Asianet Suvarna News Asianet Suvarna News

ಮಲೈಕಾ ಅರೋರಾಗಿಂತ 12 ವರ್ಷ ದೊಡ್ಡವರು ತಂದೆ ಅನಿಲ್ ಮೆಹ್ತಾ.!

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆಯನ್ನು ಕಳೆದುಕೊಂಡಿದ್ದಾರೆ. ಅನಿಲ್ ಮೆಹ್ತಾ ಆತ್ಮಹತ್ಯೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅನಿಲ್ ಮೆಹ್ತಾ ಹಾಗೂ ಮಲೈಕಾ ಅರೋರಾ, ತಂದೆ – ಮಗಳಾದ್ರೂ ಸರ್ ನೇಮ್ ಬೇರೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಕೂಡ ಬಹಳ ಕಡಿಮೆ. 
 

Bollywood actress Malaika Arora father Anil Mehta surname sparks curiosity roo
Author
First Published Sep 13, 2024, 5:32 PM IST | Last Updated Sep 13, 2024, 5:32 PM IST

ಬಾಲಿವುಡ್ ನಟಿ ಮಲೈಕಾ ಅರೋರಾ (Bollywood actress Malaika Arora) ಮನೆಯಲ್ಲಿ ಶೋಕ ಆವರಿಸಿದೆ.  ಮಲೈಕಾ ತಂದೆ ಅನಿಲ್ ಮೆಹ್ತಾ (Anil Mehta) ಸೆಪ್ಟೆಂಬರ್ 11ರಂದು ಆತ್ಮಹತ್ಯೆ (suicide) ಗೆ ಶರಣಾಗಿದ್ದಾರೆ. ಆಯೇಷಾ ಮ್ಯಾನರ್ (Ayesha Manor) ಕಟ್ಟಡದ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅನಿಲ್ ಮೆಹ್ತಾ ಅವರ ಹಠಾತ್ ಸಾವು ಅವರ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ. ತಂದೆ ಸಾವಿನ ನಂತ್ರ ಮಲೈಕಾ ಅರೋರಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ತಂದೆ ಸಾವನ್ನು ಸ್ಪಷ್ಟಪಡಿಸಿದ್ದಲ್ಲದೆ ಅಪ್ಪನನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಮಲೈಕಾ ತಮ್ಮ ಪೋಸ್ಟ್ ನಲ್ಲಿ ತಂದೆ ಅನಿಲ್ ಮೆಹ್ತಾ ಎಂದು ಬರೆದಿದ್ದಲ್ಲದೆ, ಅವರ ವಯಸ್ಸನ್ನು ತಿಳಿಸಿದ್ದಾರೆ. ಮಲೈಕಾ ಪೋಸ್ಟ್ ಪ್ರಕಾರ ಅವರಿಗೆ 62 ವರ್ಷ ವಯಸ್ಸು. ಅಂದ್ರೆ ಮಲೈಕಾಗಿಂತ ಅವರು ಬರೀ 12 ವರ್ಷ ದೊಡ್ಡವರು. ಈ ಮಧ್ಯೆ ಮಲೈಕಾ ಸಹೋದರಿ ಅಮೃತಾ, ತಮ್ಮ ತಂದೆ ಹೆಸರನ್ನು ಅನಿಲ್ ಅರೋರಾ (Anil Arora) ಎಂದು ಬರೆದಿದ್ದಾರೆ. ಮೆಹ್ತಾ ಮತ್ತು ಅರೋರಾ ಸರ್ ನೇಮ್ ಹಾಗೂ ಅನಿಲ್ ಮೆಹ್ತಾ ವಯಸ್ಸು, ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಮಲೈಕಾಗಿಂತ, ಅವರ ತಂದೆ ಅನಿಲ್ ಮೆಹ್ತಾ ಕೇವಲ 12 ವರ್ಷ ದೊಡ್ಡವರಾಗಿರಲು ಕಾರಣವೇನು ಎಂಬುದಕ್ಕೆ ಉತ್ತರ ಇಲ್ಲಿದೆ.

ಗಂಡನ ಮನೆಯಲ್ಲಿ ಅಡುಗೆ ಮಾಡೋ ಒತ್ತಡವಿದ್ಯಾ? ಮದುವೆ ನಂತ್ರ ಸೋನಾಕ್ಷಿ ಸಿನ್ಹಾ ಯಾಕೆ ಹೀಗೆ ಮಾಡ್ತಾ ಇದ್ದಾರೆ?

ಮಲೈಕಾ ಅರೋರಾ ತಂದೆ ಯಾರು? : ಮಲೈಕಾ ಅರೋರಾ ಸ್ವಂತ ತಂದೆ ದಿವಂಗತ ಅನಿಲ್ ಮೆಹ್ತಾ ಅಲ್ಲ. ಇವರು ಮಲ ತಂದೆ. ಮಲೈಕಾ ತಂದೆ ಹೆಸರು ಅನಿಲ್ ಅರೋರಾ. ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್, ಮಾಧ್ಯಮ ಸಂಸ್ಥೆಯೊಂದರ ಮಾರ್ಕೆಟಿಂಗ್ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಅನಿಲ್ ಅರೋರಾ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಮಲೈಕಾ ಅರೋರಾ, 6 ವರ್ಷದಲ್ಲಿರುವಾಗ, ತಾಯಿ ಜಾಯ್ಸ್ ಪಾಲಿಕಾರ್ಪ್ ಅರೋರಾರಿಂದ ವಿಚ್ಛೇದನ ಪಡೆದು ದೂರವಾಗಿದ್ದರು. ಆ ನಂತ್ರ ಜಾಯ್ಸ್ ಪಾಲಿಕಾರ್ಪ್, ಅನಿಲ್ ಮೆಹ್ತಾ ಅವರನ್ನು ಮದುವೆ ಆಗಿದ್ದರು. ಅನಿಲ್ ಮೆಹ್ತಾ ಭಾರತದ ಗಡಿ ಪಟ್ಟಣವಾದ ಫಾಜಿಲ್ಕಾ ನಿವಾಸಿ. ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡಿದ್ದರು. ಅನಿಲ್ ಮೆಹ್ತಾ ಹಾಗೂ ಜಾಯ್ಸ್ ಪಾಲಿಕಾರ್ಪ್ ದಾಂಪತ್ಯ ಕೂಡ ತುಂಬಾ ದಿನ ನಡೆಯಲಿಲ್ಲ. ಮಲೈಕಾ 11 ವರ್ಷದಲ್ಲಿರುವಾಗ ಇವರಿಬ್ಬರು ದೂರವಾಗಿದ್ದರು. ಕೆಲ ವರ್ಷಗಳ ಹಿಂದೆ ಮತ್ತೆ ಒಂದಾಗಿದ್ದ ದಂಪತಿ ಆಯೇಷಾ ಮ್ಯಾನರ್ ಕಟ್ಟಡದಲ್ಲಿ  ಒಟ್ಟಿಗೆ ವಾಸವಾಗಿದ್ದರು. 

ತಂದೆ ಅನಿಲ್ ಮೆಹ್ತಾ, ಮಲೈಕಾ ಹಾಗೂ ಅಮೃತಾ ಅರೋರಾ (Amrita Arora) ಗೆ ತುಂಬಾ ಹತ್ತಿರವಾಗಿದ್ದರು. ಮೆಹ್ತಾ, ಹೆಣ್ಮಕ್ಕಳ ಜೊತೆ ಸಮಯ ಕಳೆಯಲು ಇಷ್ಟಪಡ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಂದೆ, ಮಕ್ಕಳ ಅನೇಕ ಫೋಟೋ, ವಿಡಿಯೋಗಳಿವೆ. ಆತ್ಮಹತ್ಯೆ ಹಿಂದಿನ ರಾತ್ರಿ ಕೂಡ ಅಮೃತಾ ಅರೋರಾ ತಂದೆಯನ್ನು ಭೇಟಿಯಾಗಿದ್ದರು. ಮನೆಯಿಂದ ವಾಪಸ್ ಹೋಗುವ ಸಮಯದಲ್ಲಿ ಪಾಪರಾಜಿಗಳಿಗೆ ಫೋಸ್ ನೀಡಿದ್ದರು.

ಮಕ್ಕಳನ್ನು ಮಾಡ್ಕೊಳ್ಳೋಕೆ ಭಯವಂತೆ ನಟಿ ತಮನ್ನಾಗೆ..ಕಾರಣ ಏನ್ ಗೊತ್ತಾ?

ಮಲೈಕಾ ತಂದೆ ಸಾವಿನ ನಂತ್ರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ಅವರ ತಾಯಿ ಹೇಳಿಕೆಯನ್ನು ಪಡೆಯಲಾಗಿದೆ. ಪೋಸ್ಟ್‌ಮಾರ್ಟಮ್ ವರದಿ ಬಂದಿದ್ದು, ಅವರು ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂಬುದು ಬಹಿರಂಗವಾಗಿದೆ. ಮಲೈಕಾ ಮನೆಗೆ ಬಾಲಿವುಡ್ ಕಲಾವಿದರು, ಸ್ನೇಹಿತರು ಭೇಟಿ ನೀಡಿ ಸಾಂತ್ವಾನ ಹೇಳ್ತಿದ್ದಾರೆ. ಮಾಜಿ ಪತಿ ಅರ್ಬಾಜ್ ಖಾನ್, ಸಲೀಂ ಖಾನ್, ಹೆಲೆನ್, ಸಲ್ಮಾ ಖಾನ್, ಕರೀನಾ ಕಪೂರ್ ಖಾನ್ ಸೇರಿದಂತೆ ಅನೇಕರು ಮಲೈಕಾ ಕುಟುಂಬಕ್ಕೆ ಧೈರ್ಯ ನೀಡುವ ಕೆಲಸ ಮಾಡಿದ್ದಾರೆ. 

Latest Videos
Follow Us:
Download App:
  • android
  • ios