Asianet Suvarna News Asianet Suvarna News

ಅಯ್ಯೋ ದೇವರೇ, ನಟ ರಂಜೀತ್‌ಗೆ ಇದೆಂಥಾ ಬಿರುದು ಸಿಕ್ತು?

ಬಾಲಿವುಡ್ ಚಿತ್ರರಂಗದಲ್ಲಿ ನಟನಾಗಬೇಕು ಎಂದುಕೊಂಡ ಬಂತ ರಂಜೀತ್‌ಗೆ ರೇಪ್‌ ಸ್ಪೆಷಲಿಸ್ಟ್‌ ಎಂದು ಬಿರುದು ಕೊಡಲು ಕಾರಣವೇನು? 

Bollywood Ranjeet talks about his film life pulling clothes of girls vcs
Author
Bangalore, First Published Sep 28, 2021, 12:39 PM IST
  • Facebook
  • Twitter
  • Whatsapp

ಬಾಲಿವುಡ್ (Bollywood) ಚಿತ್ರರಂಗದ ಹಿರಿಯ ನಟ ರಂಜೀತ್ (Ranjeet) 70'ರ ದಶಕದಲ್ಲಿ ತಮಗೆ ಬಂದ 'ರೇಪ್ ಸ್ಪೆಷಲಿಸ್ಟ್‌' (Rape Specalist) ಬಿರುದು ಬಗ್ಗೆ ಮೊದಲ ಬಾರಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.  79 ವರ್ಷದ ರಂಜೀತ್ ಇತ್ತೀಚಿಗೆ ಸೋಷಿಯಲ್ ಮೀಡಿಯಾಕ್ಕೂ (Social Media) ಕಾಲಿಟ್ಟಿದ್ದಾರೆ.  ಹೊಸ ಜನರೇಷನ್‌ನವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇನ್‌ಸ್ಟಾಗ್ರಾಂ (Instagram) ಬೆಸ್ಟ್‌ ಎಂದು ಹೇಳುವ ನಟ, ತಮ್ಮ ಜರ್ನಿ ಹಾಗೂ ಅನೇಕ ವೈಯಕ್ತಿಕ ವಿಚಾರಗಳನ್ನು ಫೋಟೋಗ್ರಾಫ್ (Photograph) ಮೂಲಕ ಅಭಿಮಾನಿಗಳ (fans) ಜೊತೆ ಹಂಚಿಕೊಳ್ಳುತ್ತಾರೆ. 

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಂಜೀತ್ ಅವರ ಮೂಲ ಹೆಸರು ಗೋಪಾಲ್ ಬೇಡಿ (Gopal Bedi). ಚಿತ್ರರಂಗದಲ್ಲಿ ಮಾಡ್ರನ್ ಹೆಸರಿದ್ದರೆ ಮಾತ್ರ ಖ್ಯಾತಿ ಪಡೆಯುವುದು ಎಂಬ ಕಾರಣ ರಂಜೀತ್ ಎಂದು ಬದಲಾಯಿಸಿಕೊಂಡರು. ಚಿತ್ರರಂಗದಲ್ಲಿ ನಟನಾಗಬೇಕು ಎಂದು ಬಂದವ ಗೋಪಾಲ್ ಬೇಡಿ ಅವರಿಗೆ ಇಡೀ ಚಿತ್ರರಂಗ ಸೇರಿಕೊಂಡು ರೇಪ್ ಸ್ಪೆಷಲಿಸ್ಟ್ ಎಂದು ಬಿರುದು ನೀಡಿದೆ. ಈ ಕಾರಣದಿಂದಲೇ ಈಗೀಗ ಧಾರಾವಾಹಿಗಳಲ್ಲಿ (Serials) ಪಾಸಿಟಿವ್ ಪಾತ್ರ (Postive Role)ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ ಎಂದಿದ್ದಾರೆ. 

Bollywood Ranjeet talks about his film life pulling clothes of girls vcs

ರಂಜೀತ್ ಪೇಂಟಿಂಗ್ (painting) ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಆಗಿನ ಕಾಲದಲ್ಲಿ ನನಗೆ ಸ್ಕ್ರಿಪ್‌ ವಿಚಾರದಲ್ಲಿ ಯಾವ ತೊಂದರೆಯೂ ಇರಲಿಲ್ಲ. ಇದು ತಪ್ಪಿದೆ , ಹಾಗೆ ಬೇಡ ಹೀಗೆ ಬೇಡ ಎಂದೂ ಹೇಳಿದವಲ್ಲ. ಆದರೆ ನನ್ನ ಕುಟುಂಬದವರು ಆರಂಭದಲ್ಲಿ ನಾನು ಆರಿಸಿಕೊಳ್ಳುತ್ತಿರುವ ಪಾತ್ರಗಳ ಬಗ್ಗೆ ಬೇಸರವಾಗಿತ್ತು. ಕ್ರಮೇಣ ನನ್ನ ಕೆಲಸ ಇರುವುದೇ ಹೀಗೆ ಎಂದು ಒಪ್ಪಿಕೊಂಡರು, ಎಂದು ರಂಜೀತ್ ಹೇಳಿದ್ದಾರೆ. 

'ನಾನು ಎಂದೂ ನನ್ನ ವೃತ್ತಿ ಜೀವನ (Career) ಪ್ಲಾನ್ ಮಾಡಿದವನಲ್ಲ. ನನ್ನ ಜೀವನದಲ್ಲಿ ಬಂದಿದ್ದಕ್ಕೆ ಹೊಂದಿಕೊಂಡು ಹೋಗುತ್ತಿದ್ದೆ. ನನ್ನ ಜೊತೆ ನಟಿಸುವ ಹೀರೋಯಿನ್‌ಗಳಿಗೆ ಇರಿಸು ಮುರಿಸು ಆಗಬಾರದು ಎಂದು ನನ್ನ ಲೈನ್ ಮೀರಿ ಕಂಫರ್ಟ್ (Comfort) ಕ್ರಿಯೇಟ್ ಮಾಡುತ್ತಿದ್ದೆ. ಅದು ಹೇಗೆ ಬದಲಾಯಿತೆಂದರೆ,  ನಾನು ಸಿನಿಮಾದಲ್ಲಿ ನಟಿಸುತ್ತಿಲ್ಲವಾದರೂ ನನಗೆ ಕರೆ ಮಾಡಿ ರೇಪ್ (Rape) ದೃಶ್ಯವಿದೆ ಬನ್ನಿ ಎಂದು ಹೇಳುತ್ತಿದ್ದರು. ಕೊನೆ ಕೊನೆಯಲ್ಲಿ ನನಗೆ ರೇಪ್‌ ಸ್ಪೆಷಲಿಸ್ಟ್‌ ಎಂದು ಬಿರುದು ನೀಡಿದ್ದರು,' ಎಂದು ರಂಜೀತ್ ಐ-ಟೈಮ್ಸ್‌‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ. 

ನೀರಜ್‌ಗೆ ಎಂಥಾ ಹುಡುಗಿ ಬೇಕು ? ಡ್ಯಾನ್ಸ್‌+ ವೇದಿಕೆಯಲ್ಲಿ ಚಿನ್ನದ ಹುಡುಗ ಹೇಳಿದ್ದಿಷ್ಟು

ಆರಂಭದಲ್ಲಿ ಮುಂಬೈಗೆ (Mumbai) ಆಗಮಿಸಿದ ರಂಜೀತ್, ಸುನೀಲ್ ದತ್ (Sunil dutt) ಹಾಗೂ ರಾಜ್‌ ಕಪೂರ್‌ರನ್ನು (Raj Kapoor) ಅವರನ್ನು ಭೇಟಿ ಮಾಡುತ್ತಾರೆ. ಸ್ನೇಹದಿಂದ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ತಮ್ಮ ಮೊದಲ ಸಿನಿಮಾ ಫ್ಲಾಪ್ ಆದ ಕಾರಣ ದೆಹಲಿಗೆ (Delhi) ಹೋಗಲು ನಿರ್ಧರಿಸುತ್ತಾರಂತೆ. ಸಂಜಯ್ ದತ್ (Sanjay Dutt) ಜೊತೆ 'ರೇಷ್ಮಾ ಔರ್ ಶೆರಾ' ಸಿನಿಮಾದಲ್ಲಿ ನಟಿಸಿದ ನಂತರ ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಹುಡುಕಿಕೊಂಡು ಬಂದವಂತೆ.  ನಟನಾಗಿ ಹೆಸರು ಗಳಿಸುತ್ತಿದ್ದಂತೆ, ರಂಜೀತ್ ಸಿನಿಮಾ ಹಾಗೂ ಧಾರಾವಾಹಿ ನಿರ್ಮಾಣ ಮಾಡಲು ಮುಂದಾಗುತ್ತಾರೆ. ಹೌಸ್‌ಪುಲ್‌, ತ್ರಿಯಾನ್, ದಿಲ್ ದಿಯಾ ಹೇ, ಬೊಂಬೆ ಟು ಗೋವಾ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಂಜೀತ್ ನಟಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Ranjeet (@ranjeetthegoli)

Follow Us:
Download App:
  • android
  • ios