ಬಾಲಿವುಡ್ ನಟಿ ಅಲಿಯಾ ಭಟ್ ತಾಯಿ ಸೋನಿ ರಾಜ್ ಧಾನ್ No Father in Kashmir ಎನ್ನುವ  ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಧಾರಿ ನೂರ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸಾಂಸ್ಕೃತಿಕ  ವೈವಿಧ್ಯತೆ ಆಧರಿಸಿ ಈ ಸಿನಿಮಾ ಬರುತ್ತಿದೆ. 

BB7: ರವಿ ಬೆಳಗೆರೆಗೆ ಮನೆಯಿಂದ ಬರ್ತಾಯಿತ್ತು ಮುದ್ದೆ ಸಾರು ಊಟ!

ಕಾಶ್ಮೀರ ಪಂಡಿತರ ಮಗಳಾಗಿ ನಾನು ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಕಾಶ್ಮೀರ- ಪಾಕಿಸ್ತಾನದ ಬಗ್ಗೆ ನಾನು ಮಾತನಾಡಿದಾಗಲೆಲ್ಲಾ  ನನ್ನನ್ನು ಆfಯಂಟಿ ನ್ಯಾಷನಲ್ ಅಂತ ಕರೆಯುತ್ತಾರೆ. ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎನ್ನುತ್ತಾರೆ. ಆಗೆಲ್ಲಾ ನನಗೆ ಅನಿಸುತ್ತದೆ. ನಿಜವಾಗಿಯೂ ನಾನು ಪಾಕಿಸ್ತಾನಕ್ಕೆ ಹೋಗಬೇಕು. ಅಲ್ಲಿಗೆ ಹೋದರೆ ಖುಷಿಯಾಗಿರುತ್ತೇನೆ ಅನಿಸುತ್ತದೆ. ಅಲ್ಲಿನ ಆಹಾರ ಪದ್ಧತಿಗಳು ಚೆನ್ನಾಗಿದೆ. ನನ್ನ ರೀತಿ ಯೋಚನೆ ಮಾಡುವವರು ಸಾಕಷ್ಟು ಜನರಿದ್ದಾರೆ ಎಂದಿದ್ದಾರೆ. 

ಸೋನಿಯವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚಾಸ್ಪದವಾಗಿದೆ. ಕಾಶ್ಮೀರ ಹಾಗೂ  ಪಾಕಿಸ್ತಾನ ಸೂಕ್ಷ್ಮವಾದ ವಿಚಾರ. ಈ ವಿಚಾರದ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರದಿಂದಿರಬೇಕಾಗುತ್ತದೆ. ಮಾತಿನ ಭರದಲ್ಲಿ ಒಂದು ಮಾತನಾಡಿದರೆ ಅದು ಇನ್ನೊಂದು ರೀತಿ ಸೌಂಡ್ ಆಗುತ್ತದೆ. 

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ಗುಟ್ಟು!

No Father in Kashmir ಸಿನಿಮಾದಲ್ಲಿ ಕುಲಭೂಷಣ್ ಕರಬಂಧ, ಅಂಶುಮಾನ್ ಜಾ ಅಶ್ವಿನ್ ಕುಮಾರ್ ನಟಿಸಿದ್ದಾರೆ. 16 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಅವರ ತಂದೆಯನ್ನು ಕಳೆದುಕೊಂಡಿರುತ್ತಾರೆ. ತಂದೆಯನ್ನು ಹುಡುಕಿಕೊಂಡು ಹೋಗುವ ಕಥೆಯೇ ಈ ಸಿನಿಮಾ.