Asianet Suvarna News Asianet Suvarna News

ಮಂಚಕ್ಕೆ ಕರೆದಿದ್ದ ಸ್ಟಾರ್​ ನಟನ ತಂದೆ, ಖ್ಯಾತ ನಿರ್ದೇಶಕನ ಹೆಸರನ್ನು ಕೊನೆಗೂ ಬಹಿರಂಗಪಡಿಸಿದ ನಟಿ ಶಕೀಲಾ!

ಇದಾಗಲೇ ಹಲವರು ತಮ್ಮ ದೇಹವನ್ನು ಹೇಗೆಲ್ಲಾ ಬಳಸಿಕೊಂಡರು ಎಂದು ಹೇಳಿಕೆ ನೀಡಿರುವ ನಟಿ ಶಕೀಲಾ, ಇದೀಗ ಮಂಚಕ್ಕೆ ಕರೆದಿದ್ದ ಸ್ಟಾರ್​ ನಟನ ತಂದೆ, ಖ್ಯಾತ ನಿರ್ದೇಶಕನ ಹೆಸರನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. 
 

Casting couch Shakeela says Allari Naresh father Late Satyanarayana asked  to adjust suc
Author
First Published Nov 29, 2023, 2:07 PM IST

ನಟಿ ಶಕೀಲಾ ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದ್ದ ನಟಿ.  ಈಗಾಗಲೇ ಕನ್ನಡ ಬಿಗ್ ಬಾಸ್ ಸೀಸನ್ 2ರಲ್ಲಿ ಭಾಗವಹಿಸಿದ್ದ ನಟಿ ಶಕೀಲಾ, ಹಿಂದೊಮ್ಮೆ ಬಿ-ಗ್ರೇಡ್​ ನಟಿ ಎನಿಸಿಕೊಂಡವರು. ಮಲಯಾಳಂನಲ್ಲಿ ಹಲ್​ಚಲ್​ ಸೃಷ್ಟಿಸಿದ್ದ ನಟಿಯೀಕೆ. ತಮ್ಮ ಬೋಲ್ಡ್​ ದೃಶ್ಯಗಳಿಂದ ನೋಡುಗರ ಬಿಸಿಯೇರಿಸುತ್ತಿದ್ದ ನಟಿ, ಭಾರಿ ಬೇಡಿಕೆಯಲ್ಲಿದ್ದವರು. ಕನ್ನಡದಲ್ಲಿಯೂ ನಟಿಸಿರುವ ಈಕೆ ತೆಲುಗು, ತಮಿಳು ಚಿತ್ರರಂಗದಲ್ಲಿಯೂ ನಟಿಸಿರುವ ಬಹುಭಾಷಾ ತಾರೆ.  ಬಿ-ಗ್ರೇಡ್ ಸಿನಿಮಾಗಳು ಎಂದರೆ ವಯಸ್ಕರ ಸಿನಿಮಾಗಳಿಂದಲೇ ಈಕೆ ಫೇಮಸ್​ ಆದವರು. ಬಿಗ್​ ಬಾಸ್​ ಮನೆಯಲ್ಲಿಯೂ ಈ ವಿಷಯವನ್ನು ನಟಿ ಹೇಳಿಕೊಂಡಿದ್ದಿದೆ. ಕನ್ನಡದ ಬಿಗ್​ಬಾಸ್​ ಮನೆಯಲ್ಲಿದ್ದ ತೇಜಾ ಅವರು ‘ಮೇಡಂ, ನಾನು ಚಿಕ್ಕಂದಿನಿಂದ ನಿಮ್ಮ ಸಿನಿಮಾಗಳನ್ನು ನೋಡಿ ಬೆಳೆದವನು' ಎಂದಾಗ ತಮಾಷೆ ಮಾಡಿದ್ದ ಶಕೀಲಾ,  'ಏನ್​ ಹೇಳ್ತಾ ಇದ್ಯಾ ನೀನು?  ನನ್ನ ಸಿನಿಮಾಗಳನ್ನು ಯಾರಾದರೂ ಚಿಕ್ಕವರು ನೋಡ್ತಾರಾ' ಎಂದು ಪ್ರಶ್ನಿಸಿ ಎಲ್ಲರನ್ನೂ ನಗಿಸಿದ್ದವರು. ಅಂಥ ನಟಿಯೀಕೆ.

ಇಷ್ಟೇ ಅಲ್ಲದೇ, ಒಂದು ಕಾಲದಲ್ಲಿ ಇವರಿಂದ ದೊಡ್ಡ ದೊಡ್ಡ ಸ್ಟಾರ್​ ನಟರೇ ಭಯಬೀಳುತ್ತಿದ್ದರಂತೆ. ಏಕೆಂದರೆ ಅಂದು ತಮ್ಮ ಬೋಲ್ಡ್​ ನಟನೆಯಿಂದ ಹಲ್​ಚಲ್​ ಸೃಷ್ಟಿಸುತ್ತಿದ್ದ ನಟಿ ಶಕೀಲಾ ಅವರು ನಟಿಸಿರುವ ಸಿನಿಮಾ ಬಿಡುಗಡೆಯಾದರೆ ಬೇರೆ ಸಿನಿಮಾಗಳು ಓಡುವುದಿಲ್ಲ ಎಂದು ದೊಡ್ಡ ದೊಡ್ಡ ಸ್ಟಾರ್​ಗಳು ಭಯಬೀಳುತ್ತಿದ್ದರಂತೆ. ಅವರು ತಮ್ಮ ಸಿನಿಮಾವನ್ನು ಮುಂದೂಡುತ್ತಿದ್ದ ಘಟನೆಗಳೂ ನಡೆದಿವೆ. ಇಂತಿಪ್ಪ ನಟಿಯ ಜೀವನ ಕಥೆ ಕೂಡ ಅಷ್ಟೇ ಭಯಾನಕವೂ ಹೌದು. ಅದೇನೆಂದರೆ ಎಳವೆಯಲ್ಲಿಯೇ ಗರ್ಭಿಣಿಯಾಗಿ ಪಡಬಾರದ ಪಾಡು ಪಟ್ಟವರು ನಟಿ ಶಕೀಲಾ.  ಹಿಂದೊಮ್ಮೆ ತಾಯಿಯ ಬಗ್ಗೆಯೇ ಶಾಕಿಂಗ್​ ಹೇಳಿಕೆ ನೀಡಿದ್ದರು ನಟಿ. ಶಕೀಲಾ ಸಿನಿಮಾರಂಗಕ್ಕೆ ಬರುವ ಮೊದಲೇ ಆಕೆಯ ತಾಯಿ ಹಣಕ್ಕಾಗಿ ಗಂಡಸರ ರೂಮಿಗೆ ಕಳಿಸುತ್ತಿದ್ದರಂತೆ. ಆಕೆಗೆ ಏನೂ ಮಾಡಬೇಕೆಂದು ಗೊತ್ತಾಗದೇ ಮಲಗಿ ಬರುತ್ತಿದ್ದರಂತೆ. ಈ ಸಂಗತಿಯನ್ನು ಶಕೀಲಾ ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡು ಗಳಗಳನೇ ಅತ್ತಿದ್ದರು.  ಶಕೀಲಾ ಸಿನಿಮಾರಂಗಕ್ಕೆ ಬರುವ ಮೊದಲೇ ಆಕೆಯ ತಾಯಿ ಹಣಕ್ಕಾಗಿ ಗಂಡಸರ ರೂಮಿಗೆ ಕಳಿಸುತ್ತಿದ್ದರಂತೆ. ಆಕೆಗೆ ಏನೂ ಮಾಡಬೇಕೆಂದು ಗೊತ್ತಾಗದೇ ಮಲಗಿ ಬರುತ್ತಿದ್ದರಂತೆ. 

ಬಾಲಕಿಯಾಗಿದ್ದಾಗಲೇ ಗೆಳೆಯನಿಂದ ಬಸುರಾಗಿದ್ದ ನಟಿ ಶಕೀಲಾ ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ನಡುಗಿಸಿದ್ದು ಹೇಗೆ?

ಇದಾದ ಬಳಿಕವೂ ಚಿತ್ರರಂಗದಲ್ಲಿ ಸಾಕಷ್ಟು ಮಂದಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಶಕೀಲಾ. ಹೆಸರು ಹೇಳದೇ ಕೆಲವರು ತಮ್ಮನ್ನು ಬಳಸಿಕೊಂಡಿದ್ದ ರೀತಿಯನ್ನು ಹೇಳಿದ್ದ ನಟಿ ಶಕೀಲಾ, ಇದೀಗ ಬಹಿರಂಗವಾಗಿ ನಿರ್ದೇಶಕರೊಬ್ಬರ  ಹೆಸರನ್ನು ಹೇಳಿದ್ದಾರೆ.  ಸ್ಟಾರ್‌ ನಟನೊಬ್ಬ ತಂದೆಯಾಗಿರುವ ನಿರ್ದೇಶಕ ರಾತ್ರಿ ವೇಳೆ ತನ್ನ ಕೋಣೆಗೆ ಬರುವಂತೆ ಹೇಳಿದ್ದ ಬಗ್ಗೆ ಉಲ್ಲೇಖಿಸಿರುವ ನಟಿ, ಇದೀಗ ಅವರ ಹೆಸರನ್ನೂ ಬಹಿರಂಗಪಡಿಸಿದ್ದಾರೆ.  

 
 ತಾವು  ಸಿನಿ ಉದ್ಯಮದಲ್ಲಿ  ಉತ್ತುಂಗದಲ್ಲಿದ್ದಾಗ, ತೆಲುಗಿನ ಸ್ಟಾರ್‌ ನಿರ್ದೇಶಕರೊಬ್ಬರು  ಮಂಚಕ್ಕೆ ಕರೆದಿದ್ದರಂತೆ.  ಆ ಘಟನೆ ಬಗ್ಗೆ ಮಾತನಾಡಿರುವ ಶಕೀಲಾ, ಟಾಲಿವುಡ್‌ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಅಲ್ಲರಿ ನರೇಶ್‌ ಅವರ ತಂದೆ ಇವಿವಿ ಸತ್ಯನಾರಾಯಣ್‌ ಹೆಸರನ್ನು ಹೇಳಿದ್ದಾರೆ. ನಾನು ಇವಿವಿ ಸತ್ಯನಾರಾಯಣ್‌ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ್ದೇನೆ. ಹೀಗಿರುವಾಗಲೇ ಒಂದು ದಿನ ತನ್ನ ಕೋಣೆಗೆ ಬರುವಂತೆ ನಿರ್ದೇಶಕರು ತಿಳಿಸಿದ್ದರು. ಅಡ್ಜೆಸ್ಟ್‌ ಮಾಡಿಕೊಳ್ಳುವಂತೆಯೂ ಹೇಳಿದ್ದರು. ನಿನಗೆ ನನ್ನ ಮುಂದಿನ ಸಿನಿಮಾದಲ್ಲಿ ಅವಕಾಶ ಬೇಕೆಂದರೆ, ನೀನು ಅಡ್ಜೆಸ್ಟ್‌ ಮಾಡಿಕೊಳ್ಳಲೇಬೇಕು ಎಂದಿದ್ದರು. ಆದರೆ, ನಾನು ನಿಮ್ಮ ಸಿನಿಮಾನೇ ಬೇಡ ಎಂದು ಹೊರಬಂದಿದ್ದೆ ಎಂದು ತಿಳಿಸಿದ್ದಾರೆ!  

'ಅನಿಮಲ್'ಗೆ ಅಡಲ್ಟ್​ ಸರ್ಟಿಫಿಕೇಟ್​: ರಣಬೀರ್​-ರಶ್ಮಿಕಾ ಹಸಿಬಿಸಿ ದೃಶ್ಯಗಳಿಗೆ ಬಿತ್ತು ಕತ್ತರಿ! ಫ್ಯಾನ್ಸ್ ನಿರಾಸೆ
 

Follow Us:
Download App:
  • android
  • ios