Asianet Suvarna News Asianet Suvarna News

ಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ನಿಧನ

ಕಾಮಿಡಿ ಜಗತ್ತಿನ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ನಟಿ ಜೋಸೆಫೀನ್ ಚಾಪ್ಲಿನ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. 

Charlie Chaplin Daughter Josephine Dies At 74 sgk
Author
First Published Jul 22, 2023, 1:45 PM IST | Last Updated Jul 22, 2023, 1:45 PM IST

ಕಾಮಿಡಿ ಜಗತ್ತಿನ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ನಟಿ ಜೋಸೆಫೀನ್ ಚಾಪ್ಲಿನ್ ಕೊನೆಯುಸಿರೆಳೆದಿದ್ದಾರೆ. ಯುಎಸ್ ಮೂಲದ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಜುಲೈ 13 ರಂದು ಪ್ಯಾರಿಸ್‌ನಲ್ಲಿ ಜೋಸೆಫೀನ್ ಚಾಪ್ಲಿನ್ ನಿಧನರಾದರು ಎಂದು ಪ್ರಕಟಿಸಿದ್ದಾರೆ. 74 ವರ್ಷದ ನಟಿ ಜೋಸೆಫೀನ್ ಚಾಪ್ಲಿನ್ ಮಾರ್ಚ್ 28, 1949 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದರು. ಜೋಸೆಫೀನ್ ಚಾಪ್ಲಿನ್, ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ'ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು. ತನ್ನ ತಂದೆಯ ಜೊತೆಯೆ 1952 ಚಿಕ್ಕ ವಯಸ್ಸಿನಲ್ಲಿ ತೆರೆಯ ಮೇಲೆ ಮಿಂಚಿದರು. 

ಜೋಸೆಫೀನ್ ಚಾಪ್ಲಿನ್ ತನ್ನ ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ. ಚಾರ್ಲಿ, ಅರ್ಥರ್ ಮತ್ತು ಜೂಲಿಯನ್ ರೋನೆಟ್ ಹಾಗೂ ಅವರ ಒಡಹುಟ್ಟಿದವರಾದ ಮೈಕೆಲ್, ಜೆರಾಲ್ಡಿನ್, ವಿಕ್ಟೋರಿಯಾ, ಜೇನ್, ಆನೆಟ್, ಯುಜೀನ್ ಮತ್ತು ಕ್ರಿಸ್ಟೋಫರ್ ಅಗಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

ನಟನಾ ವೃತ್ತಿಜೀವನದ ಬಗ್ಗೆ ಹೇಳುವುದಾದರೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 1972 ರಲ್ಲಿ ಪಿಯರ್ ಪಾವೊಲೊ ಪಸೊಲಿನಿಯ ಪ್ರಶಸ್ತಿ ವಿಜೇತ ಸಿನಿಮಾ 'ದಿ ಕ್ಯಾಂಟರ್ಬರಿ ಟೇಲ್ಸ್' ಮತ್ತು ರಿಚರ್ಡ್ ಬಾಲ್ಡುಸಿಯ 'ಎಲ್'ಒಡೆರ್ ಡೆಸ್ ಫೌವ್ಸ್.' ಅದೇ ವರ್ಷ ಜೋಸೆಫೀನ್ ಚಾಪ್ಲಿನ್  ಸೋವಿಯತ್ ಒಕ್ಕೂಟದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಜನರ ಗುಂಪಿನ ಬಗ್ಗೆ ಮೆನಾಹೆಮ್ ಗೋಲನ್ ಅವರ 1972ರಲ್ಲಿ ಬಂದ 'ಎಸ್ಕೇಪ್ ಟು ದಿ ಸನ್' ನಲ್ಲಿ ಲಾರೆನ್ಸ್ ಹಾರ್ವೆ ಅವರೊಂದಿಗೆ ನಟಿಸಿದರು.

1984 ರಲ್ಲಿ ಜೋಸೆಫೀನ್ ಚಾಪ್ಲಿನ್ ಕೆನಡಾದ ದಿ ಬೇ ಬಾಯ್‌ನಲ್ಲಿ ನಟಿಸಿದರು, ಇದು ಅವರ ಸಹ-ನಟ ಕೀಫರ್ ಸದರ್‌ಲ್ಯಾಂಡ್ ಅವರ ವೃತ್ತಿಜೀವನದ ಚೊಚ್ಚಲ ಸಿನಿಮಾವಾಗಿತ್ತು. 1988 ರಲ್ಲಿ,  ದೂರದರ್ಶನ ಕಿರು-ಸರಣಿ 'ಹೆಮಿಂಗ್‌ವೇ' ನಲ್ಲಿ ಎರ್ನೆಸ್ಟ್ ಹೆಮಿಂಗ್‌ವೇ ಆಗಿ ಸ್ಟೇಸಿ ಕೀಚ್ ಎದುರು ಹ್ಯಾಡ್ಲಿ ರಿಚರ್ಡ್‌ಸನ್ ಆಗಿ ನಟಿಸಿದರು.

ಚಾಪ್ಲಿನ್ ಜೋಕಿಗೆ ನಗುವ ಮುನ್ನ...

ಜೋಸೆಫೀನ್ ಚಾಪ್ಲಿನ್ ತಂದೆ ಚಾರ್ಲಿ ಚಾಪ್ಲಿನ್ ಹಾಸ್ಯದ ಮೂಲಕ ಜಗತ್ತಿನ ಸಿನಿ ಪ್ರೀಯರ ಮನ ಗೆದ್ದಿದ್ದರು. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತನ್ನ ಮೂಖ ನಟನೆಯಿಂದನೇ ಚಾರ್ಲಿ ಚಾಪ್ಲಿನ್ ಜಗತ್ತಿನ ಚಿತ್ರ ಪ್ರೀಯರ ಹೃದಯ ಗೆದ್ದಿದ್ದರು. 

Latest Videos
Follow Us:
Download App:
  • android
  • ios