ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರ ಪುತ್ರ ಆರವ್‌ ತಾಯಿ ಟ್ವಿಂಕಲ್‌ ಮೊಬೈಲ್ ನಂಬರ್‌ ಅನ್ನು ವಿಭಿನ್ನವಾಗಿ ಸೇವ್‌ ಮಾಡಿಕೊಳ್ಳುವ ಮೂಲಕ  ಬಿ-ಟೌನ್‌ ಮಂದಿಗೆ ಹೊಸ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಏನದು ಇಲ್ಲಿದೆ ನೋಡಿ...

ಬಾಲಿವುಡ್ ಸ್ಮಾರ್ಟ್‌ ಆ್ಯಂಡ್ ಹ್ಯಾಂಡ್ಸಂ ಮ್ಯಾನ್ ಅಕ್ಷಯ್ ಕುಮಾರ್ ಭಾರತ ದೇಶದ ಸಿರಿವಂತ ನಟನಾದರೂ ತಮ್ಮ ಮಕ್ಕಳನ್ನು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆಳೆಸುತ್ತಿದ್ದಾರೆ. ಶಿಸ್ತು, ಶ್ರಮ ಹಾಗೂ ಪ್ರಾಮಾಣಿಕತೆಯಿಂದ ಜೀವನವನ್ನು ಹೇಗಿ ಗೆಲ್ಲಬೇಕು ಎಂಬುವುದು ತಾಯಿ ಟ್ವಿಂಕಲ್ ಹೇಳಿಕೊಡುವ ಮೊದಲ ಪಾಠವಂತೆ.

ಹೊಸ ಚಿತ್ರಕ್ಕೆ ಅಕ್ಷಯ್‌ ಸಂಭಾವನೆ 120 ಕೋಟಿ ರೂ.?

ಈಗಾ ಆರವ್‌ ಬಿ-ಟೌನ್‌ನಲ್ಲಿ ಸುದ್ದಿ ಆಗೋಕೆ ಕಾರಣವಾದ್ರೂ ಏನು? 

ಟ್ವಿಂಕಲ್ ಕನ್ಹಾ ಇನ್‌ಸ್ಟಾಗ್ರಾಂ ಖಾತೆ ಅಭಿಮಾನಿಗಳಿಗೆ ಮನೋರಂಜನೆ ನೀಡುವುದರಲ್ಲಿ ಅನುಮಾವಿಲ್ಲ. ಪರ್ಸನಲ್‌ ಲೈಫ್‌ನ ಸ್ವಾರಸ್ಯಕರ ಸಂಗತಿಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಟ್ವಿಂಕಲ್‌ ತಮ್ಮ ಪುತ್ರ ಆರವ್‌ ತಾಯಿಯ ನಂಬರ್ ಹೇಗೆ ಸೇವ್‌ ಮಾಡಿಕೊಂಡಿದ್ದಾರೆ ನೋಡಿ ಎಂದು ಪೋಟೋ ಮೂಲಕ ರಿವೀಲ್‌ ಮಾಡಿದ್ದರು.

ಪತ್ನಿಗೆ 'ದುಬಾರಿ' ಇಯರ್ ರಿಂಗ್ ಗಿಫ್ಟ್‌ ಕೊಟ್ಟ ಅಕ್ಷಯ್ ಕುಮಾರ್!

ಹೌದು ಆರವ್‌ ತಾಯಿ ಟ್ವಿಂಕಲ್‌ ನಂಬರ್‌ ಅನ್ನು 'Police' ಎಂದು ಸೇವ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪೋಟೋದಲ್ಲಿ ಟ್ವಿಂಕಲ್ ಪೊಲೀಸ್‌ ವಾಹನದ ಮುಂದೆ ಪೋಸ್‌ ನೀಡಿದ್ದಾರೆ. 

View post on Instagram

ಅಕ್ಷಯ್ ಪುತಾ ಆರವ್‌ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಹಾಗೂ ಪುತ್ರಿ ನಿತಾರಾ ಮುಂಬೈನಲ್ಲಿ ಶಾಲೆಗೆ ಹೋಗುತ್ತಾರೆ.