ಇದೊಂಥರಾ 90ರ ದಶಕದ ಕಥೆಗಳನ್ನು ಮೆಲಕು ಹಾಕುವ ಕಾಲ. ಮನೆಯಲ್ಲಿಯೇ ಕೂತು 80-90ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ-ಮಹಾಭಾರತ ನೋಡುವ ಜೊತೆಗೆ, ಸೋಷಿಯಲ್ ಮೀಡಿಯಾದಲ್ಲಿ ಒಂದಾದ ಮೇಲೆ ಮತ್ತೊಂದು  ಬಾಲಿವುಡ್ ಥ್ರೋ ಬ್ಯಾಕ್ ಕಥೆಗಳನ್ನು ಮೆಲಕು ಹಾಕಲಾಗುತ್ತಿದೆ. ಅದೇ ರೀತಿ ಬಾಲಿವುಡ್ ದಿಗ್ಗಜ ನಟರ ಮತ್ತೊಂದು ಸವಿ ನೆನಪು ಇಲ್ಲಿದೆ....

ಬಾಲಿವುಡ್‌ ಚಿತ್ರರಂಗದ ಸೂಪರ್‌ ಹಿಟ್‌ ಜೋಡಿಗಳ ಪಟ್ಟಿಯಲ್ಲಿ ಸದಾ ಕಾಣಿಸಿಕೊಳ್ಳುವುದು ಕಾಜೋಲ್‌-ಶಾರುಖ್‌ ಅಥವಾ ಕಾಜೋಲ್‌- ಅಮೀರ್‌ ಖಾನ್‌. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಈಗ ಸೋಷಲ್‌ ಮೀಡಿಯಾದಲ್ಲಿ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಿದ್ದು, ಈ ಜೋಡಿ ಬಗ್ಗೆಯೂ ಹತ್ತು ಹಲವು ವಿಷಯಗಳು ಹೊರ ಬರುತ್ತಿವೆ. ಆಗ ಟಿವಿ ಚಾನೆಲ್‌ವೊಂದಕ್ಕೆ ಬಾಲಿವುಡ್ ಖಾನ್ ನೀಡಿದ ಸಂದರ್ಶನವೊಂದರ ತುಣಕನ್ನು ಇದೀಗ ಹರಿ ಬಿಡಲಾಗಿದೆ. ಈಗ ಕಾಜೋಲ್‌, ಅಮೀರ್ ಜೊತೆ ನಟಿಸದಂತೆ ಶಾರುಖ್‌ ಮಾಡಿದ ಮಾಸ್ಟರ್‌ ಪ್ಲ್ಯಾನ್‌ ವೈರಲ್‌ ಆಗುತ್ತಿದೆ.

ಶಾರುಖ್‌ ಗೌರಿ ಫಸ್ಟ್‌ನೈಟ್‌ ಡ್ರೀಮ್‌ಗರ್ಲ್‌ನಿಂದ ಹಾಳಾಯ್ತಂತೆ!

ಅಷ್ಟಕ್ಕೂ ಏನು ನಡೆದಿತ್ತು ಈ ಜೋಡಿ ನಡುವೆ?
ಹೌದು! 1993ರಲ್ಲಿ 'ಬಾಜಿಗರ್‌' ಚಿತ್ರದ ಮೂಲಕ ಬಿ-ಟೌನ್‌ ಫಿಲ್ಮಿ ಲವರ್‌ಗಳ ಸೂಪರ್‌ ಹಿಟ್‌ ಜೋಡಿಯಾಗಿ ಕಾಜೋಲ್‌- ಶಾರುಖ್‌ ಗುರುತಿಸಿಕೊಂಡರು. ಅವರಿಬ್ಬರ ವೃತ್ತಿ ಜೀವನದಲ್ಲಿ ಬ್ರೇಕ್‌ ಕೊಟ್ಟ ಸಿನಿಮಾವಿದು. ಕಮರ್ಷಿಯಲ್‌ ನಟಿಯಾಗಿ ಕಾಜೋಲ್‌ , ಲವರ್‌ ಬಾಯ್‌ ಆಗಿ ಶಾರುಖ್‌ ತಮ್ಮದೇ ಛಾಪು ಮೂಡಿಸಲು ಶುರು ಮಾಡಿದರು.

'ಬಾಜಿಗರ್' ಚಿತ್ರೀಕರಣದಲ್ಲಿದ್ದಾಗ ಶಾರುಖ್‌ಗೆ ಕರೆ ಮಾಡಿದ ಅಮೀರ್‌, ಕಾಜೋಲ್‌ ಅಭಿನಯದ ಬಗ್ಗೆ ವಿಚಾರಿಸಿಕೊಂಡಿದ್ದರು. ಆಮೀರ್ ಆಗಿನಿಂದಲೂ ಪರ್ಫೆಕ್ಷನಿಸ್ಟ್ ಅಂತ ಎಲ್ಲರಿಗೂ ಗೊತ್ತಿತ್ತು. ಪಳಗಿದ ನಟಿಯರೊಂದಿಗೆ ಮಾತ್ರ ನಟಿಸಲು ಅವರು ಒಪ್ಪುತ್ತಿದ್ದರು. ಅದಕ್ಕೆ ಶಾರುಖ್, 

'ಕಾಜೋಲ್‌ಗೆ ಕೆಲಸದಲ್ಲಿ ಶ್ರದ್ಧೆ ಇಲ್ಲ. ಫೋಕಸ್‌ ಇಲ್ಲ. ಅವಳೊಟ್ಟಿಗೆ ನಟಿಸುವುದು ಆಮೀರ್‌ಗೆ ಬೇಡವೆಂದು ಹೇಳಿದ್ದೆ. ಆ ನಂತರ ಚಿತ್ರದ ಕೆಲವೊಂದು ದೃಶ್ಯಗಳಲ್ಲಿ ಕಾಜೋಲ್ ಅಭಿನಯ ನೋಡಿದಾಗ ಆಕೆ ಅದ್ಭುತ ನಟಿ ಎಂಬುವುದು ತಿಳಿಯಿತು. ಇದೆಲ್ಲಾ ಆದ ನಂತರ ಅಮೀರ್‌ಗೆ ಕರೆ ಮಾಡಿ, ಆಕೆ ಆನ್‌ ಸ್ಕ್ರೀನ್‌ ಸುಂದರ ನಟಿ ಎಂದು ಮನವರಿಕೆ ಮಾಡಿಕೊಟ್ಟೆ,' ಎಂದು ಖಾಸಗೀ ಸಂದರ್ಶನವೊಂದರಲ್ಲಿ ಶಾರುಖ್‌ ಹೇಳಿ ಕೊಂಡಿದ್ದಾರೆ. 

ಗೌರಿ ಫ್ಯಾಮಿಲಿಗಾಗಿ 5 ವರ್ಷ ಹಿಂದೂವಾಗಿದ್ರು ಶಾರೂಖ್ ಖಾನ್, ಮೂರು ಸಲ ಮದುವೆ ...

ಆ ಮೇಲೆ ಕಾಜೋಲ್ ಬಗ್ಗೆ ಅತ್ಯುತ್ತಮ ಅಭಿಪ್ರಾಯ ಮೂಡಿಸಿಕೊಂಡಿದ್ದು ಮಾತ್ರವಲ್ಲ, ಕಾಜೋಲ್ ಹಾಗೂ ಶಾರುಖ್ ವೈಯಕ್ತಿಕವಾಗಿಯೂ ಹತ್ತಿರವಾದರು. ಆತ್ಮೀಯ ಸ್ನೇಹಿತರಾದರು. ಎಲ್ಲಿಯೋ ಇದು ಅಜಯ್ ದೇವಗನ್‌ಗೆ ಹೊಟ್ಟೆ ಉರಿ ತಂದಿತ್ತು, ಎಂಬ ಸುದ್ದಿಯೂ ಬಿ ಟೌನ್‌ನಲ್ಲಿ ಹರಿದಾಡಿತ್ತು.

ಶಾರುಖ್‌ನನ್ನು ಅಮಿರ್‌ಗೆ ಹೋಲಿಸಿ ಕಾಲೆಳೆದ ಕನ್ನಡದ ನಟಿ; ಅಣುಕಿಸಲು ಕಾರಣವೇನು?

ಈ ಜೋಡಿ ಕಮಾಲ್ ಮಾಡಿದ ಚಿತ್ರಗಳು:
ಶಾರುಖ್‌ಗೂ ಮೊದಲು ಚಿತ್ರರಂಗಕ್ಕೆ ಅಮೀರ್‌ ಕಾಲಿಟ್ಟರೂ ಕಾಜೋಲ್‌ ಜೊತೆ ಅಭಿನಯಿಸಿರಲಿಲ್ಲ. ಕಾಜೋಲ್ ಬಗ್ಗೆ ಒಳ್ಳೆ ಅಭಿಪ್ರಾಯ ಪಡೆದ ನಂತರ 'Ishq' ಚಿತ್ರದಲ್ಲಿ ಜೋಡಿಯಾದರು. ಕಾಜೋಲ್‌ ಹಾಗೂ ಶಾರುಖ್ 'ಬಾಜಿಗರ್' ಚಿತ್ರದ ನಂತರ ಸೂಪರ್‌ ಹಿಟ್‌ ಸಿನಿಮಾ 'ಕರಣ್‌ ಅರ್ಜುನ್‌'ನಲ್ಲಿ ಮಿಂಚಿದ್ದಾರೆ. ಆನಂತರ 'ದಿಲ್‌ವಾಲೆ ದುಲೇನಿಯಾ ಲೇಜಾಯಿಯೆಂಗೆ'ಯಲ್ಲಿ ಈ ಜೋಡಿ ಕಮಾಲ್ ಮಾಡಿ, ಇತಿಹಾಸವನ್ನೇ ಸೃಷ್ಟಿಸಿತು. 1998ರಲ್ಲಿ 'ಕುಚ್ ಕುಚ್‌ ಹೋತಾಯೇ', 2001ರಲ್ಲಿ 'ಕಬಿ ಖುಷಿ ಕಬಿ ಗಮ್', 2010ರಲ್ಲಿ 'ಮೈ ನೇಮ್‌ ಈಸ್‌ ಖಾನ್‌ ಹೀಗೆ ಅನೇಕ ಸಿನಿಮಾಗಳಲ್ಲಿ ಜೋಡಿಯಾದರು. 

ಆದರೆ ಅಮೀರ್‌ ಹಾಗೂ ಕಾಜೋಲ್‌ ಕಾಣಿಸಿಕೊಂಡಿದ್ದು ಕೇವಲ ಇಷ್ಕ್  ಹಾಗೂ  ಫನಾ ಚಿತ್ರಗಳಲ್ಲಿ ಮಾತ್ರ. ಆದರೂ, ಈ ಜೋಡಿ ಮಾಡಿದ ಕಮಾಲ್ ಮಾತ್ರ ಕಡಿಮೆ ಏನಿಲ್ಲ ಬಿಡಿ.