ಬಾಲಿವುಡ್‌ ಬಾದ್‌ಷಾ ಹುಟ್ಟು ಹಬ್ಬವನ್ನು ಪ್ರತಿ ವರ್ಷವೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನೆಚ್ಚಿನ ನಟನ ಕೈಯಲ್ಲಿ ಕೇಕ್‌ ಕತ್ತರಿಸಿ ಆರೋಗ್ಯ ಹಾಗೂ ಐಶ್ವರ್ಯ ಸಂಮೃದ್ಧಿಯಾಗಲೆಂದು ಆಶಿಸುತ್ತಾರೆ. ಆದರೆ ಕಳೆದ ವರ್ಷ ಇದೇ ಹುಟ್ಟು ಹಬ್ಬದ ಸಮಯದಲ್ಲಿ ಪ್ರಶಾಂತ್ ಎಂಬ ವ್ಯಕ್ತಿಯ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ನಡೆದಿತ್ತು. .

ಯಸ್! ಶಾರುಖ್‌ ರೆಪ್ಲಿಕಾ ಎನ್ನುವಂತೆ ಇರುವ ವ್ಯಕ್ತಿಯ ಹೆಸರು ಪ್ರಶಾಂತ್ ವಾಲ್ಡೆ. ನವೆಂಬರ್ 2,2019ರಲ್ಲಿ  ಪೊಲೀಸರು ಕಾರಣ ಹೇಳದೇ ಪ್ರಶಾಂತ್‌ನನ್ನು ಬಂಧಿಸಿದ್ದರು. 'ಕಳೆದ ವರ್ಷ ನಾನು ಬಾಂದ್ರದಲ್ಲಿ ಶಾರುಖ್‌ ಬೈಯಾ ಹುಟ್ಟುಹಬ್ಬ ಆಚರಿಸಬೇಕೆಂದು  ಕೇಕ್‌ ಹಾಗೂ ಹೂಗಳನ್ನು ಹಿಡಿದು ಅವರ ಮನೆಗೆ ಹೋಗಿದ್ದೆ. ಮನ್ನತ್ ಬಂಗಲೆ ತಲುಪಿದಾಗ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ತುಂಬಿದ್ದರು. ನಾನು ಅವರ ಸ್ಟಾಫ್‌ಗಳನ್ನು ಸಂಪರ್ಕಿಸಿದ್ದಾಗ, ಶಾರುಖ್ 1 ಗಂಟೆಗೆ ಸಿಗುತ್ತಾರೆ ಎಂದರು. ಈಗಿನ್ನೂ 11 ಗಂಟೆ ಆಗಿತ್ತು. ಅದಕ್ಕೆ ನಾನು ಮನೆಗೆ ಹೋಗಿ ಆನಂತರ ಬರುವುದಾಗಿ ನಿರ್ಧರಿಸಿ ಹೊರಟೆ,' ಎಂದು ಅಂದು ನಡೆದ ಘಟನೆಯನ್ನು ಪ್ರಶಾಂತ್ ನೆನದು ಮಾತನಾಡಿದ್ದಾರೆ.

ಬುರ್ಜ್ ಕಲೀಫಾದಲ್ಲಿ ಕಿಂಗ್‌ ಖಾನ್: ಬಾಲಿವುಡ್ ಬಾದ್‌ ಶಾಗೆ ದುಬೈನಲ್ಲಿ ಗೌರವ 

'ಬುಕ್ ಮಾಡಿದ ಕ್ಯಾಬ್ ಬಳಿ ಹೋಗುವ ಸಮಯದಲ್ಲಿ ಗುಂಪು ಗುಂಪಾಗಿ ಜನರು ನನ್ನ ಹತ್ತಿರ ಓಡಿ ಬರುತ್ತಿದ್ದರು. ನನ್ನನ್ನೇ ಶಾರುಖ್ ಎಂದು ಕರೆಯುತ್ತಿದ್ದರು. ಕೆಲವೇ ಕ್ಷಣದಲ್ಲಿ ಅವರು ನನ್ನನ್ನು ಸುತ್ತಿಕೊಂಡು ಸೆಲ್ಫೀ ಕ್ಲಿಕ್ ಮಾಡಿಕೊಳ್ಳಲು ಆರಂಭಿಸಿದರು. ಕೆಲವರು ನಾನೇ ನಿಜವಾದ ಶಾರುಖ್ ಎಂದು ತಿಳಿದು ಅಳಲು ಪ್ರಾರಂಭಿಸಿದರು. ಕೆಲವೇ ನಿಮಿಷಗಳಲ್ಲಿ ಪೊಲೀಸರು ಬಂದು ನನ್ನನ್ನು ರಕ್ಷಣೆ ಮಾಡಿದರು. ನಾನು ಬೇಕಂತಲೇ ಶಾರುಖ್ ರೀತಿಯಲ್ಲಿ ಬಟ್ಟೆ ಧರಿಸಿದ್ದೆ. ಆದರೆ ಅದೂ ಈ ರೀತಿಯ ಅವಾಂತರಕ್ಕೆ ಕಾರಣವಾಯ್ತು. ಅಷ್ಟರಲ್ಲಿ ಶಾರುಖ್ ಸ್ಟಾಫ್‌ಗಳು ನನಗೆ ಕರೆ ಮಾಡಿ 2 ಗಂಟೆಗೆ ಬರಲು ಹೇಳಿದರು. ಆದರೆ ಪೊಲೀಸರು ಮತ್ತೆ ಏರಿಯಾದಲ್ಲಿ ಕಾಣಿಸಿಕೊಳ್ಳದಂತೆ ವಾರ್ನ್ ಮಾಡಿದ ಕಾರಣ ನಾನು ಮನ್ನತ್‌ಗೆ ಹೋಗಲು ಆಗಲಿಲ್ಲ,' ಎಂದು ಪ್ರಶಾಂತ್ ನಗುನಗುತ್ತಾ ಆ ಕ್ಷಣದ ಬಗ್ಗೆ ಮಾತನಾಡಿದ್ದಾರೆ.