ಮುಂಬೈ (ನ. 05): ಏಕಾಂಗಿಯಾಗಿ ಭೇಟಿ ಮಾಡಬೇಕೆಂಬ ನಟರೊಬ್ಬರ ಕೋರಿಕೆಗೆ ಒಪ್ಪದಿದ್ದಕ್ಕೆ ಸಿನಿಮಾದಲ್ಲಿ ನಟಿಸುವ ಅವಕಾಶ ತಪ್ಪಿ ಹೋಯಿತು ಎಂದು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ನಟಿಸಿರುವ ಚಿತ್ರ ನಟಿ ಇಶಾ ಕೊಪ್ಪಿಕ್ಕರ್‌ ಹೇಳಿದ್ದಾರೆ. ಆ ಮೂಲಕ ತಣ್ಣಗಾಗಿದ್ದ ಮೀಟೂ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.

#MeToo ಗೆ ಒಂದು ವರ್ಷ; ' ವಿ ದ ವುಮೆನ್' ಸೆಮಿನಾರ್ ನಲ್ಲಿ ಶೃತಿ ಹರಿಹರನ್ ತಾಯಿ ಭಾವುಕ

ತಮ್ಮ ಬಾಲಿವುಡ್‌ ಪಯಣದ ಬಗ್ಗೆ ಮಾತನಾಡುತ್ತಾ ಇಶಾ ಈ ವಿಚಾರ ಪ್ರಸ್ತಾಪಿಸಿದ್ದು, ನಿರ್ಮಾಪಕರೊಬ್ಬರು ಸಹನಟರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕೆಂದು ಹೇಳಿದ್ದರು. ಅಲ್ಲದೇ ಸಿನಿಮಾ ಸಂಬಂಧ ನಟರೋರ್ವರಿಗೆ ಕರೆ ಮಾಡಿ ಮಾತನಾಡಬೇಕು ಎಂದು ಹೇಳಿದ್ದರು. ಅವರಿಗೆ ನಾನು ಕರೆ ಮಾಡಿದಾಗ, ಯಾರೆಲ್ಲಾ ಬರುತ್ತೀದ್ದೀರಿ ಎಂದು ಕೇಳಿದರು.

ದೇಹವನ್ನು ಇಂಚಿಂಚೂ ನೋಡಬೇಕಿಂದಿದ್ದ ನಿರ್ದೇಶಕ: ನಟಿ ಆರೋಪ

ಡ್ರೈವರ್‌ ಜತೆ ಬರುತ್ತೇನೆ ಎಂದು ಹೇಳಿದ್ದೆ. ನೀವೊಬ್ಬರೆ ಬನ್ನಿ, ಅವರೆಲ್ಲಾ ಬಂದರೆ ವದಂತಿಗಳನ್ನು ಹಬ್ಬಿಸುತ್ತಾರೆ ಎಂದು ಹೇಳಿದ್ದರು. ಅವರ ಮಾತು ಕೇಳಿ ಅವರ ಉದ್ದೇಶ ನನಗೆ ಅರ್ಥವಾಗದೇ ಇರಲಿಲ್ಲ. ಇದಾದ ಬಳಿಕ ನಿರ್ಮಾಪಕರಿಗೆ ಕರೆ ಮಾಡಿ, ಒಂದು ಪಾತ್ರಕ್ಕಾಗಿ ಹೀಗೆಲ್ಲಾ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ನಿರ್ಮಾಪಕರಿಗೆ ತಿಳಿಸಿದ್ದೇನೆ ಎಂದು ಇಶಾ ಹೇಳಿದ್ದಾರೆ. ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ ಮತ್ತಿತರ ಸಿನಿಮಾಗಳಲ್ಲಿ ಇಶಾ ನಟಿಸಿದ್ದಾರೆ.

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: