ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಆಪ್ತ, ಡ್ರಗ್ಸ್ ಪೂರೈಕೆದಾರನ ಬಂಧನ ಇತ್ತ ಆರ್ಯನ್ ಖಾನ್ NCB ಕಸ್ಟಡಿ ವಿಸ್ತರಿಸಿದ ಮುಂಬೈ ಕೋರ್ಟ್ ಬಾಲಿವುಡ್ ಡ್ರಗ್ಸ್ ಪಾರ್ಟಿ ಸ್ಫೋಟಕ ಮಾಹಿತಿ ಬಹಿರಂಗ
ಮುಂಬೈ(ಅ.04): ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇಂದು ಆರ್ಯನ್ ಖಾನ್‌ಗೆ ತೀವ್ರ ಹಿನ್ನಡೆಯಾಗಿದೆ. ಒಂದೆಡೆ ಆರ್ಯನ್ ಆಪ್ತ, ಡ್ರಗ್ಸ್ ಪೂರೈಕೆ ಮಾಡುತ್ತಿದ್ದವನ ಬಂಧಿಸಲಾಗಿದೆ. ಇತ್ತ ಜಾಮೀನು ನಿರೀಕ್ಷೆಯಲ್ಲಿದ್ದ ಆರ್ಯನ್‌ಗೆ ಮುಂಬೈ ಕೋರ್ಟ್ ಶಾಕ್ ನೀಡಿದೆ.
ಡ್ರಗ್ಸ್ ಮಾಫಿಯಾ: ಈ ಸಂಕಷ್ಟದಿಂದ ಪಾರಾಗ್ತಾನಾ ಶಾರುಖ್ ಪುತ್ರ ಆರ್ಯನ್?
ಕ್ರ್ರೂಸ್ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ್ದ NCB ಅಧಿಕಾರಿಗಳು ಡ್ರಗ್ಸ್ ಬಳಕೆ ಮಾಡುತ್ತಿದ್ದ ಸೆಲೆಬ್ರೆಟಿಗಳನ್ನ ಬಂಧಿಸಿದ್ದರು. ಆರ್ಯನ್ ಖಾನ್ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದ ಅಧಿಕಾರಿಗಳು ಎರಡನೇ ದಿನವೂ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇದರ ನಡುವೆ ಆರ್ಯನ್ ಖಾನ್ ಸೇರಿದಂತೆ ಬಂಧಿತರ ಕಸ್ಟಡಿ ಅವಧಿ ಮುಗಿದ ಕಾರಣ ಇಂದು ಸಂಜೆ ಮುಂಬೈ ಕೋರ್ಟ್‌ಗೆ ಹಾಜರುಪಡಿಸಾಯಿತು. ಈ ವೇಳೆ ಮುಂಬೈ ಕೋರ್ಟ್ ಆರ್ಯನ್ ಸೇರಿದಂತೆ ಇತರ ಬಂಧಿತರ NCB ಕಸ್ಟಡಿ ಅವಧಿಯನ್ನು ಅಕ್ಟೋಬರ್ 7ರ ವರೆಗೆ ವಿಸ್ತರಿಸಿದೆ.
ನಟನಾಗಲು ಇಷ್ಟಪಡದ ಆರ್ಯನ್: ಬಾಲಿವುಡ್ ಕಿಂಗ್ ಪುತ್ರನ ಕಥೆ-ವ್ಯಥೆ!
ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್‌ಮನ್ ದರ್ಮೆಚಾ ಅವರ ಕಸ್ಟಡಿ ಅವಧಿಯನ್ನು ಅಕ್ಟೋಬರ್ 7ರ ವರೆಗೆ ವಿಸ್ತರಿಸಿದೆ. ಆರ್ಯನ್ ಖಾನ ಪರ ವಕೀಲ ಸತೀಶ್ ಮಾನೆಶಿಂದೆ ಜಾಮೀನಿಗಾಗಿ ಹಲವು ಪ್ರಯತ್ನ ನಡೆಸಿದರು. ಆದರೆ ಎಲ್ಲಾ ಸಾಕ್ಷ್ಯಗಳು ಆರ್ಯನ್‌ಗೆ ವಿರುದ್ಧವಾಗಿದೆ. ಹೀಗಾಗಿ ಸದ್ಯಕ್ಕೆ ಜಾಮೀನು ಪಡೆಯುವ ಶಾರುಖ್ ಖಾನ್ ಕುಟುಂಬದ ಹಂಬಲ ಕೈಗೂಡಿಲ್ಲ.
ಆರ್ಯನ್ ಹಾಗೂ ಮೂವರ ಜೊತೆಗೆ ಇಸ್ಮೀತ್ ಸಿಂಗ್, ನೂಪರ್ ಸಾರಿಕಾ, ವಿಕ್ರಾಂತ್ ಚೋಕರ್, ಮೊಹಕ್ ಜಸ್ವಾಲ್, ಗೋಮಿತ್ ಚೋಪ್ರಾ ಅವರನ್ನು NCB ಅಧಿಕಾರಿಗಳು ವಶಕ್ಕೆ ಪೆಡೆದಿದ್ದರು. ಈ ಐವರ ತನಿಖೆ ಚುರುಕುಗೊಂಡಿದೆ.
2 ನಿಮಿಷ ಮಗನೊಂದಿಗೆ ಶಾರುಖ್ ಮಾತು, ಕೊಟ್ರು ಆ ಒಂದು ಸಲಹೆ!
ಈ ಬೆಳವಣಿಗೆ ಜೊತೆ NCB ಅಧಿಕಾರಿಗಳು ಮತ್ತೊಂದು ಮಿಕ ಬಲೆಗೆ ಬೀಳಿಸಿದೆ. ಆರ್ಯನ್ ಖಾನ್ ಆಪ್ತ, ನಿರಂತರ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಶ್ರೇಯಸ್ ನಾಯರ್‌ನ್ನು ಅಧಿಕಾರಿಗಳು ಬಂಧಿಸಿದ್ದಾರೆ. ರೇವ್ ಪಾರ್ಟಿಯಲ್ಲಿ ಆರ್ಯನ್ ಖಾನ್ ಸೇರಿದಂತೆ 25 ಸೆಲೆಬ್ರೆಟಿಗಳಿಗೆ ಶ್ರೇಯಸ್ ಅಯ್ಯರ್ ಡ್ರಗ್ಸ್ ಪೂರೈಕೆ ಮಾಡಿದ್ದ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ ಮೂಲಕ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಶ್ರೇಯಸ್ ನಾಯರ್ ಇದೀಗ ರೇವ್ ಪಾರ್ಟಿ ಕುರಿತ ಹಲವು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
