್ಟರ್ ಪಕ್ಕ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಪಾ ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಾ.ರಂಜಿತ್ ಮತ್ತು ವಿಕ್ರಮ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದೆ. 

ಬೆಂಗಳೂರಿನಲ್ಲಿ ಚಿಯಾನ್ ವಿಕ್ರಮ್; ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ 'ಕೋಬ್ರಾ' ಸ್ಟಾರ್

ಈ ಪಾತ್ರಕ್ಕಾಗಿ ವಿಕ್ರಮ್ ಸಿಕ್ಕಾಪಟ್ಟೆ ತಯಾರಿ ಮಾಡಿದ್ದಾರೆ. ತೂಕ ಕಳೆದುಕೊಂಡಿರುವ ವಿಕ್ರಮ್ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಹೇರ್ ಸ್ಟೈಲ್ ಕೂಡ ವಿಭಿನ್ನವಾಗಿದೆ. ತಲೆಯ ಮುಂಭಾಗ ಗೋಳಿಸಲಾಗಿದ್ದ ಹಿಂದೆ ಉದ್ದವಾದ ಕೂದಲಿದೆ. ವಿಕ್ರಮ್ ಲುಕ್ ನಿಜಕ್ಕೂ ವಿತ್ರವಾಗಿದ್ದು ವಿಕ್ರಮ್ ಎಂದು ತಕ್ಷಣಕ್ಕೆ ಗುರುಹಿಡಿಯಲು ಸಾಧ್ಯತೆ ಇಲ್ಲ.

Scroll to load tweet…


ನಟ ಚಿಯಾನ್ ವಿಕ್ರಮ್‌ಗೆ ಬಾಂಬ್ ಬೆದರಿಕೆ; ಈ ಸಲ ಪತ್ತೆ ಹಚ್ಚದೇ ಬಿಡುವುದಿಲ್ಲ!

ಈ ಸಿನಿಮಾದಲ್ಲಿ ನಟಿ ಪಾರ್ವತಿ ಮತ್ತು ಮಾಳವಿಕಾ ಮೋಹನನ್ ನಟಿಸುತ್ತಿದ್ದಾರೆ. ಭಾರಿ ನಿರೀಕ್ಷೆಯ ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುತ್ತಿದೆ. ವಿಕ್ರಮ್ ಕೊನೆಯದಾಗಿ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಪೊನ್ನಿಯಿನ್ ಸೆಲ್ವನ್ 2 ರಿಲೀಸ್‌ಗೆ ಸಿದ್ಧವಾಗಿದ್ದು ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಮಣಿರತ್ನಂ ಸಾರಥ್ಯದಲ್ಲಿ ಬಂದ ಸಿನಿಮಾಗೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಜೊತೆಗೆ ಈಗ ತಂಗಲಾನ್‌ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.