ಬಾಲಿವುಡ್ ನಟ ಸೋನು ಸೂದ್ ಲಾಕ್‌ಡೌನ್‌ ಸಮಯದಿಂದಲೂ ಬಹಳಷ್ಟು ಜನರಿಗೆ ನೆರವಾಗುತ್ತಿದ್ದಾರೆ. ಲಾಕ್‌ಡೌನ್ ಮುಗಿದರೂ ನಟ ಈಗಲೂ ಜನರಿಗೆ ನೆರವಾಗುತ್ತಲೇ ಇದ್ದಾರೆ. ನೆರವು ಕೇಳಿ ನಟ ಸೋನು ಸೂದ್‌ನನ್ನು ದಿನವೊಂದರಲ್ಲಿ ಮೇಲ್, ಮೆಸೇಜ್ ಮೂಲಕ ಸಂಪರ್ಕಿಸುವವರ ಸಂಖ್ಯೆ 32 ಸಾವಿರಕ್ಕೂ ಹೆಚ್ಚು.

ನಿರಂತರವಾಗಿ ನೆರಿವಿಗಾಗಿ ಬೇಡಿಕೆ ಬರುತ್ತಿರುವುದರಿಂದ ಹಲವರಿಗೆ ನಾನು ನೆರವಾಗಲು ಸಾಧ್ಯವಾಗದೆ ಇರಬಹುದು. ನನ್ನನ್ನು ಕ್ಷಮಿಸಿ ಎಂದು ನಟ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾವಿರಗಟ್ಟಲೆ ಮೆಸೇಜ್ ಬರುತ್ತಿರುವುದಾಗಿ ನಟ ತಿಳಿಸಿದ್ದಾರೆ.

ಯುವತಿ ಕಣ್ಣೀರು ಒರೆಸಿದ ನಿಜನಾಯಕ, ಸಮಾಜ ಸೇವೆಯೇ ಸೋನು ಸೂದ್ ಕಾಯಕ

1137 ಮೇಲ್, 19000 ಫೇಸ್‌ಬುಕ್ ಮೆಸೇಜ್, 6741 ಟ್ವಿಟರ್ ಮೆಸೇಜ್ ಇಂದು ಬಂದಿದೆ. ಇದು ಸಾಮಾನ್ಯವಾಗಿ ಒಂದು ದಿನದಲ್ಲಿ ಬರುವ ಮೆಸೇಜ್ ಸಂಖ್ಯೆ. ಆದರೆ ಪ್ರಿಯೊಬ್ಬರನ್ನು ನಾನು ತಲುಪುವುದು ಅಸಾಧ್ಯ. ನಾನು ನನ್ನಿಂದಾದಷ್ಟು ಮಾಡುತ್ತಿದ್ದೇನೆ. ನಿಮ್ಮ ಮೆಸೇಜ್ ನಾನು ಮಿಸ್‌ ಮಾಡ್ಕೊಂಡಿದ್ರೆ ಕ್ಷಮಿಸಿ ಎಂದಿದ್ದಾರೆ.

ಬುಧವಾರ ಕರ್ನಾಟಕ ಮಹಿಳೆಯೊಬ್ಬರು ನೆರವು ಕೋರಿ ಮೆಸೇಜ್ ಮಾಡಿದ್ದರು. ಹೆಲೋ ಸರ್, ನಾನು ವರ ಮಹಾಲಕ್ಷ್ಮಿ. ಕರ್ನಾಟಕದಲ್ಲಿದ್ದೇನೆ. ನಾನು ದಿವ್ಯಾಂಗಳು. ಎರಡು ವರ್ಷ ಹಿಂದೆ ತಂದೆ ತೀರಿಕೊಂಡರು. ನನಗೆ ಆದಾಯ ಮೂಲವಿಲ್ಲ. ತರಕಾರಿ ಅಂಗಡಿ ತೆರೆಯಲು ನನಗೆ ನಿಮ್ಮ ನೆರವು ಬೇಕು ಎಂದು ಕೇಳಿಕೊಂಡಿದ್ದರು.

ನಾನು ನ್ಯಾಷನಲ್ ಹೀರೋ ಅಲ್ಲ, ನನ್ನ ಕೈಲಾಗಿದ್ದನ್ನು ಮಾಡ್ತಿದ್ದೇನಷ್ಟೇ: ಸೋನು ಸೂದ್

ನಿಮಗಾಗಿ ತರಕಾರಿ ಅಂಗಡಿ ಕೆಲಸ ಆರಂಭಿಸುವುದರಿಂದ ಇಂದಿನ ಬೆಳಗು ಆರಂಭಿಸೋಣ. ನೀವು ತಯಾರಾಗಿ ಎಂದು ಸೋನು ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಷ್ಟೇ ನಟ ಸೋನು ಛತ್ತೀಸ್‌ಗಡ್‌ನ ಬಾಲಕಿಗೆ ಪುಸ್ತಕಗಳನ್ನು, ಮನೆಯನ್ನೂ ಒದಗಿಸುವ ಭರವಸೆ ನೀಡಿದ್ದರು.