ಬಾಲಿವುಡ್ ನಟಿ ಅನ್ಯಾ ತಿವಾರಿ "ಸರ್ಕಾರಿ ಬಚ್ಚಾ" ಚಿತ್ರದ ಪ್ರಚಾರಕ್ಕಾಗಿ ವಧುವಿನಂತೆ ಅಲಂಕರಿಸಿಕೊಂಡು, ಸರ್ಕಾರಿ ನೌಕರಿ ಹುಡುಗ ಬೇಕೆಂದು ಬೋರ್ಡ್ ಹಿಡಿದು ನಿಂತಿದ್ದರು. ಸೂರ್ಯಕಾಂತ್ ತ್ಯಾಗಿ ನಿರ್ದೇಶನದ ಈ ಹಾಸ್ಯ ಚಿತ್ರವು ಫೆಬ್ರವರಿ 28 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರುಸ್ಲಾನ್ ಮುಮ್ತಾಜ್ ಮತ್ತು ಅನ್ಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸರ್ಕಾರಿ ನೌಕರಿ ಹೊಂದಿರುವ ಹುಡುಗನನ್ನೇ ಮದುವೆಯಾಗಬೇಕೆಂಬ ಹುಡುಗಿಯ ತಂದೆಯ ಆಸೆಯ ಸುತ್ತ ಕಥೆ ಸಾಗುತ್ತದೆ.

ತೆಳ್ಳಗಿರಿ, ಬೆಳ್ಳಗಿರಿ, ದಪ್ಪಗಿರಿ, ಕಪ್ಪಗಿರಿ, ಸರ್ಕಾರಿ ನೌಕರಿ (Government job)ಯಲ್ಲಿದ್ರೆ ಸಾಕು. ಅಪ್ಪ ಸರ್ಕಾರಿ ನೌಕರಿಯಲ್ಲಿರುವ ಹುಡುಗನನ್ನು ಮದುವೆ ಆಗು ಅಂದಿದ್ದಾರೆ. ಹಾಗಾಗಿ ಹುಡುಗಿ ಸರ್ಕಾರಿ ನೌಕರಿಯಲ್ಲಿರುವ ವರ ಬೇಕು ಅಂತ ಬೋರ್ಡ್ ಹಿಡಿದು ನಿಂತಿದ್ದಾಳೆ. ನೀವು ಸರ್ಕಾರಿ ನೌಕರಿಯಲ್ಲಿದ್ದೀರಾ? ಮದುವೆ (marriage)ಗೆ ಹುಡುಗಿ ಹುಡುಕ್ತಿದ್ದೀರಾ? ಹಾಗಿದ್ರೆ ಸ್ವಲ್ಪ ಈ ಕಡೆ ನೋಡಿ. ವಧುವಿನಂತೆ ಸಿಂಗಾರಗೊಂಡಿರುವ ಹುಡುಗಿ ಸರ್ಕಾರಿ ನೌಕರಿಯಲ್ಲಿರುವ ವರನನ್ನು ಹುಡುಕ್ತಿದ್ದಾಳೆ. ಚೆಂದದ ಲೆಹಂಗಾ ಧರಿಸಿ, ಸಿಂಗಾರಗೊಂಡು ಕೈನಲ್ಲಿ ಒಂದು ಬೋರ್ಡ್ ಹಿಡಿದಿರುವ ಹುಡುಗಿ ಕಡೆ ಎಲ್ಲರ ದೃಷ್ಟಿ ಬಿದ್ದಿದೆ. ಸರ್ಕಾರಿ ನೌಕರಿಯಲ್ಲಿರುವ ಹುಡುಗ್ರು ಗಾಳ ಹಾಕೋ ಪ್ಲಾನ್ ಮಾಡಿದ್ರೆ, ಸರ್ಕಾರಿ ಕೆಲಸವಿಲ್ಲದ ಹುಡುಗ್ರು ಒಳ್ಳೇ ಛಾನ್ಸ್ ತಪ್ತು ಅಂತಿದ್ದಾರೆ. 

ಇನ್ನೊಂದು ವಿಷ್ಯ ಏನೆಂದ್ರೆ, ಈ ಬೋರ್ಡ್ ಹಿಡಿದಿರೋರು ಮತ್ತ್ಯಾರೂ ಅಲ್ಲ, ಬಾಲಿವುಡ್ ನಟಿ ಅನ್ಯಾ ತಿವಾರಿ (Bollywood actress Anya Tiwari). ಅನ್ಯಾ ತಿವಾರಿ ಕೈನಲ್ಲಿರುವ ಸರ್ಕಾರಿ ನೌಕರಿಯಲ್ಲಿರುವ ವರ ಬೇಕು ಎಂಬ ಬೋರ್ಡ್ ನೋಡ್ತಾ ಇದ್ದಂತೆ ನಾಲ್ಕೈದು ಹುಡುಗ್ರು ಪ್ರಪೋಸ್ ಮಾಡೋಕೆ ಮುಂದೆ ಬಂದಿದ್ದಾರೆ. ಆದ್ರೆ ಅದ್ರಲ್ಲಿ ಒಂದಿಬ್ಬರಿಗೆ ಸರ್ಕಾರಿ ನೌಕರಿ ಇಲ್ಲ ಅಂತ ಅನ್ಯಾ ರಿಜೆಕ್ಟ್ ಮಾಡ್ತಾರೆ. ಕೊನೆಗೆ ಬರೋ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಓಕೆ ಅಂತಾರೆ. ಅರೇ ಎಲ್ಲಿ, ನಾನೂ ಸರ್ಕಾರಿ ನೌಕರಿಯಲ್ಲಿದ್ದೇನೆ ಅಂತ ನೀವು ಎದ್ದು ಕುಳಿತ್ಕೊಳ್ಬೇಡಿ. ನಿಜವಾಗ್ಲೂ ಅನ್ಯಾ ತಿವಾರಿ, ಸರ್ಕಾರಿ ನೌಕರಿಯಲ್ಲಿರುವ ಹುಡುಗನನ್ನು ಹುಡುಕ್ತಾ ಇಲ್ಲ. ಅವರು ಚಿತ್ರದ ಪ್ರಮೋಷನ್ ಮಾಡ್ತಿದ್ದಾರೆ. 

OTT Release This Week: ರೊಮ್ಯಾನ್ಸ್‌, ಕ್ರೈಂ, ಕಾಮಿಡಿ ಸಿನಿಮಾಗಳನ್ನು ಮಿಸ್‌ ಮಾಡ್ಬೇಡಿ!

ಬಾಲಿವುಡ್ ನಲ್ಲಿ ಸರ್ಕಾರಿ ಬಚ್ಚಾ ಹೆಸರಿನ ಸಿನಿಮಾ ಸಿದ್ಧವಾಗಿದೆ. ಇದೇ ಫೆಬ್ರವರಿ 28ರಂದು ಸಿನಿಮಾ ತೆರೆಗೆ ಬರ್ತಿದೆ. ಈ ಚಿತ್ರದ ಪ್ರಮೋಷನ್ ಮಾಡ್ತಿರುವ ಅನ್ಯಾ ತಿವಾರಿ, ರಸ್ತೆ ಬದಿಯಲ್ಲಿ ಈ ಬೋರ್ಡ್ ಹಿಡಿದು ನಿಂತಿದ್ದಾರೆ. ಲೆಹಂಗಾ ಹಾಕಿ, ವಧುವಿನಂತೆ ರೆಡಿಯಾಗಿರುವ ಅನ್ಯಾ ಕೈನಲ್ಲಿ ನೀವು ಬೋರ್ಡ್ ನೋಡ್ಬಹುದು. ಇನ್ಸ್ಟಾದಲ್ಲಿ ಅನ್ಯಾ ವಿಡಿಯೋ ಪೋಸ್ಟ್ ಆಗಿದೆ. ಇದನ್ನು ನೋಡಿದ ಜನರು ನಾನಿದ್ದೇನೆ, ನಾನಿದ್ದೇನೆ ಎನ್ನುತ್ತಿದ್ದಾರೆ. 

ಲೋಕದ ಕಣ್ಣಿಗೆ ಕೆಟ್ಟವರು, ಅದ್ರೆ ಈಗ ಮಾಡ್ತಿರೋದು ಒಳ್ಳೇ ಕೆಲಸ.. ಶಾಕಿಂಗ್ ಆದ್ರೂ

ಸರ್ಕಾರಿ ಬಚ್ಚಾ, ಸೂರ್ಯಕಾಂತ್ ತ್ಯಾಗಿ ನಿರ್ದೇಶನದ ಸಿನಿಮಾ. ಇದೊಂದು ಹಾಸ್ಯ ಸಿನಿಮಾ. ಈ ಚಿತ್ರದಲ್ಲಿ ರುಸ್ಲಾನ್ ಮುಮ್ತಾಜ್ ಮತ್ತು ಅನ್ಯಾ ತಿವಾರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿಶ್ ಸಿದ್ದಿಕಿ, ಬ್ರಿಜೇಂದ್ರ ಕಲಾ, ಗುರುಪ್ರೀತ್ ಕೌರ್ ಚಡ್ಡಾ, ರಿಜ್ವಾನ್ ಸಿಕಂದರ್, ಆಶಿಶ್ ಸಿಂಗ್, ಶ್ರೇಷ್ಠಾ ಅಯ್ಯರ್ ಸೇರಿದಂತೆ ಅನೇಕ ಕಲಾವಿದರನ್ನು ನೀವು ನೋಡ್ಬಹುದು. ಹುಡುಗಿ ಮದುವೆ ಆಗೋಕೆ ಬಂದ ಯುವಕನಿಗೆ ಹುಡುಗಿ ಮೆಚ್ಚಿಸೋದಕ್ಕಿಂತ ಕುಟುಂಬಸ್ಥರನ್ನು ಒಲಿಸೋದು ಕಷ್ಟವಾಗುತ್ತೆ. ಹುಡುಗಿ ತಂದೆ ಆಸೆ ಸರ್ಕಾರಿ ನೌಕರಿ. ಆದ್ರೆ ಹುಡುಗ ಸರ್ಕಾರಿ ನೌಕರಿಯಲ್ಲಿರೋದಿಲ್ಲ. ಇದನ್ನೇ ತಮಾಷೆಯಾಗಿ ಚಿತ್ರಿಸಲಾಗಿದೆ. ಥಿಯೇಟರ್ ಗೆ ಬರುವ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗೋದ್ರಲ್ಲಿ ಡೌಟಿಲ್ಲ ಅಂತ ಚಿತ್ರತಂಡ ಹೇಳ್ತಿದೆ. ಸದ್ಯ ಚಿತ್ರ ತಂಡ, ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಿದೆ. ಇದ್ರ ಭಾಗವಾಗಿಯೇ ಅನ್ಯಾ ತಿವಾರಿ ಬೋರ್ಡ್ ಹಿಡಿದು ನಿಂತಿದ್ದಾರೆ.

View post on Instagram