Asianet Suvarna News

ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ: ಐಶ್ವರ್ಯ ರೈ ಭಾಗಿ!

ಪಾಂಡಿಚೆರಿಯಲ್ಲಿ 'ಪೊನ್ನಿಯರ್ ಸೆಲ್ವನ್' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಆರಂಭ. ಮತ್ತೆ ಬಂದಿಳಿದ ಐಶು....
 

Bollywood actress Aishwarya rai return to Pondicherry for Ponniyin Selvan shoot vcs
Author
Bangalore, First Published Jul 19, 2021, 11:41 AM IST
  • Facebook
  • Twitter
  • Whatsapp

ಇಡೀ ಭಾರತೀಯ ಚಿತ್ರರಂಗವೇ ನಿರ್ದೇಶಕ ಮಣಿರತ್ನಂ ಸಿನಿಮಾ ವೀಕ್ಷಿಸಲು ಕಾತುರರಾಗಿರುತ್ತಾರೆ. ಅದರಲ್ಲೂ 'ಪೊನ್ನಿಯನ್ ಸೆಲ್ವನ್' ಸಿನಿಮಾ ದೊಡ್ಡ ತಾರಾ ಬಳಗವನ್ನೇ ಹೊಂದಿದ್ದು, ಕೊನೆಯ ಹಂತದ ಚಿತ್ರೀಕರಣವನ್ನು ಅರಂಭಿಸುತ್ತಿದ್ದಾರೆ. ಇದೇ ಜುಲೈ 20ರಂದು ಪಾಂಡಿಚೆರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. 

ಕೊರೋನಾ ಲಾಕ್‌ಡೌನ್‌ನಿಂದಾಗಿ ಸಿನಿಮಾ ಚಿತ್ರೀಕರಣ ಅರ್ಧಕ್ಕೇ ನಿಂತು ಹೋಗಿತ್ತು. ಮತ್ತೆ ಚಿತ್ರೀಕರಣಕ್ಕೆ ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪಾಂಡಿಚೆರಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗಿದೆ. ಜುಲೈ 20ರಂದು ಪಾಂಡಿಚೆರಿಯಲ್ಲಿ ಶೂಟಿಂಗ್ ಆರಂಭವಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ನಟಿ ಐಶ್ವರ್ಯಾ ರೈ ಕೂಡ ಕುಟುಂಬದ ಜೊತೆ ಪಾಂಡಿಚೆರಿಗೆ ಆಗಮಿಸಿದ್ದಾರೆ. 

ಮಣಿರತ್ನಂ ಚಿತ್ರ ಶೂಟಿಂಗ್‌ನಲ್ಲಿರುವ ಐಶ್ವರ್ಯಾ ರೈ, ಫೋಟೋ ಶೇರ್‌ ಮಾಡಿದ ಕೋ ಸ್ಟಾರ್‌!

ಕೊನೆ ಹಂತದ ಚಿತ್ರೀಕರಣದಲ್ಲಿ ಪ್ರಮುಖ ನಟ ಜಯಂ ರವಿ, ನಟ ಕಾರ್ತಿ ಮತ್ತು ವಿಕ್ರಂ ಸಹ ಪಾಲ್ಗೊಳ್ಳುವ ನಿರೀಕ್ಷೆ ಇದೆ.  ಕಳೆದ ಬಾರಿ ಹೈದರಾಬಾದ್‌ನಲ್ಲಿ ಸೆಟ್‌ ಹಾಕಲಾಗಿತ್ತು, ಪಾಂಡಿಚೆರಿಯಲ್ಲಿ ಸೆಟ್ ಅದಕ್ಕಿಂತ ವಿಭಿನ್ನವಾಗಿದೆ ಎನ್ನಬಹುದು.  ನಿರ್ದೇಶಕ ಮಣಿರತ್ನಂ 'ಪೊನ್ನಿಯನ್ ಸೆಲ್ವನ್'  ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಮೊದಲ ಭಾಗ 2022ರಲ್ಲಿ ಬಿಡುಗಡೆ ಆಗಲಿದ್ದು, ಈ ಚಿತ್ರಕ್ಕೆ ಎ ಆರ್‌ ರೆಹೆಮಾನ್ ಸಂಗೀತ ನೀಡುತ್ತಿದ್ದಾರೆ.
 

Follow Us:
Download App:
  • android
  • ios