ಬೆಂಗಳೂರು (ಮಾ. 20): ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ನನ್ನು ಹೋದಲ್ಲಿ ಬಂದಲ್ಲಿ ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಹರ್ಯಾಣ ಮೂಲದ ಸುಧೀರ್ ರಾಜೇಂದ್ರ ಸಿಂಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. 

ಆಪ್ತ ಸಿಬ್ಬಂದಿಗೆ ಮನೆ ಖರೀದಿಸಲು 50 ಲಕ್ಷ ಕೊಟ್ಟ ಅಲಿಯಾ!

ಏಕ್ತಾ ಕಪೂರ್ ರನ್ನು ಭೇಟಿ ಮಾಡಲು ಸುಧೀರ್ ಸಾಕಷ್ಟು ಬಾರಿ ಪ್ರಯತ್ನಿಸಿದ್ದ ಎನ್ನಲಾಗಿದೆ. ಏಕ್ತಾ ಇತ್ತೀಚಿಗೆ ಮುಂಬೈನ ಜುಹು ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದ. ಆಗ ಬಾಡಿಗಾರ್ಡ್ ತಡೆದಿದ್ದರು. ಇಷ್ಟಕ್ಕೇ ಸುಮ್ಮನಾಗದೇ ಏಕ್ತಾ ಕಪೂರ್ ಹೋಗುತ್ತಿದ್ದ ಜಿಮ್ ಗೂ ಹೋಗಿ ಮಾಹಿತಿ ಸಂಗ್ರಹಿಸಿದ್ದ ಎನ್ನಲಾಗಿದೆ. 

ಸುಮಲತಾ ಪರ ಪ್ರಚಾರ ಮಾಡಿದ್ರೆ ಸರಿ ಇರಲ್ಲ; ಯಶ್, ದರ್ಶನ್‌ಗೆ ಜೆಡಿಎಸ್ ಶಾಸಕ ಬೆದರಿಕೆ

ಸುಧೀರ್ ಗೆ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ  ಇತ್ತು. ಹಾಗಾಗಿ ಏಕ್ತಾ ಕಪೂರ್ ರನ್ನು ಭೇಟಿ ಮಾಡಿದರೆ ತನಗೊಂದು ಅವಕಾಶ ಸಿಗಬಹುದು ಎನ್ನುವ ದೃಷ್ಟಿಯಿಂದ ಫಾಲೋ ಮಾಡುತ್ತಿದ್ದ ಎನ್ನಲಾಗಿದೆ. 

ಮೊದ ಮೊದಲಿಗೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದ ಏಕ್ತಾ ಇದು ಪದೇ ಪದೇ ಪುನಾರಾವರ್ತನೆ ಆದಾಗ ಪೊಲೀಸ್ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.