ಚಿತ್ರಕತೆ ಹಾಗೂ ಹಾಡುಗಳನ್ನು ಪಡೆದು, ಸಂಪರ್ಕಿಸಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸೂರತ್‌ನ ಲೇಖಕಿಯೊಬ್ಬರು ನಟ ರಣದೀಪ್ ಹೂಡಾ ದೂರು ನೀಡಿದ್ದಾರೆ.   

ಮರ್ಡರ್ 3, ಕಿಕ್, ಲವ್ ಆಜ್‌ ಕಲ್ ಸೇರಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹಿಂದಿ ಸಿನಿ ರಸಿಕರನ್ನು ಮನೋರಂಜಿಸುತ್ತಿರುವ ರಣದೀಪ್ ಹೂಡಾ ವಿರುದ್ಧ ಸೂರತ್‌ನ ಲೇಖಕಿ, , ಗೀತರಚನೆಕಾರ್ತಿ ಪ್ರಿಯಾಂಕಾ ಶರ್ಮಾ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಿಸಿ, ದೂರು ದಾಖಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಸೆಕ್ಸ್ ಪೊಜಿಶನ್' ಮಾಯಾವತಿ ಮೇಲೆ ಅಶ್ಲೀಲ ಕಮೆಂಟ್, ಹೂಡಾಗೆ ಗೇಟ್ ಪಾಸ್!

ಸಾಮಾಜಿಕ ಜಾಲತಾಣದ ಮೂಲಕ ಪ್ರಿಯಾಂಕಾ ಮತ್ತು ರಣದೀಪ್ ಪರಿಚಯವಾಗಿತ್ತು. ಪ್ರಿಯಾಂಕಾ ಮೂಲಕ ಅನೇಕ ಸಿನಿಮಾ ಕಥೆಗಳು ಹಾಗೂ ಹಾಡುಗಳನ್ನು ರಣದೀಪ್ ಪಡೆದುಕೊಂಡಿದ್ದಾರೆ. ಆದರೆ ಯಾವುದನ್ನೂ ಬಳಸಿಕೊಂಡಿಲ್ಲ ಬೇರೆಯವರಿಗೆ ನೀಡಬೇಕೆಂದರೂ ಅವರು ನೀಡುತ್ತಿಲ್ಲ. ಬದಲಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸುತ್ತಿದ್ದಾರೆ. 10 ವರ್ಷಗಳಿಂದಲೂ ಇದೇ ರೀತಿ ಸತಾಯಿಸುತ್ತಿದ್ದಾರೆ, ಎಂದು 10 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಇ-ಮೇಲ್ ಮೂಲಕ ದೂರಿನ ಬಗ್ಗೆ ಹೂಡಾ ಅವರನ್ನು ಸಂಪರ್ಕಿಸಿದ್ದಾರೆನ್ನಲಾಗಿದೆ. 

'ರಣದೀಪ್ ಹೂಡಾ ನನ್ನನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದರು. ತಾನು ಬರೆದಿದ್ದ ಬಹಳ ಕಥೆಗಳನ್ನು ಕಳುಹಿಸಿದ್ದೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭಿಸೋಣ ಎಂದಿದ್ದರು. ಒಟ್ಟು 1200 ಹಾಡುಗಳು ಮತ್ತು 40 ಕತೆಗಳನ್ನು ರಣದೀಪ್ ಹೂಡಾ, ಆಶಾ ಹೂಡಾ, ಮಂದೀಪ್ ಹೂಡಾ, ಅಜ್ಲಿ ಹೂಡಾ, ಮನೀಶ್, ರಣದೀಪ್ ಮ್ಯಾನೇಜರ್ ಪಾಂಚಾಲಿ ಔಧರಿ, ಮೇಕಪ್ ಆರ್ಟಿಸ್ಟ್ ರೇಣುಕಾ ಪಿಳೈ ಅವರಿಗೆ ವಾಟ್ಸಾಪ್ ಮತ್ತು ಮೇಲ್ ಮೂಲಕ ಕಳುಹಿಸಿದ್ದೇನೆ. ಈ ಘಟನೆ ನಡೆದು ವರ್ಷಗಳು ಕಳೆದಿವೆ. ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಲ್ಲ. ತಮ್ಮ ಕಥೆ ಮತ್ತು ಹಾಡುಗಳನ್ನು ವಾಪಸ್ ಕಳುಹಿಸಿ, ಎಂದು ಅವರ ತಂಡವನ್ನು ಸಂಪರ್ಕಿಸಿದರೆ, ಜೀವ ಬೆದರಿಕೆ ಹಾಕ್ತಿದ್ದಾರೆ,' ಎಂದು ಪ್ರಿಯಾಂಕಾ ದೂರು ನೀಡಿದ್ದಾರೆ.