ಇವರು ಕಾಲೇಜಿಗೂ ಹೋಗದ ಬಾಲಿವುಡ್‌ ಸೆಲೆಬ್ರಿಟಿಗಳು!

ಬಾಲಿವುಡ್‌ನ ಕೆಲವು ಫೇಮಸ್‌ ಸೆಲೆಬ್ರಟಿಗಳು ತಮ್ಮ ವೃತ್ತಿಜೀವನಕ್ಕಾಗಿ ತಮ್ಮ ಕಾಲೇಜು ಶಿಕ್ಷಣವನ್ನೇ ತ್ಯಾಗ ಮಾಡಿದ್ದಾರೆ. ಕೆಲವರು ಆರನೇ ಕ್ಲಾಸಿಗಿಂತಲೂ ಹೆಚ್ಚು ಓದಿಲ್ಲ. ಅಂಥ ಸೆಲೆಬ್ರಿಟಿಗಳು ಯಾರು? ನೋಡೋಣ.

Bollywood celebrities Akshay Kumar Kajol Aishwarya Rai Salman Khan least educated

ಹಿಂದಿ ಚಲನಚಿತ್ರ ರಂಗದಲ್ಲಿ ಅನೇಕ ಹೆಸರಾಂತ ನಟ- ನಟಿಯರಿದ್ದಾರೆ. ಜೀವನದಲ್ಲಿ ಭಾರಿ ಯಶಸ್ವಿಯಾದ ಇವರು ವಿದ್ಯಾಭ್ಯಾಸದಲ್ಲಿ ಮಾತ್ರ ಹೆಚ್ಚೇನೂ ಸಕ್ಸಸ್ ಪಡೆದವರಲ್ಲ. ಅನೇಕರು ಬಾಲಿವುಡ್‌ನಲ್ಲಿ ಉಳಿದು ಬೆಳೆಯಲು ಶಾಲೆ- ಕಾಲೇಜಿನ ಶಿಕ್ಷಣವನ್ನೇ ತ್ಯಾಗ ಮಾಡಿದ್ದಾರೆ. ಹಾಗೆ ತಮ್ಮ ವೃತ್ತಿಜೀವನಕ್ಕಾಗಿ ತಮ್ಮ ವಿದ್ಯಾಭ್ಯಾಸವನ್ನು ತೊರೆದ ಸೆಲೆಬ್ರಿಟಿಗಳು ಯಾರು? ನೋಡೋಣ.

ಕರಿಷ್ಮಾ ಕಪೂರ್
ನಟರಾದ ರಣಧೀರ್ ಕಪೂರ್ ಮತ್ತು ಬಬಿತಾ ಕಪೂರ್‌ರ ಇಬ್ಬರು ಹೆಣ್ಣು ಮಕ್ಕಳಲ್ಲಿ ಕರಿಷ್ಮಾ ದೊಡ್ಡವಳು. ಬಾಲಿವುಡ್‌ನ ಖ್ಯಾತ ಕಪೂರ್ ಕುಟುಂಬಕ್ಕೆ ಸೇರಿದ ಆಕೆ ಬಾಲ್ಯದಿಂದಲೇ ದೊಡ್ಡ ನಟಿಯಾಗಲೆಂದೇ ಹುಟ್ಟಿದಂತಿತ್ತು. ಬಾಲನಟಿಯಾಗಿ ಹಿಂದಿ ಫಿಲಂ ಪ್ರವೇಶಿಸಿದ ಆಕೆಗೆ 1991ರಲ್ಲಿ ಪ್ರೇಮ್ ಕೈದಿ ಚಿತ್ರದ ಮೂಲಕ ಆಕೆಗೆ ದೊಡ್ಡ ಬ್ರೇಕ್ ಸಿಕ್ಕಿತು. ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯಲ್ಲಿ 6ನೇ ತರಗತಿವರೆಗೆ ಓದಿದ ನಂತರ ಆಕೆ ತನ್ನ ಶಿಕ್ಷಣವನ್ನು ತೊರೆದಳು. ರಾಜಾ ಹಿಂದುಸ್ತಾನಿ, ಕೂಲಿ ನಂ.1, ದಿಲ್ ತೋ ಪಾಗಲ್ ಹೈ, ಜುಬೇದಾ, ಫಿಜಾ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾಳೆ.
 

Bollywood celebrities Akshay Kumar Kajol Aishwarya Rai Salman Khan least educated

ಶ್ರೀದೇವಿ
ಶ್ರೀದೇವಿ ಚಿತ್ರರಂಗದಲ್ಲಿ ತಮ್ಮ ಪಯಣವನ್ನು ಬಹಳ ಬೇಗನೇ ಆರಂಭಿಸಿದಳು. ಅವಳು ಮಗುವಾಗಿದ್ದಾಗಲೇ ಹಲವಾರು ಬಾಲಿವುಡ್ ಮತ್ತು ಪ್ರಾದೇಶಿಕ ಚಲನಚಿತ್ರಗಳಲ್ಲಿ ನಟಿಸಿದಳು. ನಟಿಯಾಗಿ ಆಕೆಯ ಯಶಸ್ಸು ಪ್ರೌಢಾವಸ್ಥೆಗೆ ಬಂದ ನಂತರವೂ ಮುಂದುವರಿಯಿತು. ಬಾಲನಟಿಯಾಗಿಯೇ ಯಶಸ್ಸು ಕಂಡು ಹಾಗೇ ಮುಂದುವರಿದಿದ್ದರಿಂದಾಗಿ, ಅವಳು ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆಕೆ ತನ್ನ ಶಾಲಾ ವಿದ್ಯಾಭ್ಯಾಸವನ್ನು ಕೂಡ ಮುಗಿಸಿಲ್ಲ ಎಂದು ಊಹಿಸಲಾಗಿದೆ. ಆದರೂ ಆಕೆ ಅತ್ಯಂತ ಸಕ್ಸಸ್‌ಫುಲ್‌ ನಟಿ. ಅವರ ಗಮನಾರ್ಹ ಫಿಲಂಗಳು ಮಿಸ್ಟರ್ ಇಂಡಿಯಾ, ಜುದಾಯಿ, ಇಂಗ್ಲಿಷ್ ವಿಂಗ್ಲಿಷ್ ಇತ್ಯಾದಿ.
 

Bollywood celebrities Akshay Kumar Kajol Aishwarya Rai Salman Khan least educated

ಕಾಜೋಲ್
ಕಾಜೋಲ್‌ಗೆ ತಾನು ಹದಿನಾರು ವರ್ಷದವಳಿದ್ದಾಗ ನಟಿಸಿದ ಬೇಖುದಿ ಚಲನಚಿತ್ರ ದೊಡ್ಡ ಸಕ್ಸಸ್ ನೀಡಿತು. ಅವಳು ಆ ಸಮಯದಲ್ಲಿ ಪಂಚಗನಿಯಲ್ಲಿರುವ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಳು. ಈ ಸಿನಿಮಾದ ಚಿತ್ರೀಕರಣದ ನಂತರ ಶಾಲೆಗೆ ಮರಳುವುದು ಅವಳ ಉದ್ದೇಶವಾಗಿತ್ತು. ಆದರೆ ಇದಾದ ನಂತರ ಅವಳಿಗೆ ನಟನೆಯ ಆಫರ್‌ಗಳ ಮಳೆಯಾಯಿತು. ಹೀಗಾಗಿ ಮತ್ತೆಂದೂ ಶಾಲೆಗೆ ಮರಳಲು ಆಕೆಗೆ ಸಾಧ್ಯವಾಗಲಿಲ್ಲ. ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಗುಪ್ತ್, ಪ್ಯಾರ್ ತೋ ಹೋನಾ ಹಿ ಥಾ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾಳೆ.
 

Bollywood celebrities Akshay Kumar Kajol Aishwarya Rai Salman Khan least educated

ಅರ್ಜುನ್ ಕಪೂರ್
ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಮಗ ಅರ್ಜುನ್ ಬಾಲ್ಯದಿಂದಲೂ ಬಾಲಿವುಡ್‌ನಲ್ಲಿ ತೊಡಗಿಸಿಕೊಂಡಿದ್ದರು. ನಾನು ಎಂದಿಗೂ ಶೈಕ್ಷಣಿಕ ವಿಷಯದಲ್ಲಿ ಆಸಕ್ತಿ ಹೊಂದಿರಲಿಲ್ಲ ಎಂದು ಆತ ಒಪ್ಪಿಕೊಂಡಿದ್ದಾನೆ. ತನ್ನ ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ನಂತರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ನಿರ್ಧರಿಸಿದ. ಕಲ್ ಹೋ ನಾ ಹೋ ಮತ್ತು ವಾಂಟೆಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, 2012ರಲ್ಲಿ ಇಶಕ್‌ಜಾದೆ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ. ನಂತರ ಗುಂಡೇ, 2 ಸ್ಟೇಟ್ಸ್, ಕಿ ಅಂಡ್ ಕಾ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
 

Bollywood celebrities Akshay Kumar Kajol Aishwarya Rai Salman Khan least educated

ಕಂಗನಾ ರಣಾವತ್
ಕಂಗನಾ ಅವರ ಮೊದಲ ಗುರಿ ವೈದ್ಯೆಯಾಗುವುದು ಆಗಿತ್ತು. ಈಕೆ ಚಂಡೀಗಡದ ಡಿಎವಿ ಶಾಲೆಯಲ್ಲಿ ಓದಿದಳು. ತನ್ನ ಹನ್ನೆರಡನೇ ತರಗತಿಯಲ್ಲಿ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಅನುತ್ತೀರ್ಣಳಾದಾಗ, ತನ್ನ ಅಧ್ಯಯನವನ್ನು ಬಿಟ್ಟು ದೆಹಲಿಗೆ ಹೋಗಲು ನಿರ್ಧರಿಸಿದಳು. ನಂತರ ಮಾಡೆಲಿಂಗ್‌ನಲ್ಲಿ ಕೆಲವು ಕಾಲ ಅದೃಷ್ಟ ಪರೀಕ್ಷಿಸಿದಳು. ನಂತರ ಬಾಲಿವುಡ್‌ಗೆ ನಟಿಯಾಗಿ ಎಂಟ್ರಿ ಪಡೆದಳು. ಗ್ಯಾಂಗ್‌ಸ್ಟರ್, ಲೈಫ್ ಇನ್ ಎ ಮೆಟ್ರೋ, ಕ್ವೀನ್, ತನು ವೆಡ್ಸ್ ಮನು ಈಕೆಗೆ ಪ್ರಸಿದ್ಧಿ ತಂದುಕೊಟ್ಟವು.
 

Bollywood celebrities Akshay Kumar Kajol Aishwarya Rai Salman Khan least educated

ಕೊನೆಗೂ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ; ಆಕೆಯ ಮೌನವೇ ಉತ್ತರಿಸುತ್ತದೆ!

ಸಲ್ಮಾನ್ ಖಾನ್
ಸಲ್ಮಾನ್ ಸೇಂಟ್ ಸ್ಟಾನಿಸ್ಲೌಸ್ ಪ್ರೌಢಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿಗೆ ಸೇರಿಕೊಂಡರು. ಆದರೆ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಲಿಲ್ಲ. ಕಾಲೇಜಿನಿಂದ ಹೊರಬಂದ ನಂತರ 1988ರಲ್ಲಿ, ಬಿವಿ ಹೋ ತೋ ಐಸಿ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶ ಮಾಡಿದರು. ಈಗ ಅವರು ಭಾರತದ ಅತ್ಯಂತ ಖ್ಯಾತ ಪ್ರಭಾವಿ ನಟರಲ್ಲಿ ಒಬ್ಬರು. ಮೈನೆ ಪ್ಯಾರ್ ಕಿಯಾ, ತೇರೆ ನಾಮ್, ಬಜರಂಗಿ ಭಾಯಿಜಾನ್, ಸುಲ್ತಾನ್ ಅವರ ಹಿಟ್‌ಗಳು.
 

Bollywood celebrities Akshay Kumar Kajol Aishwarya Rai Salman Khan least educated

ಐಶ್ವರ್ಯ ರೈ
ಐಶ್ವರ್ಯ ಆರ್ಯವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು, ನಂತರ ಅವರು ಜೈ ಹಿಂದ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ವೈದ್ಯಕೀಯ ಕಲಿಯಲು ಬಯಸಿದ್ದರು. ಆದರೆ ನಂತರ ನಿರ್ಧಾರವನ್ನು ಬದಲಾಯಿಸಿದರು. ಮಾಡೆಲಿಂಗ್‌ಗೆ ಪ್ರವೇಶಿಸಿದರು ಮತ್ತು ಇದರಿಂದಾಗಿ ಶಿಕ್ಷಣವನ್ನು ತ್ಯಜಿಸಬೇಕಾಯಿತು. ಆಗಲೇ ಅವರು ವಿಶ್ವಸುಂದರಿ ಎನಿಸಿಕೊಂಡದ್ದು ಮತ್ತು ಮುಂದೆ ಬಾಲಿವುಡ್‌ಗೆ ಪ್ರವೇಶಿಸಿದ್ದು. ನಟಿಯಾಗಿ ಅವರು ವಿಶ್ವದಾದ್ಯಂತ ಮನ್ನಣೆ ಗಳಿಸಿದ್ದಾರೆ. ಜೋಶ್, ದೇವದಾಸ್, ಹಮ್ ದಿಲ್ ದೇ ಚುಕೆ ಸನಮ್, ಜೋಧಾ ಅಕ್ಬರ್ ಹಿಟ್‌ಗಳು.
 

Bollywood celebrities Akshay Kumar Kajol Aishwarya Rai Salman Khan least educated

ಕತ್ರಿನಾ ಕೈಫ್
ಬ್ರಿಟಿಷ್ ತಾಯಿ ಮತ್ತು ಕಾಶ್ಮೀರಿ ತಂದೆ. ಯನ್ನು ಹೊಂದಿದ್ದಾರೆ. ಹಾಂಕಾಂಗ್‌ನಲ್ಲಿ ಜೀವನ ಆರಂಭ. ಹೆತ್ತವರು ಡಿವೋರ್ಸ್ ಆದ ಬಳಿಕ ತಾಯಿ ಮತ್ತು ಏಳು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದಳು. ಆಕೆಯ ತಾಯಿ ಸಮಾಜ ಸೇವಕಿ. ಹೀಗಾಗಿ ಸದಾ ಓಡಾಡುತ್ತಿದ್ದಳು. ಆಕೆಯ ಮೊದಲ ಮಾಡೆಲಿಂಗ್ ಆಫರ್ ಹದಿನಾಲ್ಕನೆಯ ವಯಸ್ಸಿನಲ್ಲಿ ಬಂತು. ಇದಕ್ಕೆ ಸೇರುವುದಕ್ಕಾಗಿ ಅವಳು ತನ್ನ ಶಿಕ್ಷಣವನ್ನು ತ್ಯಜಿಸಿದಳು. ಕೆಲಕಾಲ ಫ್ಯಾಶನ್ ಮಾಡೆಲ್ ಆಗಿ ಕೆಲಸ ಮಾಡಿದ ನಂತರ, ಬೂಮ್ ಚಿತ್ರದ ಮೂಲಕ ಭಾರತದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ನಮಸ್ತೆ ಲಂಡನ್, ರಾಜನೀತಿ, ಜಿಂದಗಿ ನಾ ಮಿಲೇಗಿ ದೊಬಾರಾ ಮುಂತಾದ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
 

Bollywood celebrities Akshay Kumar Kajol Aishwarya Rai Salman Khan least educated

ಶಿಲ್ಪಾ ಶೆಟ್ಟಿ, ಕಿಯಾರಾ: ಈ ಫೇಮಸ್ ಸೆಲೆಬ್ರಿಟಿಗಳ ನಿಜ ಹೆಸರು ಇದಲ್ಲವೇ ಅಲ್ಲ!

ಅಮೀರ್ ಖಾನ್
ಅಮೀರ್ ಖಾನ್ ತನ್ನ ಶಿಕ್ಷಣವನ್ನು ಹನ್ನೆರಡನೇ ತರಗತಿಯವರೆಗೆ ಮುಂಬೈನ ನರ್ಸೀ ಮೊಂಜಿ ಕಾಲೇಜಿನಲ್ಲಿ ನಡೆಸಿ ಮುಗಿಸಿದರು. ಹೆತ್ತವರು ಅವರನ್ನು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ ಖಾನ್ ನಟನೆಯನ್ನು ಮುಂದುವರಿಸಲು ಬಯಸಿದ್ದರು. ಅವರು ಶಿಕ್ಷಣ ಬಿಟ್ಟು ರಂಗಭೂಮಿ ಸೇರಿದರು. ಅಲ್ಲಿಂದ ಅವರು ಬಾಲಿವುಡ್‌ಗೆ ಕಾಲಿಟ್ಟರು, ಅಲ್ಲಿ ಗುರುತಿಸಿಕೊಂಡರು. ತಾರೆ ಜಮೀನ್ ಪರ್, ತ್ರೀ ಈಡಿಯಟ್ಸ್, ಗಜಿನಿ, ಪಿಕೆ ಮುಂತಾದವು ಯಶಸ್ವಿ ಚಲನಚಿತ್ರಗಳು.
 

Bollywood celebrities Akshay Kumar Kajol Aishwarya Rai Salman Khan least educated

ಅಕ್ಷಯ್ ಕುಮಾರ್
ಡಾನ್ ಬಾಸ್ಕೋ ಶಾಲೆಯಲ್ಲಿ ಅಧ್ಯಯನ ಮಾಡಿದರು, ನಂತರ ಗುರು ನಾನಕ್ ಖಾಲ್ಸಾ ಕಾಲೇಜಿನಲ್ಲಿ ಒಂದು ವರ್ಷ ವ್ಯಾಸಂಗ ಮಾಡಿದರು. ನಂತರ ತಮ್ಮ ಶಿಕ್ಷಣವನ್ನು ಬಿಟ್ಟು ಮಾರ್ಷಲ್ ಆರ್ಟ್ಸ್ ಕಲಿಯಲು ಬ್ಯಾಂಕಾಕ್‌ಗೆ ತೆರಳಿದರು. ಬಾಲಿವುಡ್‌ನಲ್ಲಿ ಮುನ್ನಡೆಯುವ ಮೊದಲು ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. ಅವರು ತಮ್ಮ ಆಕ್ಷನ್ ಮತ್ತು ಕಾಮಿಡಿ ಚಲನಚಿತ್ರಗಳ ಮೂಲಕ ಹೆಸರುವಾಸಿಯಾದರು. ಧಡ್ಕನ್, ಹೇರಾಫೆರಿ, ಭೂಲ್ ಭುಲೈಯಾ, ಏರ್‌ಲಿಫ್ಟ್ ಮುಂತಾದವು ಜನಪ್ರಿಯ.
 

Bollywood celebrities Akshay Kumar Kajol Aishwarya Rai Salman Khan least educated

ಅಫ್ಘಾನಿಸ್ತಾನದಲ್ಲಿನ ಶೂಟಿಂಗ್‌ ಅನುಭವ ಹಂಚಿಕೊಂಡ ಹೇಮಾ ಮಾಲಿನಿ!

Latest Videos
Follow Us:
Download App:
  • android
  • ios