ಬಾಲಿವುಡ್ ಕ್ಯೂಟ್ ಪೇರ್ ಅಲಿಯಾ ಭಟ್- ರಣಬೀರ್ ಕಪೂರ್ ಮದುವೆಯಾಗಲಿದ್ದಾರೆ ಎನ್ನುವ ವಿಚಾರ ಬಿ ಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. 2020, ಜನವರಿ 22 ರಂದು ಅಲಿಯಾ- ರಣವೀರ್ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. 

ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಸ್!

ಈ ವೆಡ್ಡಿಂಗ್ ಕಾರ್ಡಿನಲ್ಲಿ ಅಲಿಯಾ ಭಟ್ ಸ್ಪೆಲ್ಲಿಂಗ್ ತಪ್ಪಾಗಿರುವುದನ್ನು ಗಮನಿಸಬಹುದಾಗಿದೆ. Alia ಎಂದು ಬರೆಯುವ ಬದಲು Aliya ಎಂದು ಬರೆಯಲಾಗಿದೆ. ಜೊತೆಗೆ ತಂದೆಯನ್ನು ಹೆಸರನ್ನು mahesh Bhatt ಎಂದು ಬರೆಯುವ ಬದಲು Mukesh Bhatt ಎಂದು ಬರೆಯಲಾಗಿದೆ.

ಮದುವೆ ವಿಚಾರವನ್ನು ಅಲಿಯಾ ಭಟ್ ತಳ್ಳಿ ಹಾಕಿದ್ದಾರೆ. ನಾವಿನ್ನು ಮದುವೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಫೇಕ್ ವೆಡ್ಡಿಂಗ್ ಕಾರ್ಡ್ ಇದಾಗಿದ್ದು ತಮಾಷೆಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಡಲಾಗಿದೆ.  ಅಲಿಯಾ ಭಟ್- ರಣವೀರ್ ಕಪೂರ್ ಡೇಟಿಂಗ್ ಮಾಡುತ್ತಿರುವ ವಿಚಾರ ಬಹಿರಂಗ ಸತ್ಯವಾಗಿರುವುದರಿಂದ ಆಗಾಗ ಇಂತಹ ಮದುವೆ ವಿಚಾರ ಪಾಪ್ ಅಪ್ ಆಗುತ್ತಿರುತ್ತದೆ. 

ಹಾಲಿವುಡ್ 'ಟರ್ಮಿನೇಟರ್ ಡಾರ್ಕ್ ಫೇಟ್' ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಇವರಿಬ್ಬರು 'ಬ್ರಹ್ಮಸೂತ್ರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 2020 ರಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.  ಅಲಿಯಾ- ರಣವೀರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಅಮಿತಾಬಚ್ಚನ್, ಅಕ್ಕಿನೇನಿ ನಾಗಾರ್ಜುನ್ ಕೂಡಾ ಇರುವುದು ವಿಶೇಷ.