Asianet Suvarna News Asianet Suvarna News

ಆಸ್ಕರ್​ ಅವಾರ್ಡ್​ಗೆ ನಾಮನಿರ್ದೇಶನಗೊಂಡ 'ಚಂಪಾರಣ್​ ಮಟನ್'​! ಪತ್ನಿಗಾಗಿ ಸವಾಲು ಸ್ವೀಕರಿಸಿದವನ ಕಥೆ..

ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡು ಮನುಷ್ಯ ಅನುಭವಿಸಿದ ಕಥೆಯಾಧಾರಿತ 'ಚಂಪಾರಣ್​ ಮಟನ್'​ ಚಿತ್ರವು ಆಸ್ಕರ್​ನ ಸ್ಟೂಡೆಂಟ್ ಅಕಾಡೆಮಿ ಅವಾರ್ಡ್ಸ್​ಗೆ ನಾಮನಿರ್ದೇಶನಗೊಂಡಿದೆ.
 

Champaran Mutton  Make  To Semifinals Of Oscar Student Academy Awards suc
Author
First Published Aug 4, 2023, 1:15 PM IST

ಈ ವರ್ಷದ ಆಸ್ಕರ್ ನಾಮನಿರ್ದೇಶನಗಳು ವಿಶೇಷವಾಗಿ ಭಾರತೀಯ ಚಿತ್ರರಂಗಕ್ಕೆ ಹೆಚ್ಚಿನ ಉತ್ಸಾಹ ನೀಡಿದೆ. ಏಕೆಂದರೆ ಇನ್ನೊಂದು ಚಿತ್ರ ಈಗ ಆಸ್ಕರ್​ ಪ್ರಶಸ್ತಿಯ ಬಾಗಿಲು ತಟ್ಟಿದೆ. ಚಂಪಾರಣ್ ಮಟನ್ ಎಂಬ ಭಾರತೀಯ ಚಲನಚಿತ್ರವು ಪ್ರತಿಷ್ಠಿತ ಪಟ್ಟಿಗೆ ಸೇರಿದೆ. ಪುಣೆಯ ಫಿಲ್ಮ್ ಆ್ಯಂಡ್​ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್‌ಟಿಐಐ) ವಿದ್ಯಾರ್ಥಿ ಚಂಪಾರಣ್ ಮಟನ್ (Champaran Mutton) ಚಲನಚಿತ್ರ ನಿರ್ಮಿಸಿದ್ದಾರೆ. ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಲು ಹೆಸರುವಾಸಿಯಾದ ಆಸ್ಕರ್‌ನ ಒಂದು ವಿಭಾಗವಾದ ಸ್ಟೂಡೆಂಟ್ ಅಕಾಡೆಮಿ ಅವಾರ್ಡ್ಸ್ 2023 ರ ಸೆಮಿ-ಫೈನಲ್‌ನಲ್ಲಿ ಸ್ಥಾನ ಗಳಿಸಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸಸ್ ಈ ಪ್ರಶಸ್ತಿಯನ್ನು ನೀಡುತ್ತದೆ. ಚಂಪಾರಣ್ ಮಟನ್ ಚಿತ್ರದ ನಿರ್ದೇಶಕರು ಬಿಹಾರದ ರಂಜನ್ ಉಮಾಕೃಷ್ಣನ್.  ಚಂಪಾರಣ್ ಮಟನ್ ನಾಲ್ಕು ವಿಭಾಗಗಳಲ್ಲಿ ಗೌರವಾನ್ವಿತ ನಿರೂಪಣೆ ವಿಭಾಗ ಸೇರಿದಂತೆ ಮೂರು ವಿಭಾಗಗಳಲ್ಲಿ ಸ್ಥಾನ ಗಳಿಸಿದೆ. ಇದು ವಿದ್ಯಾರ್ಥಿ ಅಕಾಡೆಮಿ ಪ್ರಶಸ್ತಿಗಳಲ್ಲಿ ಮಾಡಿದ ಮೊದಲ ಭಾರತೀಯ ಚಲನಚಿತ್ರವಾಗಿದೆ. ವಿವಿಧ ಚಲನಚಿತ್ರ ತರಬೇತಿ ಸಂಸ್ಥೆಗಳಿಂದ ನಾಮನಿರ್ದೇಶನಗೊಂಡ 1700 ಚಲನಚಿತ್ರಗಳೊಂದಿಗೆ, ರಂಜನ್ ಕುಮಾರ್ ಅವರ ನಿರ್ದೇಶನವು ಆಸ್ಕರ್‌ನ ಸೆಮಿಫೈನಲ್ ಸುತ್ತಿಗೆ ತಲುಪಿದ 16 ಚಲನಚಿತ್ರಗಳಲ್ಲಿ ಟಾಪೆಸ್ಟ್​ ಸ್ಥಾನದಲ್ಲಿದೆ. 

ಕಥಾಹಂದರವು ಹೀರೋ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ. ಇದನ್ನು ಬಿಹಾರದ ವೈಶಾಲಿ, ಮುಜಾಫರ್‌ಪುರ ಮತ್ತು ಬೇಗುಸರಾಯ್ ಪ್ರದೇಶಗಳ ಭಾಷೆಯಾಗಿರುವ ಬಜ್ಜಿಕ (Bajjik) ಉಪಭಾಷೆಯಲ್ಲಿ ರೂಪಿಸಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ಉದ್ಯೋಗ ನಷ್ಟದ ನಂತರ ತಮ್ಮ ಹಳ್ಳಿಗೆ ಮರಳಬೇಕಾದ ಸ್ಥಿತಿ ನಾಯಕನಿಗೆ ಬರುತ್ತದೆ. ಆ ಸಮಯದಲ್ಲಿ ಪತ್ನಿಯ ಆಸೆಯನ್ನು ಈಡೇರಿಸಲು ಎಲ್ಲ ಸವಾಲುಗಳನ್ನು ಎದುರಿಸಿ ಹೇಗೆ  ಧೈರ್ಯದಿಂದ ಹೆಜ್ಜೆ ಇಡುತ್ತಾನೆ ಎನ್ನುವ ಹೃದಯಸ್ಪರ್ಷಿ ಟಚ್​ ಈ ಸಿನಿಮಾಕ್ಕೆ ನೀಡಲಾಗಿದೆ. ನಾಯಕ ತನ್ನ ಹೆಂಡತಿಯ ಆಸೆಯನ್ನು ಪೂರೈಸಲು ತೆಗೆದುಕೊಂಡ ನಿರ್ಧಾರದಿಂದ ಬದಲಾದ ಬದುಕನ್ನು ಕಥೆಯಲ್ಲಿ ನವಿರಾಗಿ ಕಟ್ಟಿ ಕೊಡಲಾಗಿದೆ. ಪ್ರತಿಷ್ಠಿತ ಆಸ್ಕರ್ ನಾಮನಿರ್ದೇಶಿತರಲ್ಲಿ ಚಲನಚಿತ್ರವು ಅರ್ಹ ಸ್ಥಾನವನ್ನು ಗಳಿಸಿದೆ. 

ಪ್ರೇಮಿಯ ಮಗುವಿನ ಜತೆ ಮಾಜಿ ಪತಿ ಮಗಳ ನಿಶ್ಚಿತಾರ್ಥದಲ್ಲಿ ನಟಿ ಕಲ್ಕಿ! ಕನ್​ಫ್ಯೂಸ್​ ಆಗ್ತಿದೆ ಎಂದ ಫ್ಯಾನ್ಸ್​

ಚಂಪಾರಣ್ ಮಟನ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟರಾದ ಚಂದನ್ ಕುಮಾರ್ (Chandan Kumar) ಹಾಗೂ ಫಾಲಕ್ ಖಾನ್ (Phalak Khan) ಬಿಹಾರದವರು. ಮಾಧ್ಯಮಗಳ ಜೊತೆ ನಡೆಸಿದ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದ ನಟಿ, ಚಿತ್ರವು ಬಿಹಾರದ ಜನರ ಅದಮ್ಯ ಮನೋಭಾವವನ್ನು ಸುಂದರವಾಗಿ ಬಿಂಬಿಸುತ್ತದೆ ಎಂದಿದ್ದಾರೆ.  ಇಡೀ ತಂಡಕ್ಕೆ ಮತ್ತು ಈ ಸಾಧನೆಗೆ ನಾನು ಕೃತಜ್ಞಳಾನಗಿದ್ದೇನೆ. ಇದು ನಾವೆಲ್ಲರೂ ಮಾಡಿದ ಕಠಿಣ ಪರಿಶ್ರಮದ ಫಲಿತಾಂಶ ಎಂದರು.  ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ  ಉಮಾಕೃಷ್ಣನ್, ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಆರ್ಥಿಕವಾಗಿ ಧ್ವಂಸಗೊಂಡಿರುವ ಗ್ರಾಮೀಣ ಕುಟುಂಬದ ಕಥೆಯನ್ನು ಹೇಳಿದರು. ಮಟನ್ ಅನ್ನು ರೂಪಕವಾಗಿ ಬಳಸಲಾಗಿದೆ.  40 ವರ್ಷಗಳ ನಂತರ  ಭಾರತೀಯ ಚಲನಚಿತ್ರವು ಈ ವಿಭಾಗದಲ್ಲಿ ಪ್ರಶಸ್ತಿಗಳ ರೇಸ್‌ಗೆ ತಲುಪಿರುವುದು ತುಂಬಾ ಹೆಮ್ಮೆ ತಂದಿದೆ.  ಈ ಶ್ರಮದ ಹಿಂದೆ ವಿಧು ಬಿನೋದ್ ಚೋಪ್ರಾ ಅವರ ಸಾಧನೆ ಇದೆ ಎಂದಿದ್ದಾರೆ. 
 
ಇನ್ನು ಮೂವತ್ತು ದಿನಗಳಲ್ಲಿ ಆರು ಸಿನಿಮಾಗಳ ಅಂತಿಮ ಪ್ರವೇಶವನ್ನು ನಿರ್ಧರಿಸಲಾಗುವುದು. ಸೆಮಿಫೈನಲ್‌ನಲ್ಲಿ 17 ಚಿತ್ರಗಳ ನಡುವೆ ಸ್ಪರ್ಧೆ (Competition) ಏರ್ಪಟ್ಟಿದೆ ಮತ್ತು 2400 ಚಿತ್ರಗಳ ಪರಿಶೀಲನೆಯ ನಂತರ ಈ ಹಂತಕ್ಕೆ ತಲುಪಿದೆ. ಇನ್ನು ಈ ಪ್ರಶಸ್ತಿಯ ಕುರಿತು ಹೇಳುವುದಾದರೆ, ಅರ್ಜೆಂಟೀನಾ, ಬೆಲ್ಜಿಯಂ ಮತ್ತು ಜರ್ಮನಿಯಂತಹ ದೇಶಗಳ ಚಲನಚಿತ್ರಗಳನ್ನು ಒಳಗೊಂಡಿರುವ ಸೆಮಿ-ಫೈನಲ್‌ನಲ್ಲಿ ಚಂಪಾರಣ್ ಮಟನ್ ಒಂದಾಗಿದೆ.  ಪ್ರಪಂಚದಾದ್ಯಂತದ ಚಲನಚಿತ್ರ ತರಬೇತಿ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅರ್ಧ ಗಂಟೆ ಅವಧಿಯದ್ದಾಗಿದೆ ಚಂಪಾರಣ್​ ಮಟನ್​ ಚಿತ್ರ.

ಗುಟ್ಟಾಗಿ ಮದ್ವೆಯಾದ್ರಂತೆ ನಟಿ ರಶ್ಮಿಕಾ ಮಂದಣ್ಣ! ಹುಡುಗನ ಬಗ್ಗೆ ರಿವೀಲ್​ ಮಾಡಿದ ನಟಿ
 

Follow Us:
Download App:
  • android
  • ios