ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋ ಚಿತ್ರೀಕರಣ ಆರಂಭಿಸಿದ ಶಿಲ್ಪಾ ಶೆಟ್ಟಿ. ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ನಟಿ. 

ಬಾಲಿವುಡ್ ಬೋಲ್ಡ್ ನಟಿ ಶಿಲ್ಪಾ ಶೆಟ್ಟಿ ಎಂಥ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅನೇಕ ಅದ್ಭುತ ಪ್ರಾಜೆಕ್ಟ್‌ಗಳು ಕೈ ಸೇರುತ್ತಿದ್ದ ಸಮಯದಲ್ಲಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರೀಕರಣ ದಂಧೆಯಲ್ಲಿರುವ ವಿಚಾರ ತಿಳಿದು ಸ್ವತಃ ಶಿಲ್ಪಾ ಕುಟುಂಬದವರೇ ಶಾಕ್ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿಲ್ಪಾ ಶೆಟ್ಟಿ ಕೆರಿಯರ್‌ ಹಾಳು ಮಾಡಿದ್ರಾ ರಾಜ್ ಕುಂದ್ರಾ?

ಹಣದ ಆಸೆಗೆ ಪತಿ ತೆಗೆದುಕೊಂಡ ಒಂದು ನಿರ್ಧಾರ ಶಿಲ್ಪಾ ಸಿನಿ ವೃತ್ತಿ ಜೀವನಕ್ಕೆ ಮುಳುವಾಗಿದೆ ಎಂದು ನೆಟ್ಟಿಗರು ಹೇಳುತ್ತಿರುವುದು ಗಮನಿಸಬಹುದು. ಅದರಲ್ಲೂ ಈ ಮೊದಲೇ ಆರಂಭವಾಗಿರುವ ಪ್ರಾಜೆಕ್ಟ್‌ಗಳು ಮುಂದುವರೆಯಲೇ ಬೇಕು. ಕಿರುತೆರೆ ಜನಪ್ರಿಯ ಶೋ ಸೂಪರ್ ಡ್ಯಾನ್ಸರ್ ಸೀಸನ್ 4ರಲ್ಲಿ ಶಿಲ್ಪಾ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಪತಿ ಜೈಲು ಸೇರಿದ ನಂತರ ಶಿಲ್ಪಾ ಯಾವ ಕಾರ್ಯಕ್ರಮದಲ್ಲಿ, ಚಿತ್ರೀಕರಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಯಾರ ಸಂಪರ್ಕಕ್ಕೂ ಸಿಗದೆ ದೂರ ಉಳಿದಿದ್ದರು. ಆದರೀಗ ಪತಿ ಜೈಲು ಸೇರಿ 1 ತಿಂಗಳು ಕಳೆದಿದೆ, ಜೀವನ ಸಾಗಲೇಬೇಕು ಎಂದು ಚಿತ್ರೀಕರಣಕ್ಕೆ ಮರಳಿದ್ದಾರೆ. 

ನೋವಿನಲ್ಲಿದ್ದ ಶಿಲ್ಪಾರನ್ನು ಇಡೀ ಸೂಪರ್ ಡ್ಯಾನ್ಸರ್ ತಂಡ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದೆ. ಸಹ ತೀರ್ಪುಗಾರರಾಗಿರುವ ಅನುರಾಗ್ ಬಸು ಹಾಗೂ ಗೀತಾರನ್ನು ಭೇಟಿ ಮಾಡಿದ ಶಿಲ್ಪಾ ಕೊಂಚ ಭಾವುಕರಾಗಿ ಕಣ್ಣಾಲಿಗಳು ಒದ್ದೆಯಾದವು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಸೋನಿ ಟಿವಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಪುಟ್ಟ ಮಕ್ಕಳ ಡ್ಯಾನ್ಸ್ ನೋಡಿ ಶಿಲ್ಪಾ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಶಿಲ್ಪಾ ಜೊತೆ ಸಂಪರ್ಕದಲ್ಲಿದ್ದ ತಂಡದವರು, ಶಿಲ್ಪಾ ಮಕ್ಕಳಿಗಾಗಿ ಅಥವಾ ಕುಟುಂಬದವರಿಗಾಗಿ ಚಿತ್ರೀಕರಣಕ್ಕೆ ಬಂದಿರುವುದಲ್ಲ. ತನ್ನತನ, ತನ್ನ ಶ್ರಮ ಹಾಗೂ ತಾವು ನಡೆಸಿಕೊಂಡು ಬಂದಿರುವ ಕಲಾವಿದೆಯ ಶಿಸ್ತಿನ ಜೀವನಕ್ಕೆ ಬೆಲೆ ಕೊಟ್ಟು ಎಂದು ಹೇಳಿದ್ದಾರೆ.

View post on Instagram