ಕೊಲೆ ಬೆದರಿಕೆ ಬೆನ್ನಲ್ಲೇ ಗನ್ ಲೈಸೆನ್ಸ್‌ಗಾಗಿ ಸಲ್ಮಾನ್ ಖಾನ್ ಅರ್ಜಿ, ಕಮಿಷನರ್ ಕಚೇರಿಗೆ ಭೇಟಿ!
ಸಿಂಗರ್ ಸಿಧು ಮೂಸೆ ವಾಲಾ ಹತ್ಯೆ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಕುಟುಂಬಕ್ಕೆ ಕೊಲೆ ಬೆದರಿಕೆ ಹೆಚ್ಚಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಶ್ನೋಯ್ ಈಗಾಗಲೇ ಸಲ್ಮಾನ್ ಕ್ಷಮಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾನೆ. ಇತ್ತ ಸಲ್ಮಾನ್ ತಂದೆಗೆ ಕೊಲೆ ಬೆದರಿಕೆ ಪತ್ರ ಕೂಡ ಬಂದಿದೆ. ಇದರ ನಡುವ ಆತ್ಮರಕ್ಷಣೆಗಾಗಿ ಸಲ್ಮಾನ್ ಖಾನ್ ಪಿಸ್ತೂಲ್ ಲೈಸೆನ್ಸ್‌ಗೆ ಅರ್ಜಿ ಹಾಕಿದ್ದಾರೆ.
ಮುಂಬೈ(ಜು.22): ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಪ್ರಕರಣ ಹೆಚ್ಚಾಗುತ್ತಿದೆ. ಸಲ್ಲು ಹಾಗೂ ಕುಟುಂಬ ಸದಸ್ಯರಿಗೆ ಇದೀಗ ಜೀವ ಭಯ ಕಾಡುತ್ತಿದೆ. ಸಿಂಗರ್ ಸಿಧು ಮೂಸೆ ವಾಲ ಹತ್ಯೆ ಬಳಿಕ ಸಲ್ಮಾನ್ ಹಾಗೂ ಕುಟುಂಬಕ್ಕೆ ಒಂದರ ಮೇಲೊಂದರಂತೆ ಬೆದರಿಕೆಗಳು ಬರುತ್ತಿದೆ. ಇದರ ಬೆನ್ನಲ್ಲೇ ಸಲ್ಮಾನ್ ಖಾನ್ ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾರೆ. ಕೊಲೆ ಬೆದರಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆತ್ಮರಕ್ಷಣೆಗಾಗಿ ಸಲ್ಮಾನ್ ಖಾನ್ ಈಗಾಗಲೇ ಪಿಸ್ತೂಲ್ ಲೈಸೆನ್ಸ್‌ಗೆ ಅರ್ಜಿ ಹಾಕಿದ್ದರು. ಇದರ ವೆರಿಫಿಕೇಶನ್‌ಗಾಗಿ ಸಲ್ಮಾನ್ ಖಾನ್ ಇಂದು ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಕುರಿತು ಮುಂಬೈ ಹಿರಿಯ ಪೊಲೀಸ್ ಅಧಿಕಾರಿ ವಿವೇಕ್ ಫಾನ್ಸಲ್ಕರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ತಮಗೆ ಹಾಗೂ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ಗನ್ ಲೈಸೆನ್ಸ್‌ಗಾಗಿ ಅರ್ಜಿ ಹಾಕಿದ ಪ್ರತಿಯೊಬ್ಬರು ಪೊಲೀಸ್ ಠಾಣೆಗೆ ಭೇಟಿ ನೀಡಿ ಫಿಸಿಕಲ್ ವೆರಿಫಿಕೇಶನ್ ಮಾಡಿಸುವುದು ಕಡ್ಡಾಯವಾಗಿದೆ. ಇದರ ಭಾಗವಾಗಿ ಸಲ್ಮಾನ್ ಖಾನ್ ಕಮಿಷನರ್ ಕಚೇರಿಗೆ ಬೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಧು ಮೂಸೆ ವಾಲಾ ಹತ್ಯೆ ಬಳಿಕ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹೆಚ್ಚಾಗಿದೆ. ಕೃಷ್ಣಮೃಗ ಭೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್‌ಗೆ ಈಗಾಗಲೇ ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಶ್ನೋಯ್ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಮೂಸೆ ವಾಲಾ ಪ್ರಕರಣದ ವಿಚಾರಣೆಯಲ್ಲೂ ಮತ್ತೆ ಸಲ್ಮಾನ್ ಕುರಿತು ಹೇಳಿಕೆ ನೀಡಿದ್ದಾನೆ. ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಕ್ಷಮಿಸುವುದಿಲ್ಲ ಎಂದಿದ್ದಾನೆ. ಇದರಿಂದ ಸಲ್ಮಾನ್ ಹಾಗೂ ಕುಟುಂಬದ ಆತಂಕ ಮತ್ತಷ್ಟು ಹೆಚ್ಚಾಗಿದೆ.
Salman Khan ಟಾರ್ಗೆಟ್: ಸಲ್ಲು ಹತ್ಯೆಗೆ 4 ಲಕ್ಷದ ರೈಫಲ್ ಖರೀದಿ?
ಜೂನ್ ತಿಂಗಳಲ್ಲಿ ಸಲ್ಮಾನ್ ಖಾನ್ ತಂದೆಗೆ ಕೊಲೆ ಬೆದರಿಕೆ ಬಂದಿತ್ತು. ಸಿಧು ಮೂಸೆ ವಾಲಾ ರೀತಿ ಹತ್ಯೆ ಮಾಡುವುದಾಗಿ ಪತ್ರ ಸಿಕ್ಕಿತ್ತು. ಈ ಘಟನೆ ಬೆನ್ನಲ್ಲೇ ಸಲ್ಮಾನ್ ಖಾನ್ ಹಾಗೂ ಕುಟುಂಬ ಸದಸ್ಯರ ಭದ್ರತೆಯನ್ನು ಮುಂಬೈ ಪೊಲೀಸರು ಹೆಚ್ಚಿಸಿದ್ದರು. ದೆಹಲಿಯ ತಿಹಾರ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಶ್ನೋಯ್, ಸದ್ಯ ಪಂಜಾಬ್ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಸಿಧೂ ಮೂಸೆ ವಾಲಾ ಪ್ರಕರಣದಲ್ಲಿ ಲಾರೆನ್ಸ್ ವಿಚಾರಣೆ ಚುರುಕುಗೊಳಿಸಲಾಗಿದೆ.
ಬಿಷ್ಣೋಯಿ ಗ್ಯಾಂಗ್‌ನಿಂದ ಸಲ್ಮಾನ್ ಪರ ವಕೀಲನಿಗೆ ಜೀವ ಬೆದರಿಕೆ
ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಬಳಿಕ, ಕೃಷ್ಣಮಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಪರ ವಾದಿಸುತ್ತಿರುವ ವಕೀಲನಿಗೂ, ಇತ್ತೀಚೆಗೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಲಾರೆನ್ಸ್ ಬಿಷ್ಣೋಯಿ ಅವರ ಗ್ಯಾಂಗ್‌ನಿಂದ ಹತ್ಯೆ ಬೆದರಿಕೆ ಬಂದಿದೆ. ವಕೀಲ ಹಸ್ತಿಮಲ್ ಸಾರಸ್ವತ್ ತಮಗೆ ಲಾರೆನ್ಸ್ ಬಿಷ್ಣೋಯಿ ಹಾಗೂ ಗೋಲ್ಡಿ ಬ್ರಾರ್ ಅವರ ಹೆಸರುಗಳ ಮೊದಲ ಅಕ್ಷರಗಳಿದ್ದ ಹತ್ಯೆ ಬೆದರಿಕೆ ಪತ್ರ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ರದಲ್ಲಿ ‘ಶತ್ರುವಿನ ಮಿತ್ರ ನಮ್ಮ ಮೊದಲ ಶತ್ರು’ ಎಂದು ಬರೆಯಲಾಗಿದೆ. ಪೊಲೀಸರು ಪತ್ರದ ಸತ್ಯಾಸತ್ಯತೆ ಪರೀಕ್ಷಿಸಲು ತನಿಖೆ ಆರಂಭಿಸಿದ್ದು, ಸಾರಸ್ವತ್ ಭದ್ರತೆಗಾಗಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದ್ದಾರೆ.
ಸಲ್ಮಾನ್ ಖಾನ್‌ರನ್ನು ಕ್ಷಮಿಸಲ್ಲ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ಜೀವ ಬೆದರಿಕೆ