ಸದ್ಯಕ್ಕೆ ಬಾಲಿವುಡ್‌ ಟಾಕ್‌ ಆಫ್‌ ದಿ ಟೌನ್‌ ಆಗಿರುವ ಚೆಲುವೆ ಆಲಿಯಾ ಭಟ್ ಮನೆಯಲ್ಲಿ ಹೊಸ ಅತಿಥಿ ಕಾಣಿಸಿಕೊಂಡಿದ್ದಾರೆ ಅದೂ ಈಜುಕೊಳದಲ್ಲಿ .ಮೊದಲು ನೀರು ಕುಡಿದು ಆನಂತರ ಈಜಾಡಿದ್ದಾರೆ. ಅರೇ ಯಾರಿದು ಅಂತನಾ ಯೋಚನೆ ಮಾಡ್ತಿದ್ದೀರಾ? ಇಲ್ಲಿದೆ ನೋಡಿ...

ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ! 

ಆಲಿಯಾ ಭಟ್ ತಾಯಿ ಸೋನಿ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಸಾಕಷ್ಟು ಉದ್ದವಿರುವ ಹಾವು  ತಮ್ಮ ಈಜುಕೊಳ್ಳದಲ್ಲಿರುವುದಾಗಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.  'ಇವತ್ತು ನಮ್ಮ ಮನೆಗೆ ಹೊಸ ಅತಿಥಿ ಆಗಮಿಸಿದ್ದರು. ಮೊದಲು ನೀರು ಕುಡಿದು ಆ ನಂತರ ಈಜಾಡಲು ಮುಂದಾಗಿತ್ತು ಅದರೆ ಯಾರಿಗೂ ಏನೂ ತೊಂದರೆ ಕೊಟ್ಟಿಲ್ಲ . ಪರ್ವಾಗಿಲ್ಲ ಆರಾಮಾಗಿ  ಪೊದೆಯೊಳಗೆ ಅದು ಹೋಗಲಿ' ಎಂದು ಬರೆದುಕೊಂಡಿದ್ದಾರೆ.

 

ವಿಡಿಯೋ ವೀಕ್ಷಿಸಿದ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ. ಡಾ.ಸಿದ್ಧಾರ್ಥ್ ಭಾರ್ಗವ್ 'ನಿಮಗೆ ಭಯವಾಗಿಲ್ಲ ಏಕೆ?' ಎಂದು ಪ್ರಶ್ನಿಸಿದರೆ. ನೀತು ಸಿಂಗ್ ಇದನ್ನು 'ನೋಡಿದರೆ ಭಯವಾಗುತ್ತದೆ' ಎಂದಿದ್ದಾರೆ. ಇನ್ನು ಅನೇಕ ತಾರೆಯರು ಮೊದಲು ನೀವು ಅದನ್ನು ಓಡಿಸಿ ಇಲ್ಲವಾದರೆ ಅಲ್ಲೇ ವಾಸ ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಹಾವು ಈಜಾಡುತ್ತಿರುವ ಎರಡು ವಿಡಿಯೋವನ್ನು ಶೇರ್ ಮಾಡಿದ  ಸೋನಿಯನ್ನು ಎಲ್ಲರೂ 'ಧೀರೆ ಭಯವಾಗದೆ ನಿಂತಿರುವಿರಿ ಭೇಶ್' ಎಂದಿದ್ದಾರೆ.

 

 
 
 
 
 
 
 
 
 
 
 
 
 

Snake in the water Part 2 #snakeinthewater #lockdowninthecountryside #lockdownlife #lockdowndiaries

A post shared by Soni Razdan (@sonirazdan) on Jul 1, 2020 at 2:11am PDT

ಆಲಿಯಾ ಪರ ನಿಂತ ಅಮ್ಮ:

ಸುಶಾಂತ್ ಸಿಂಗ್ ಸಾವಿಗೆ ಆಲಿಯಾ ಭಟ್‌ನನ್ನು ದೂರುತ್ತಿರುವ ಸುಶಾಂತ್ ಅಭಿಮಾನಿಗಳಿಗೆ ಹಾಗೂ ಕೆಲ ನೆಟ್ಟಿಗರಿಗೆ ಈ ಹಿಂದೆ ಅಲಿಯಾ ತಾಯಿ ಖಡಕ್‌ ಉತ್ತರ ನೀಡಿದ್ದರು. 'ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರವಾಗಿರುತ್ತದೆ, ನೀವು ಅನೇಕ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೀರಿ ಮುಂದೆ ಒಂದು ದಿನ ನಿಮ್ಮ ಮಕ್ಕಳೇ ಅಪ್ಪ/ಅಮ್ಮ ನಾನು ನಟ/ನಟಿಯಾಗಬೇಕೆಂದು  ಬಯಸಿರುವೆ  ಎಂದು ಹೇಳಿದರೆ ನೀವು ತಡೆಯುತ್ತೀರಾ? ಆ ಸಮಯದಲ್ಲೂ ಹೀಗೆ ಮಾತನಾಡಿ 'Nepotism'ಎಂದು ಉದ್ದೇಶಿಸಿ  ಹೇಳುತ್ತೀರಾ' ಎಂದು ಮಗಳ ಪರ ಬ್ಯಾಟಿಂಗ್ ಮಾಡಿದ್ದರು.