ಬಾಲಿವುಡ್‌ ಚಿತ್ರರಂಗದಲ್ಲಿ ಸಿಕ್ಸ್‌ ಪ್ಯಾಕ್ಸ್‌ ಕ್ರೇಜ್‌ ಕ್ರಿಯೇಟ್‌ ಮಾಡಿದ ಜಾನ್‌ ಅಬ್ರಹಂ ಹಾಗೂ ವರುಣ್‌ ದವನ್‌ ಸೂಪರ್ ಹಿಟ್‌ ಸಿನಿಮಾ 'ಡಿಶುಂ' ತೆರೆ ಕಂಡು 4 ವರ್ಷಗಳನ್ನು ಪೂರೈಸಿದೆ. ಈ ಪ್ರಯುಕ್ತ ವರುಣ್‌ ದವನ್‌ ಯಾರಿಗೂ ತಿಳಿಯದ ಸತ್ಯವನ್ನು ತೆರೆದಿಟ್ಟಿದ್ದಾರೆ.

ಜಾನ್ ಅಬ್ರಹಾಂ ಬಳಿ ಇದೆ 6 ಸೂಪರ್ ಬೈಕ್!

ಜುಲೈ 29,2016ರಲ್ಲಿ ತೆರೆ ಕಂಡ ಡಿಶುಂ ಚಿತ್ರದ ಪ್ರಮುಖ ಸನ್ನಿವೇಷವನ್ನು ವಿದೇಶದ ಬೀಚ್‌ವೊಂದರಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಂದರ್ಭದ ಫೋಟೋವನ್ನು ವರಣ್ ಅಪ್ಲೋಡ್ ಮಾಡಿ ಜಾನ್‌ ಬಗ್ಗೆ ಹಾಗೂ ಅವರು ತಿನ್ನುವ ಆಹಾರದ ಬಗ್ಗೆ ಬರೆದಿದ್ದಾರೆ.

'ಡಿಶುಂ ಚಿತ್ರಕ್ಕೆ ನಾಲ್ಕು ವರ್ಷ.  ನಾನು ಕೆಲಸ ಮಾಡಿದ ಬೆಸ್ಟ್‌ ಟೀಂ ಇದಾಗಿದ್ದು. ಇಬ್ಬರು ಸಹೋದರರು ನನ್ನ ಬೆನ್ನೆಲುಬಾಗಿ ನಿಂತಿದ್ದರು.  ಇದೇ ತಂಡದ ಜೊತೆ ಮತ್ತೊಮ್ಮೆ ಕೆಲಸ ಮಾಡಬೇಕು. ಅಷ್ಟೆೇ ಅಲ್ಲದೆ ಈ ಬೀಚ್‌ ಕಮ್ ಡೆಸರ್ಟ್‌ ಶೂಟಿಂಗ್‌ ಸ್ಪಾಟ್‌ನಲ್ಲಿ ಜಾನು 21 ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು,' ಎಂದು ಪೋಸ್ಟ್ ಮಾಡಿದ್ದಾರೆ.  ಕೇಸರಿ ಬಣ್ಣದ ಚಡ್ಡಿ ಧರಿಸಿ ಗಮನ ಸೆಳೆದ ವರುಣ್‌-ಜಾನ್‌ ಫೋಟೋಗೆ ನೆಟ್ಟಿಗರು ನಾನ್‌-ಸ್ಟಾಪ್‌ ಕಾಮೆಂಟ್ ಮಾಡುತ್ತಿದ್ದಾರೆ. ಬಿಸಿಲು ತಡೆಯಲಾಗದೆ ಜಾನ್‌ ಪರಪಾಡುತ್ತಿದ್ದ ವಿಚಾರದ ಬಗ್ಗೆಯೂ ಅಭಿಮಾನಿಗಳು ಪ್ರಶ್ನಿಸಿದ್ದಾರೆ. 

 

ರೋಹಿತ್ ದವನ್ ನಿರ್ದೇಶನ, ಸಜಿದ್‌ ನಿರ್ಮಾಣದ ಈ 45 ಕೋಟಿ ರೂ. ಬಜೆಟ್‌ ಚಿತ್ರ ಇದಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ 150 ಕೋಟಿ ಬಾಚುವಲ್ಲಿ ಯಶಸ್ವಿಯಾಗಿತ್ತು. ನಾಯಕಿಯಾಗಿ ಜಾಕ್ವೆಲಿನ್ ಹಾಗೂ ನರ್ಗಿಸ್‌ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.