ಕೊರೋನಾ ವೈರಸ್‌ ನಡುವೆಯೂ ಮನೆಯಿಂದ ಹೊರಗೆ ಕಾಲಿಟ್ಟ ಬಾಲಿವುಡ್‌ ಖ್ಯಾತ ನಟ. ಮಾಸ್ಕ್‌ ಇಲ್ಲದೆ ಪೊಲೀಸರಿಗೆ ಹ್ಯಾಂಡ್ ಶೇಕ್‌ ಮಾಡಿದ್ದು ತಪ್ಪಲ್ವಾ? 

ಮಹಾಮಾರಿ ಕೊರೋನಾ ವೈರಸ್‌ ಎಲ್ಲೆಡೆ ಹರಡುತ್ತಿದ್ದು ಭಾರತ ಸರ್ಕಾರ ಈ ಹಿಂದೆ 21 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಲಾಕ್‌ಡೌನ್‌ನನ್ನು ಮೇ 3ರ ವರೆಗೂ ಮುಂದೂಡಲಾಗಿದೆ. ಈ ನಡುವೆ ಅನೇಕ ಸಿನಿ ತಾರೆಯರ ಪೋಟೋಗಳು ಕಾಂಟ್ರವರ್ಸಿಗೆ ಸಿಲುಕಿಕೊಳ್ಳುತ್ತಿದೆ.

ಹೆಚ್ಚುತ್ತಿದೆ ಕೊರೋನಾ ಭೀತಿ; ಮದ್ವೆ ಮುಂದೂಡಿದ್ರು ನಟ ನಟಿಯರು..!

ಕೊರೋನಾ ವೈರಸ್‌ನಿಂದ ಸೆಲ್ಫ್‌ ಲಾಕ್‌ಡೌನ್‌ ಆಗಿರುವ ಜನರು ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಮನೆಯಿಂದ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಹಿಡಿದು ಹೊರಗೆ ಬರಬೇಕು ಹೀಗಿರುವಾಗ ಬಾಲಿವುಡ್‌ ನ ಎನರ್ಜಿಟಿಕ್ ಮ್ಯಾನ್ ವರುಣ್ ಧವನ್‌ ಮಾಸ್ಕ್‌ ಧರಿಸದೆ , ಸ್ಯಾನಿಟೈಸರ್ ಬಳಸದೆ ಪೊಲೀಸಕರಿಗೆ ಹ್ಯಾಂಡ್‌ ಶೇಕ್‌ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ರೋಲಿಗರಿಗೆ ಆಹಾರವಾದ ನಂತರ ವರುಣ್‌ ಧವನ್‌ ಉತ್ತರ ನೀಡಿದ್ದಾರೆ.

'ಈ ಫೋಟೋ ಈಗ ಸೆರೆ ಹಿಡಿದಿರುವುದಲ್ಲ. ಏರಡು ತಿಂಗಳು ಹಿಂದೆಯದು' ಎಂದು ಟ್ಟೀಟ್‌ ಮಾಡಿದ್ದಾರೆ. ಕೊರೋನಾ ವೈರಸ್‌ ವಿರುದ್ಧ ಹೋರಾಡಲು ವರುಣ್‌ ಸಾಥ್‌ ನೀಡಿದ್ದಾರೆ, ಪಿಎಂ ಪರಿಹಾರ ನಿಧಿಗೆ 30 ಲಕ್ಷ ಹಾಗೂ ಸಿಎಂ ನಿಧಿಗೆ 25 ಲಕ್ಷ ನೀಡಿದ್ದಾರೆ.
Scroll to load tweet…

ಕೊರೊನಾ ವೈರಸ್‌ ಹರಡುವುದನ್ನು ತಪ್ಪಿಸುವುದಕ್ಕೆ ಒಂದು ದಾರಿಯೇ ಹ್ಯಾಂಡ್‌ ಶೇಕ್‌ ಹಾಗೂ ತಬ್ಬಿಕೊಳ್ಳುವ ಬದಲು ಭಾರತೀಯ ಸಂಸ್ಕೃತಿಯ ರೀತಿಯಲ್ಲಿ ನಮಸ್ಕರಿಸುವುದು.