ಕೆನಡಿಯನ್ ಡ್ಯಾನ್ಸರ್‌, ಮಾಡೆಲ್ ಕಮ್ ನಟಿ ನೋರಾ ಫತೇಹಿ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. 28 ವರ್ಷದ ಚೆಲುವೆ ಇನ್ನೂ ಸಿಂಗಲ್ಲಾ ಅಥವಾ ಇನ್‌ ರಿಲೇಶನ್‌ಶಿಪ್ ಆ? ಅಂತ ಇದುವರೆಗೂ ಯಾರಿಗೂ ಗೊತ್ತಿಲ್ಲ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಹುಡುಗನೊಬ್ಬನ ವಿಡಿಯೋ ಶೇರ್ ಮಾಡಿಕೊಂಡು ಮದುವೆಯಾಗುವುದಾಗಿ ರಿವೀಲ್ ಮಾಡಿದ್ದಾರೆ.

'ದಿಲ್ಬರ್‌' ಹಾಡಿನಲ್ಲಿ ಸಿಕ್ಕಾಪಟ್ಟೆ ಹೆಜ್ಜೆ ಹಾಕಿರುವ ನೋರಾ ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಲೇ ಇರುತ್ತಾರೆ. ಚಿತ್ರರಂಗದಲ್ಲಿ ಆಕೆಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ 'ಸತ್ಯಮೇವಾ ಜಯತೆ'.  ಅಂದಿನಿಂದ ಯಾರೇ ಆದರೂ ಆಕೆಯನ್ನು ದಿಲ್ಬರ್ ಲಡ್ಕಿ.. ಎಂದೇ ಕರೆಯುತ್ತಾರೆ. ಹಾಗಾದ್ರೆ ವಿಡಿಯೋದಲ್ಲಿ ಪುಟ್ಟ ಹುಡುಗ ಹೇಳಿರುವುದು ಏನು?

 

'ನೀನು ಯಾರನ್ನು ಮದುವೆಯಾಗುತ್ತೀಯಾ' ಎಂದು ಪುಟ್ಟ ಹುಡುಗನ ತಾಯಿ ಪ್ರಶ್ನಿಸಿದಾಗ, ಆತ ' ನಾನು ದಿಲ್ಬರ್ ಹುಡುಗಿಯನ್ನು ಮದುವೆಯಾಗುತ್ತೇನೆ..' ಎಂದು ಹೇಳಿದ್ದಾನೆ. ಈ ವಿಡಿಯೋ ಶೇರ್ ಮಾಡಿ ನೋಡಿ 'ಗೆಳಯರೇ!! ನನಗೆ ಗಂಡ ಸಿಕ್ಕಿದ್ದಾನೆ, ನಾವು ಮದುವೆಯಾಗುತ್ತಿದ್ದೀವಿ,' ಎಂದು ನೋರಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರೋಚಕ ಸುದ್ದಿ ವರದಿ ಮಾಡುತ್ತಿದ್ದ ಖ್ಯಾತ ಪತ್ರಕರ್ತೆ ಅಪಘಾತದಲ್ಲಿ ಸಾವು!

2014ರಲ್ಲಿ ಟೈಗರ್ ಆಫ್ ಸುಂದರ್‌ ಬನ್ಸ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನೋರಾ, ಹಿಂದಿ ಬಿಗ್ ಬಾಸ್‌ ಸೀಸನ್‌9ರಲ್ಲಿ ಸ್ಪರ್ಧಿಸಿದ್ದರು.