ಬಾಲಿವುಡ್‌ ನಟಿ ಧಡಕ್ ಚೆಲುವೆ ಜಾಹ್ನವಿ ಕಪೂರ್‌ ಬರಿಗಾಲಲ್ಲಿ ತಿಮ್ಮಪ್ಪನ ಬೆಟ್ಟ ಹತ್ತಿದ್ದಾರೆ. ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

 
 
 
 
 
 
 
 
 
 
 
 
 

🌈🌞

A post shared by Janhvi Kapoor (@janhvikapoor) on Feb 9, 2020 at 7:53am PST

ಶ್ವೇತವರ್ಣದ ಸಲ್ವಾರ್ ಹಾಗೂ ಹಳದಿ ಬಣ್ಣದ ದುಪ್ಪಟ್ಟಾ ಧರಿಸಿದ್ದ ಜಾಹ್ನವಿ ದೂರಕ್ಕೆಲ್ಲೋ ನೋಡಿ ಮುಗುಳ್ನಗುತ್ತಿರುವು ಫೋಟೋ ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಬರಿಗಾಲಲ್ಲಿ 3500 ಮೆಟ್ಟಿಲುಗಳನ್ನು ಹತ್ತಿದ್ದು, ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

ಸೌತ್ ಇಂಡಿಯನ್ ಚಿತ್ರಕ್ಕೆ ಜಾಹ್ನವಿ ಕಪೂರ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಜಾಹ್ನವಿ ಫೋಟೋ ಶೇರ್ ಮಾಡಿದ್ದು ಒಂದರಲ್ಲಿ ದಕ್ಷಿಣ ಭಾರತ ಶೈಲಿಯ ಕೆಂಪು ಹಾಗೂ ಹಳದಿ ಬಣ್ಣದ ಲಂಗ ದಾವಣಿ ಧರಿಸಿದ್ದಾರೆ. ಸುಂದರವಾದ ಜುಮ್ಕಗಳನ್ನು ಧರಿಸಿರುವ ಜಾಹ್ನವಿ ನ್ಯಾಚುರಲ್ ಲುಕ್‌ನಲ್ಲಿ ಮಿಂಚಿದ್ದಾರೆ.

ತಿರುಮಲ ಎಂಬ ಕ್ಯಾಪ್ಶನ್ ನೀಡಿ ಫೋಟೋ ಶೇರ್ ಮಾಡಿಕೊಂಡಿದ್ದು, ಅದರೊಂದಿಗೆ ಅಲ್ಲಿನ ಹಸಿರು, ಪರಿಸರದ ಫೋಟಗಳನ್ನು ಶೇರ್ ಮಾಡಿದ್ದಾರೆ. 
ಚಿತ್ರರಂಗದ ಗಣ್ಯರು ತಿರುಪತಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಜಾಹ್ನವಿ ಕಪೂರ್ ಕರಣ್ ಜೋಹರ್ ನಿರ್ಮಿಸುತ್ತಿರುವ 'ಗುಂಜನ್‌ ಸಕ್ಸೇನಾ ದಿ ಕಾರ್ಗಿಲ್ ಗರ್ಲ್‌' ಹಾಗೂ 'ರೂಹಿ ಅಫ್ಜಾ'ದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.