ಪ್ರತಿ 3 ನಿಮಿಷಕ್ಕೊಮ್ಮೆ ತಿಂತಾನೆ ಇರ್ತಾರೆ ದೀಪಿಕಾ..! ಆದ್ರೂ ನಂಗೆ ಕೊಡಲ್ಲ ಎಂದ ಅಮಿತಾಭ್
- ಪ್ರತಿ ಮೂರು ನಿಮಿಷಕ್ಕೊಮ್ಮೆ ತಿನ್ನುತ್ತಲೇ ಇರ್ತಾರಂತೆ ದೀಪಿಕಾ
- ಎಷ್ಟು ತಿಂದ್ರೂ ನಂಗೆ ಮಾತ್ರ ಕೊಡಲ್ಲ ಅಂತಾರೆ ಅಮಿತಾಭ್
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಫೇಮಸ್ ಶೋ ಕೆಬಿಸಿಯಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ನಟಿ ದೀಪಿಕಾ ಹಾಗೂ ಫರಾ ಅಖ್ತರ್ ಯಾವತ್ತೂ ನನ್ನ ಜೊತೆ ಫುಡ್ ಶೇರ್ ಮಾಡಿಲ್ಲ ಎಂದಿದ್ದಾರೆ ನಟ. ಆದರೆ ದೀಪಿಕಾ ಹಾಗೂ ಫರಾ ಇಬ್ಬರು ಇದನ್ನು ತಳ್ಳಿ ಹಾಕಿದ್ದಾರೆ.
ಲೇಟೆಸ್ಟ್ ಎಪಿಸೋಡ್‌ನ ಪ್ರೋಮೋ ಒಂದರಲ್ಲಿ ಅಮಿತಾಭ್ ಅವರ ಫುಡ್ ಹ್ಯಾಬಿಟ್ ಬಗ್ಗೆ ಹೇಳಿದ್ದಾರೆ. ದೀಪಿಕಾ ಪ್ರತಿ 3 ನಿಮಿಷಕ್ಕೊಮ್ಮೆ ಸ್ನ್ಯಾಕ್ಸ್ ತಿನ್ನುತ್ತಾರೆ. ಆದರೆ ನನಗೇನೂ ಕೊಡುವುದಿಲ್ಲ. ಪ್ರತಿ ಮೂರು ನಿಮಿಷಕ್ಕೆ ಅವರ ಸ್ಟಾಫ್ ಬಂದು ಆಹಾರ ಕೊಡುತ್ತಾನೆ. ದೀಪಿಕಾ ತಿನ್ನಲು ಶುರು ಮಾಡುತ್ತಾರೆ. ಅಮಿತ್ ಜೀ ನೀವು ಸ್ವಲ್ಪ ತಗೊಳ್ತೀರಾ ಎಂದು ಒಮ್ಮೆಯೂ ಕೇಳುವುದಿಲ್ಲ ಎಂದಿದ್ದಾರೆ. ಇದನ್ನು ಕೇಳಿ ಶಾಕ್ ಆದ ದೀಪಿಕಾ ಅಮಿತಾಭ್ ದೀಪಿಕಾರ ಟಿಫಿನ್ ಹುಡುಕಿಕೊಂಡು ಬರುತ್ತಾರಂತೆ. ನಂತರ ಅದನ್ನು ಖಾಲಿ ಮಾಡಿ ಹೋಗುತ್ತಾರೆ ಎಂದಿದ್ದಾರೆ.
ಮಹಾರಾಷ್ಟ್ರದ ಸೀರೆಯಲ್ಲಿ ಮಾಧುರಿ: ನೋಡೋಕಷ್ಟೆ ಸಿಂಪಲ್, ಬೆಲೆ ಭಾರೀ ದುಬಾರಿ
ಕೆಬಿಸಿಯಲ್ಲಿ ಸುಳ್ಳು ಹೇಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅಮಿತಾಬ್ ದೀಪಿಕಾಗೆ ತಾಮಷೆಯಾಗಿ ಎಚ್ಚರಿಕೆ ನೀಡಿದ್ದಾರೆ. ಫರಾ ದೀಪಿಕಾ ಅವರ ಆಹಾರ ಪದ್ಧತಿ ಬಗ್ಗೆ ಕೀಟಲೆ ಮಾಡಲು ಯತ್ನಿಸಿದಾಗ, ಅಮಿತಾಬ್ ಬಗ್ಗೆಯೂ ಮಾತನಾಡಿದ್ದಾರೆ. ಫರಾ ತಮ್ಮ ಫೇಮಸ್ ಬಿರಿಯಾನಿಯನ್ನು ಏಕೆ ನೀಡಲಿಲ್ಲ ಎಂದು ಕೇಳಿದ್ದಾರೆ. ಸರ್ ನೋಡಿ, ನೀವು ಸಸ್ಯಾಹಾರಿ. ನಮ್ಮ ಮನೆಯಲ್ಲಿ ನಾವು ಯಾವುದೇ ವೆಜ್ ಬಿರಿಯಾನಿ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಸ್ಯಾಹಾರಿ ಬಿರಿಯಾನಿ ಎಂದು ಯಾವುದೂ ಇಲ್ಲ ಎಂದು ನೀವು ಭಾವಿಸುತ್ತೀರಾ ಎಂದು ಅಮಿತಾಬ್ ಅವರನ್ನು ಕೇಳಿದ್ದಾರೆ. ಸರ್ ಇದು ವಾಸ್ತವವಾಗಿ ತರಕಾರಿ ಪುಲಾವ್, ಬಿರಿಯಾನಿ ಅಲ್ಲ ಎಂದು ಫರಾ ಉತ್ತರಿಸಿದ್ದಾರೆ.
ಏ ನನ್ನ ಕಾರನ್ನು ತನ್ನಿ, ನಾನು ಈ ಸ್ಥಳವನ್ನು ಬಿಡಬೇಕು ಎಂದು ಬೇಸರದಲ್ಲಿ ಅಮಿತಾಭ್ ತನ್ನ ಕಾರ್ಯಕ್ರಮದ ತಂಡಕ್ಕೆ ತಿಳಿಸುವುದನ್ನು ಕಾಣಬಹುದು. ಅಮಿತಾಬ್ ಮತ್ತು ದೀಪಿಕಾ ಶೀಘ್ರದಲ್ಲೇ ಹಾಲಿವುಡ್ ಹಿಟ್ ದಿ ಇಂಟರ್ನ್ ನ ಹಿಂದಿ ರಿಮೇಕ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮೊದಲು ರಿಷಿ ಕಪೂರ್ ನಟಿಸಬೇಕಿತ್ತು. ಆದರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಅವರು ನಿಧನರಾದ ನಂತರ ಅಮಿತಾಬ್ ಅವರನ್ನು ಈ ಪ್ರಾಜೆಕ್ಟ್‌ಗೆ ಕರೆತರಲಾಯಿತು.