‘ಯಾನ್‌ ಕಟೀಲ್ದ ಅಪ್ಪೆನೆ ಭಕ್ತೆ, ಯಾನ್‌ ಬನ್ನಗ ದಾದ ಪಾತೆರೊಡು ಪಂದ್‌ ಎನ್ನೊಂದು ಬೈದಿಜಿ, ಕಟೀಲುಗು ಏಪಲಾ ಬರ್ಪೆ, ಅರೆನ ಆಶೀರ್ವಾದ ಬೊಕ್ಕ ನಿಕ್ಲೆನ ಪ್ರೀತಿ ತಿಕ್ಕುಂಡ ಯಾವು, ನಿಕ್ಲೆಗ್ಲಾ ಅಪ್ಪೆ ಎಡ್ಡೆ ಮಲ್ಪಡ್‌ (ನಾನು ಏನು ಮಾತನಾಡಬೇಕು ಎಂದು ಯೋಚಿಸಿ ಬಂದಿಲ್ಲ, ನಾನು ಕಟೀಲಿನ ತಾಯಿಯ ಭಕ್ತೆ, ಕಟೀಲಿಗೆ ಯಾವಾಗಲೂ ಬರುತ್ತೇನೆ, ಅವರ ಆಶೀರ್ವಾದ ನಿಮ್ಮ ಪ್ರೀತಿ ಸಿಕ್ಕಿದರೆ ಸಾಕು, ನಿಮಗೂ ತಾಯಿ ಒಳ್ಳೆಯದನ್ನು ಮಾಡಲಿ) ಎಂದು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಹೇಳಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಗುರುವಾರ ಭಾಗವಹಿಸಿ ಸನ್ಮಾನವನ್ನೂ ಸ್ವೀಕರಿಸಿ ಅವರು ಮಾತನಾಡಿದರು.

"

ಬ್ರಹ್ಮಕಲಶೋತ್ಸವಕ್ಕೆ ದೂರದಿಂದ ಬಂದ ಶಿಲ್ಪಾ, ತರಕಾರಿ ಕತ್ತರಿಸಿದ ಕಟೀಲ್

ಪತಿ ರಾಜ್‌ಕುಂದ್ರ, ತಾಯಿ ಸುನಂದ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿಹಾಗೂ ಕುಟುಂಬಿಕರೊಂದಿಗೆ ಕಟೀಲಿಗೆ ಆಗಮಿಸಿ, ದೇವಿಯ ದರ್ಶನ ಪಡೆದುಕೊಂಡು ನೇರವಾಗಿ ಧಾರ್ಮಿಕ ಸಭೆಗೆ ಆಗಮಿಸಿ ಒಂದು ನಿಮಿಷ ಭಾಷಣ ಮಾಡಿ ಅವರು ಸನ್ಮಾನ ಸ್ವೀಕರಿಸಿದರು. ನಂತರ ನೇರವಾಗಿ ಬಜಪೆ ವಿಮಾನ ನಿಲ್ದಾಣಕ್ಕೆ ತೆರಳಿದರು. ವೇದಿಕೆಯಿಂದ ಕೆಳಗಿಳಿದ ನಂತರ ಅಭಿಮಾನಿಗಳು ಮುತ್ತಿಗೆ ಹಾಕಿದ್ದು ಪೊಲೀಸರು ಹರಸಾಹಸ ಪಟ್ಟು ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟರು.