ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂ ಫೋಸ್ಟ್‌ಗೆ ಕಾಮೆಂಟ್ ಮಾಡಿದ ಕಾರ್ತಿಕ್ ಆರ್ಯನ್. ಇಲ್ಲಿ ಅತಿ ಹೆಚ್ಚು ಕ್ಲೀನ್ ಯಾರೆಂದು ಕನ್ಫ್ಯೂಸ್ ಆದ ನೆಟ್ಟಿಗರು....

ಬಾಲಿವುಡ್‌ ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಬೇಕೆಂದು ಡಿಮ್ಯಾಂಡ್‌ ಮಾಡಿದ ಅಭಿಮಾನಿಗಳು ಈಗ ಆಕೆ ಅಪ್ಲೋಡ್ ಮಾಡುತ್ತಿರುವ ಫೋಟೋ ಸೀರಿಸ್ ನೋಡಿ ಶಾಕ್ ಆಗಿದ್ದಾರೆ. ಅದರಲ್ಲೂ ಕೇಕ್ ಮುಂದೆ ಕುಳಿತು ಸ್ಪೂನ್ ದಿಟ್ಟಿಸಿ ನೋಡುತ್ತಿದ್ದ ಬೂಮರಾಂಗ್ ವೈರಲ್ ಆಗುತ್ತಿದೆ.

ರಣವೀರ್‌ ಬೆಡ್‌ರೂಮ್‌ ಸಿಕ್ರೇಟ್‌ ರೀವಿಲ್‌ ಮಾಡಿದ ಪತ್ನಿ ದೀಪಿಕಾ

ಇನ್ಸ್ಟಾ ಪೋಸ್ಟ್‌:

'ವಾರವಿಡೀ ಕೇಕ್‌ ತಿನ್ನಲು ರೆಡಿಯಾಗುವ ಮುನ್ನ ಚೆಕ್ ಮಾಡಿಕೊಳ್ಲುತ್ತಿರುವೆ' ಎಂದು ಬರೆದುಕೊಂಡಿದ್ದಾರೆ. ಎಲ್ಲರೂ ದೀಪಿಕಾ ಔಟ್‌ಫಿಟ್‌ ಮತ್ತು ಕೇಕ್‌ ನೋಡಿದರೆ ನಟ ಕಾರ್ತಿಕ್ ಆರ್ಯನ್‌ ಮಾತ್ರ ದೀಪಿಕಾ ಕೈಯಲ್ಲಿದ್ದ ಸ್ಪೂನ್ ಎಷ್ಟು ಕ್ಲೀನ್ ಆಗಿದೆ ಎಂದು ಗಮನಿಸಿದ್ದಾರೆ. 

View post on Instagram

'ನಿಮ್ಮ ಸ್ಪೂನ್ ಎಷ್ಟು ಕ್ಲೀನ್ ಆಗಿದೆ' ಎಂದು ಕಾರ್ತಿಕ್ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ದೀಪಿಕಾ 'ಒಮ್ಮೆಯಾದರೂ ನನ್ನನ್ನು ಭೇಟಿ ಮಾಡಿದ್ದೀರಾ'? ಎಂದು ಪ್ರಶ್ನಿಸಿದ್ದಾರೆ. ಇವರಿಬ್ಬರ ಕಾಮೆಂಟ್ ಸಂಭಾಷಣೆಗೆ 541 ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಕಾರಣ ದೀಪಿಕಾಗೆ OCD ಇರುವುದು. ಹೌದು! OCD ಅಂದ್ರೆ ಒಬ್ಬ ವ್ಯಕ್ತಿ ಎಲ್ಲ ವಿಚಾರದಲ್ಲೂ ಕ್ಲೀನ್ ಇರಬೇಕೆಂದು ಬಯಸುತ್ತಾರೆ. ಒಂದು ಸಣ್ಣ ಕಸ ಕಂಡರೂ ಸಹಿಸುವುದಿಲ್ಲ ಸದಾ ಕ್ಲೀನ್ ಮಾಡುತ್ತಾ ಸಮಯ ಕಳೆಯುತ್ತಾರೆ.

ಕೇಕ್ ಯಾಕೆ?

ಜುಲೈ 6ರಂದು ನಟ ರಣವೀರ್ ಸಿಂಗ್ ಬರ್ತಡೇ ಇದ್ದ ಕಾರಣ ಮನೆ ತುಂಬಾ ಕೇಕ್‌ಗಳು ತುಂಬಿವೆ. ದಿನಾ ಒಂದೊಂದು ವೆರೈಟಿ ಕೇಕ್‌ಗಳನ್ನು ದೀಪಿಕಾ ತಯಾರಿಸಿ ಸವಿಯುತ್ತಾ ಕಾಲ ಕಳೆಯುತ್ತಿದ್ದಾರೆ.