ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ದೊಡ್ಡ ಶಾಕ್‌ನಲ್ಲಿದ್ದಾರೆ. ಕೇವಲ 36 ಗಂಟೆಗಳಲ್ಲಿ ಇವರ 80 ಸಾವಿರ ಟ್ಟಿಟ್ಟರ್ ಫಾಲೋವರ್ಸ್‌ ನಾಪತ್ತೆಯಾಗಿದ್ದಾರೆ. ದಿಢೀರ್ ನಾಪತ್ತೆಗೆ ಕಾರಣ ಏನೆಂದು ಟ್ಟಿಟರ್‌ ಇಂಡಿಯಾಗೆ ಪ್ರಶ್ನೆ ಮಾಡಿದ್ದಾರೆ. 

'ಡಿಯರ್ ಟ್ಟಿಟ್ಟರ್ ಮತ್ತು ಟ್ಟಿಟ್ಟರ್ ಇಂಡಿಯಾ. ಕಳೆದ 36 ಗಂಟೆಗಳಲ್ಲಿ ನನ್ನ 80 ಸಾವಿರ ಫಾಲೋವರ್ಸ್ ಮಿಸ್ ಆಗಿದ್ದಾರೆ. ನಿಮ್ಮ ಆ್ಯಪ್‌ನಲ್ಲಿ ತಾಂತ್ರಿಕ ತೊಂದರೆ ಇದೆಯೇ ಅಥವಾ ಬೇರೆ ಏನಾದರೂ ಸಮಸ್ಯೆಯೇ? ಇದು ನನ್ನ ವೀಕ್ಷಣೆ..ದೂರು ನೀಡುತ್ತಿಲ್ಲ,' ಎಂದು ಟ್ಟೀಟ್ ಮಾಡಿದ್ದಾರೆ.

ಇದೇ ರೀತಿಯ ಘಟನೆ ಈ ಹಿಂದೆ ಅಮಿತಾಭ್ ಬಚ್ಚನ್ ಹಾಗೂ ಕಂಗನಾ ರಣಾವತ್‌ಗೂ ಎದುರಾಗಿತ್ತು, ಆದರೆ ಕೆಲವು ದಿನಗಳಲ್ಲಿ ಎಲ್ಲವೂ ಸರಿ ಹೋಗಿತ್ತು. ಅಷ್ಟೇ ಅಲ್ಲ ವಿವಾದಾತ್ಮಕ ಟ್ವೀಟ್ ಮಾಡಿರುವ ಕಾರಣ ಕಂಗನಾ ಟ್ವಿಟರ್ ಪ್ರೊಫೈಲ್ ಅನ್ನೇ ಕಂಪನಿ ಹಿಂಪಡೆದಿದೆ. ಅಲ್ಲದೇ ಸರಕಾರ ಹಾಗೂ ಈ ಮೈಕ್ರೋ ಬ್ಲಾಗಿಂಗ್ ನಡುವಿನ ಹಗ್ಗಜಗ್ಗಾಟದಿಂದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಟ್ವೀಟರ್ ಖಾತೆಗಳ ವೇರಿಫಿಕೇಷನ್‌ನ ಬ್ಲೂ ಟಿಕ್ಕರ್ ಸಹ ಮಾಯವಾಗಿತ್ತು. ಒಟ್ಟಿನಲ್ಲಿ ಇತ್ತೀಚೆಗೆ ಟ್ವೀಟರ್ ನಡೆ ವಿಚಿತ್ರವಾಗಿದ್ದು, ಜನರು ವಿಶೇಷವಾಗಿ ದಿಗ್ಗಜರ ಖಾತೆಗಳಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಕಾರಣಗಳು ತಿಳಿಯದೇ ಬಳಕೆದಾರರು ಮಾತ್ರ ಗೊಂದಲದಲ್ಲಿದ್ದಾರೆ.

ಕ್ಯಾನ್ಸರ್‌ ವಿರುದ್ಧ ಮಡದಿಯ ಹೋರಾಟ: US ಟಿವಿ ಶೋ ತ್ಯಜಿಸಿದ ಅನುಪಮ್‌ ಖೇರ್‌ 

500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅನುಪಮ್ ಖೇರ್ ಕೆಲವು ದಿನಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟು 37 ವರ್ಷಗಳನ್ನು ಪೂರೈಸಿದ್ದರು. ಅನುಪಮ್ ಪತ್ನಿ ಕಿರಣ್ ಖೇರ್ ಕ್ಯಾನ್ಸರ್‌‌ನಿಂದ ಬಳಲುತ್ತಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.