ಒಂದು ಕಾಲದಲ್ಲಿ ಕ್ಯಾಬರೆ ಡ್ಯಾನ್ಸರ್‌ಗಳು ಪೋಲ್‌ ಡ್ಯಾನ್ಸ್‌ ಮಾಡುತ್ತಿದ್ದರು. ಕನಿಷ್ಟಉಡುಗೆಯಲ್ಲಿ ಉದ್ದದ ರಾಡ್‌ ಹಿಡಿದು ಸೆಕ್ಸಿಯಾಗಿ ಡ್ಯಾನ್ಸ್‌ ಮಾಡೋ ಸ್ಟೈಲ್‌ ಸಖತ್‌ ಮಾದಕವಾಗಿರುತ್ತಿತ್ತು. ಕ್ರಮೇಣ ಹೀರೋಯಿನ್‌ಗಳೂ ಐಟಂ ಡ್ಯಾನ್ಸ್‌ ಮಾಡೋ ಜಮಾನಾ ಬಂತು. ಹಾಗಾಗಿ ನಾಯಕಿಯರಿಗೂ ಪೋಲ್‌ ಡ್ಯಾನ್ಸ್‌ ಐಟಂ ನಂಬರ್‌ನ ಭಾಗವಾಗಿ ಕಾಣಿಸಿರಬೇಕು.

'ಆ' ಒಂದು ಘಟನೆಯಿಂದ ಪಬ್ಲಿಕ್‌ನಲ್ಲೇ ಅಕ್ಷಯ್‌ ಕಾಲಿಗೆ ಬಿದ್ದು ಕ್ಷಮೆ ಕೇಳಿದ ರಣವೀರ್!

ಆದರೆ ಕೆಲವು ಕಳೆದ ಕೆಲವು ವರ್ಷಗಳಿಂದ ಈ ಪೋಲ್‌ ಡ್ಯಾನ್ಸ್‌ ಫಿಟ್‌ನೆಸ್‌ನ ಭಾಗವಾಗಿ ಹೆಸರಾಯಿತು. ಜಾಕ್ವಲಿನ್‌ ಫೆರ್ನಾಂಡಿಸ್‌, ಕತ್ರಿನಾ ಕೈಫ್‌ ಮೊದಲಾದವರು ಪೋಲ್‌ ತಬ್ಬಿ ಹಿಡಿದು ಕಸರತ್ತು ಮಾಡಿದ್ದೇ ಮಾಡಿದ್ದು. ಈಗ ಪೋಲ್‌ ಹಿಡಿದು ನಿಂತಿರೋದು ಅಕ್ಷಯ್‌ ಕುಮಾರ್‌. ಫಿಟ್‌ನೆಸ್‌ಗಾಗಿ ಅವರು ಈ ಡ್ಯಾನ್ಸ್‌ ಮಾಡ್ತಿದ್ದಾರಂತೆ. ಇದನ್ನು ಹೆಣ್ಮಕ್ಕಳು ಮಾಡೋದಲ್ವಾ ಅಂದರೆ, ಕಣ್ಣು ದೊಡ್ಡ ಮಾಡಿ ಗಂಡು ಮಕ್ಕಳು ಮಾಡಿದ್ರೆ ಏನ್‌ ಪೋಲ್‌ ಬಿದ್ಹೋಗುತ್ತಾ ಅಂತ ಹೆದರಿಸುತ್ತಾರಂತೆ!