ಸಾಯುವ ಮುನ್ನ ನಟಿ ಶ್ರೀದೇವಿಯ ಕೊನೆಯ ಆಸೆ ಕೈಗೂಡಲೇ ಇಲ್ಲ; ಹಣೆಬರಹ ಅಂದ್ರೆ ಅದೇನಾ?
ನಟಿ ಶ್ರೀದೇವಿಗೆ ಅಂದು ಭಾರತದ ಬಹುದೊಡ್ಡ ಸಿನಿಮಾ ಉದ್ಯಮವಾಗಿದ್ದ ಮುಂಬೈನ ಹಿಂದಿ ಚಿತ್ರರಂಗ, ಅಂದರೆ ಬಾಲಿವುಡ್‌ನಲ್ಲಿ ಮಿಂಚುವುದು ಕಷ್ಟವೇ ಆಗಲಿಲ್ಲ. ಅತಿಯಾದ ಸೌಂದರ್ಯವಿತ್ತು, ಬೇಕಾದಷ್ಟು ಪ್ರತಿಭೆಯಿತ್ತು. ಹೀಗಾಗಿ ನಟಿ ಶ್ರೀದೇವಿ ಅಲ್ಲಿ ನೆಲೆಯೂರಿ ನಂಬರ್ ಒನ್...
ಅತಿಲೋಕ ಸುಂದರಿ ಎಂದೇ ಖ್ಯಾತಿ ಪಡೆದಿದ್ದ ನಟಿ ಶ್ರೀದೇವಿ (Sridevi) ಗೊತ್ತಿಲ್ಲದವರು ಬಹಳ ಕಡಿಮೆ ಎನ್ನಬಹುದು. ಈಗಿನ ಜನರೇಶನ್ ಜನರಿಗೆ ಗೊತ್ತಿಲ್ಲ ಎನ್ನಲೂ ಅಸಾಧ್ಯ. ಏಕೆಂದರೆ, ಜಾಹ್ನವಿ ಕಪೂರ್ ಅಮ್ಮ ಎಂದಾದರೂ ಗೊತ್ತು. ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿ ಬೆಳೆದ ಈ ಸುಂದರಿ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದವರು. ಸೌತ್ ಇಂಡಿಯಾದ ಹಲವು ಸಿನಿಮಾಗಳಲ್ಲಿ ನಟಿಸಿದ ಈ ಚೆಲುವೆಗೆ ಸಹಜವಾಗಿಯೇ ಬಾಲಿವುಡ್ ಚಾನ್ಸ್ ಹುಡುಕಿಕೊಂಡು ಬಂತು.
ಅವಕಾಶ ಬಂದಿದ್ದೇ ತಡ, ನಟಿ ಶ್ರೀದೇವಿಗೆ ಅಂದು ಭಾರತದ ಬಹುದೊಡ್ಡ ಸಿನಿಮಾ ಉದ್ಯಮವಾಗಿದ್ದ ಮುಂಬೈನ ಹಿಂದಿ ಚಿತ್ರರಂಗ, ಅಂದರೆ ಬಾಲಿವುಡ್‌ನಲ್ಲಿ ಮಿಂಚುವುದು ಕಷ್ಟವೇ ಆಗಲಿಲ್ಲ. ಅತಿಯಾದ ಸೌಂದರ್ಯವಿತ್ತು, ಬೇಕಾದಷ್ಟು ಪ್ರತಿಭೆಯಿತ್ತು. ಹೀಗಾಗಿ ನಟಿ ಶ್ರೀದೇವಿ ಅಲ್ಲಿ ನೆಲೆಯೂರಿ ನಂಬರ್ ಒನ್ ನಟಿಯಾಗಿ ಬೆಳೆದು ಬಾಲಿವುಡ್ ಸಿನಿರಂಗವನ್ನು ಆಳಲು ಬಹಳಷ್ಟು ಸಮಯ ಹಿಡಿಯಲೇ ಇಲ್ಲ. ಆಗಿನ ಬಾಲಿವುಡ್ ಅತಿರಥ3 ಮಹಾರಥರೆಲ್ಲರ ಸಿನಿಮಾಗಳಲ್ಲಿ ಶ್ರೀದೇವಿ ನಾಯಕಿಯಾಗಿ ಮಿಂಚಿದ್ದರು.
ಆದರೆ, ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶ್ರೀದೇವಿಗೆ ಅವರಿಷ್ಟದಂತೆ ವಿದ್ಯಾಭ್ಯಾಸ ಮಾಡಲು ಮಾತ್ರ ಸಾಧ್ಯವೇ ಆಗಲಿಲ್ಲ. ಮುಂಬೈಗೆ ಹೋದಮೇಲೆ ಹಿಂದಿಯನ್ನು, ಮರಾಠಿಯನ್ನು ಕಷ್ಟಪಟ್ಟು ಕಲಿತರು. ಆದರೆ, ಇಂಗ್ಲೀಷ್ ಮಾತನಾಡಲು ಸಾಕಷ್ಟು ಕಷ್ಟಪಡುತ್ತಿದ್ದರು. ಸಂದರ್ಶನಗಳಲ್ಲಿ ಮಾತನಾಡುವಾಗ ಸಾಕಷ್ಟು ಬಾರಿ ಅವರಿಗೆ ಇಂಗ್ಲೀಷ್‌ನಲ್ಲಿ ಹೇಳಲು ಆಗದೇ ಒದ್ದಾಡಿದ್ದು ಕೂಡ ಇತ್ತಂತೆ.
ಅಂಥ ಶ್ರೀದೇವಿಗೆ ತಾವು ಇಂಗ್ಲೀಷನ್ನು ಚೆನ್ನಾಗಿ ಕಲಿತುಕೊಳ್ಳಬೇಕು ಎಂಬ ಅಭಿಲಾಷೆ ಇತ್ತು ಎನ್ನಲಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಟೈಮ್ ಮಾಡಿಕೊಂಡು ಇಂಗ್ಲೀಷ್ ಕಲಿಯಲು ತೊಡಗಿಸಿಕೊಳ್ಳಬೇಕು ಎಂದು ಹಲವಾರು ಬಾರಿ ಅಂದುಕೊಂಡಿದ್ದರಂತೆ. ಆದರೆ, ನಟಿಯಾಗಿದ್ದಾಗ ಬಿಡುವಿಲ್ಲದ ನಟನೆ, ಮದುವೆಯಾದ ಬಳಿಕ ಸಂಸಾರ, ಮಕ್ಕಳು. ಹೀಗಾಗಿ ನಟಿ ಶ್ರೀದೇವಿಯವರಿಗೆ ಅವರಿಷ್ಟದಂತೆ ಸ್ಪಷ್ಟವಾದ ಇಂಗ್ಲಿಷ್ ಕಲಿಯಲು ಸಾಧ್ಯವೇ ಆಗಲಿಲ್ಲ.
ಆದರೆ, ಒಂದಲ್ಲ ಒಂದು ದಿನ ತಾವು ಸ್ಟಾಂಡರ್ಡ್ ಇಂಗ್ಲಿಷ್ ಕಿತು ಮಾತನಾಡುವುದಾಗಿ ಆಪ್ತರ ಬಳಿ ಹೇಳಿಕೊಳುತ್ತಿದ್ದರಂತೆ. ಅಷ್ಟೇ ಅಲ್ಲ, ಅದೇ ರೀತಿಯ ಸಬ್ಜೆಕ್ಟ್ ಇದ್ದ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದರು. ಅದು ಅವರದೇ ಜೀವನಕ್ಕೆ ಅತ್ಯಂತ ಹತ್ತಿರವಾಗಿತ್ತು ಎನ್ನಲಾಗಿದೆ. ಆದರೆ, ಆಕಸ್ಮಿಕ ಎನ್ನುವಂತೆ ನಟಿ ಶ್ರೀದೇವಿಯವರ ಜೀವನವೇ ಕೊನೆಗೊಂಡು ಬಿಟ್ಟಿತು. 28 ಫೆಬ್ರವರಿ 2018ರಂದು ನಟಿ ಶ್ರೀದೇವಿ ಅವರು ಇಹಲೋಕ ತ್ಯಜಿಸಿಬಿಟ್ಟರು.
ಸಾಯುವ ಮೊದಲು ಅವರ ಆಸೆ ಕೊನೆಗೂ ಕೈಗೂಡಲೇ ಇಲ್ಲ. ಅದಕ್ಕೇ ಹೇಳುವುದು 'ತಾನೊಂದು ಬಗೆದರೆ ದೈವವೊಂದು ಬಗೆದೀತು' ಎಂದು! ನಟಿ ಶ್ರೀದೇವಿಯವರಿಗೆ ತಾವು ಎಜ್ಯುಕೇಟೆಡ್ ಅಲ್ಲ, ತಮಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವೇ ಆಗಲಿಲ್ಲ ಎಂಬ ಕೊರಗು ತೀವ್ರವಾಗಿತ್ತು ಎನ್ನಲಾಗಿದೆ. ಅವರು ಅದನ್ನು ತಮ್ಮ ಆಪ್ತರ ಬಳಿ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ಕೊನೆಯಾಸೆ ಈಡೇರುವ ಮೊದಲೇ ಶ್ರೀದೇವಿ ತಮ್ಮ ಕೊನೆಯುಸಿರು ಎಳೆದಿದ್ದು ಮಾತ್ರ ದುರಂತ!
***