ಇದೇನಪ್ಪಾ ಲಾಕ್‌ಡೌನ್‌ನಲ್ಲಿ ನಟ-ನಟಿಯರು ಕಸರತ್ತು ಮಾಡಿಕೊಂಡು ಫಿಟ್‌ ಆಂಡ್ ಫೈನ್ ಆಗಿದ್ದಾರೆ ಆದರೆ ಇಲ್ಲೊಬ್ಬ ಖ್ಯಾತ ನಟ ಭಿಕ್ಷುಕನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.... 

ಬಾಲಿವುಡ್‌ ಚಿತ್ರರಂಗದಲ್ಲಿ ಅಭಿನಯಿಸುವುದಕ್ಕೆ ವರ್ಷಗಳ ಕಾಲ ಕಾಯಬೇಕು ಒಮ್ಮೆ ಪಾತ್ರ ಕ್ಲಿಕ್‌ ಆದರೆ ಇಡೀ ದುನಿಯಾನೇ ಕೈಯಲ್ಲಿರುತ್ತದೆ ಇಲ್ಲವಾದರೆ ಏನು ಮಾಡಬೇಕೆಂದು ಕಂಗಾಲಾಗಿ ವೆಬ್‌ಸೀರಿಸ್‌ ಅಥವಾ ಕಿರುತೆರೆಗೆ ಜಾರುತ್ತಾರೆ. ಆದರೆ ಈ ನಟ ಕೈ ತುಂಬಾ ಅವಕಾಶ ಇಟ್ಟುಕೊಂಡು ಈ ರೀತಿಯಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿರುವುದು ಹಲವರಿಗೆ ಶಾಕ್‌ ನೀಡಿದೆ....

ಭಿಕ್ಷುಕನ ಪಾತ್ರದಲ್ಲಿ ರಣದೀಪ್:

ಹೌದು! ವೈರಲ್‌ ಆಗುತ್ತಿರುವ ಫೋಟೋದಲ್ಲಿ ಇರುವ ನಟ ಇನ್ಯಾರು ಅಲ್ಲ ಬಾಲಿವುಡ್‌ ಮಾಸ್‌ ಮ್ಯಾನ್‌ ರಣದೀಪ್‌ ಹೂಡಾ. ನಾಲ್ಕು ವರ್ಷಗಳ ಬಿ-ಟೌನ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ 'ಸರಬ್ಜಿತ್' ಚಿತ್ರಕ್ಕಾಗಿ ಮಾಡಿಸಿಕೊಂಡ ಮೇಕಪ್‌ ಇದು. ಈ ಚಿತ್ರಕ್ಕಾಗಿ ಅತಿ ಹೆಚ್ಚು ಸಮಯಗಳ ಕಾಲ ಕಸರತ್ತು ಮಾಡಿ ಗಟಿ ಮುಟ್ಟಾದ ಮೈಕಟ್ಟನ್ನು ಮಾಡಿಕೊಂಡು ಭಿಕ್ಷುಕನ ಅವತಾರದಲ್ಲಿ ಕಾಣಿಸಿಕೊಂಡರು.

View post on Instagram

ಚಿತ್ರದ ಸನ್ನಿವೇಶವೊಂದರಲ್ಲಿ ರಣದೀಪ್‌ ಹೂಡಾ ಮೈಯಲ್ಲಾ ಪೆಟ್ಟು ಬಿದ್ದ ಹಾಗೆ ಮೇಕಪ್‌ ಮಾಡಿಸಿಕೊಂಡಿದ್ದರು.

ವೇಟ್‌ ಲಾಸ್ ಸ್ಟೋರಿ:

ಚಿತ್ರದಲ್ಲಿ ರಣದೀಪ್‌ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗಕ್ಕಾಗಿ 90 ಕೆ.ಜಿ ಇದ್ದರಂತೆ ಎರಡನೇ ಭಾಗಕ್ಕೆ 50 ಕೆ.ಜಿ ತೂಕ ಮಾಡಿಕೊಳ್ಳಬೇಕಾಗಿತ್ತು. ಕಡಿಮೆ ಅವಧಿಯಲ್ಲಿ ಮಾಡಿದ ಕಸರತ್ತು ಪ್ರಾಣವೇ ಹೋಗುವಂತೆ ಮಾಡಿತ್ತು ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಈ ಪೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

View post on Instagram

ಪ್ರಾಣಿ ಪ್ರಿಯೆ:

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ಹೇಗೊ ಹಾಗೆ ರಣದೀಪ್‌ಗೂ ಪ್ರಾಣಿಗಳೆಂದರೆ ತುಂಬಾನೇ ಇಷ್ಟವಂತೆ. ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ತನ್ನ ನೆಚ್ಚಿನ ಸಾಕು ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ. ಅಷ್ಟೆ ಅಲ್ಲದೆ UN ಪರಿಸರ ಕಾರ್ಯಕ್ರಮದ Convention on Migratory Speciesನ ರಾಯಭಾರಿ ಇವರು. 

ಒಟ್ಟಿನಲ್ಲಿ ರಣದೀಪ್‌ ಲುಕ್‌ ಲಾಕ್‌ಡೌನ್‌ನಲ್ಲಿದ ಜನರ ನಿದ್ದೆ ಗೆಡಿಸಿದೆ.