ಲಾಕ್‌ಡೌನ್‌ ವೇಳೆಯಲ್ಲೇ ವಕ್ಕರಿಸಿದ ಕ್ಯಾನ್ಸರ್, ಸೈಕಲ್ ತುಳಿದಿದ್ದೇಕೆ ನಟ ಸಂಜಯ್‌ ದತ್‌..?

ನಿರಂತರವಾಗಿ ನಾನು ಎರಡು-ಮೂರು ತಿಂಗಳು ಜಿಮ್‌ನಲ್ಲಿ ಬೆವರು ಸುರಿಸಿದೆ. ನಾನು ಕ್ಯಾನ್ಸರ್ ಜಯಿಸಿದ್ದೆ, ಆ ಕಾಯಿಲೆಯ ಕಪಿಮುಷ್ಠಿಯಿಂದ ಹೊರಗೆ ಬಂದಿದ್ದೆ. ನನ್ನ ಪ್ರಕಾರ ವೈದ್ಯಲೋಕ ಕ್ಯಾನ್ಸರ್ ಗುಣಪಡಿಸುವ ಮೆಡಿಸಿನ್ ಹೊಂದಿದೆ. 

Bollywood actor Sanjay Dutt talks about his cancer on lockdown time srb

ಬಾಲಿವುಡ್ ಖ್ಯಾತ ನಟ ಸಂಜಯ್ ದತ್ (Sanjay Dutt) ಲಾಕ್‌ಡೌನ್ ಟೈಮ್‌ನಲ್ಲಿ ತಮಗೆ ವಕ್ಕರಿಸಿದ ಕ್ಯಾನ್ಸರ್ ಕುರಿತು ಸವಿಸ್ತಾರವಾಗಿ ಮಾತನಾಡಿದ್ದಾರೆ. ಲಾಕ್‌ಡೌನ್ ಟೈಮ್‌ನಲ್ಲಿ ಅದೊಂದು ದಿನ ನನಗೆ ಮೆಟ್ಟಿಲು ಹತ್ತುತ್ತಿದ್ದ ವೇಳೆ ಉಸಿರಾಡಲು ಸಾಧ್ಯವೇ ಆಗಲಿಲ್ಲ. ತಕ್ಷಣವೇ ಆಸ್ಪತ್ರೆಗೆ ಧಾವಿಸಿ ಹೋದೆ. ಅಲ್ಲಿ ನನ್ನ ಶ್ವಾಸಕೋಶದಲ್ಲಿ ನೀರು ತುಂಬಿದೆ ಎನ್ನಲಾಯ್ತು. ಅದು ಟಿಬಿ ಆಗಿರಬಹುದು ಎಂದು ಅಲ್ಲಿ ಹೇಳಲಾಯ್ತು. ಆದರೆ, ಬಳಿಕ ಅದನ್ನು ಟೆಸ್ಟ್ ಮಾಡಲಾಗಿ ನನಗೆ ಆಗಿದ್ದು ಕ್ಯಾನ್ಸರ್ ಎಂದು ಪತ್ತೆಯಾಯ್ತು. 

ನನಗೆ ಕ್ಯಾನ್ಸರ್‌ (Cancer) ಆಗಿದೆ ಎಂದು ಗೊತ್ತಾದ ತಕ್ಷಣ ನಾನು ಎರಡು-ಮೂರು ತಾಸು ಜೋರಾಗಿ ಅತ್ತುಬಿಟ್ಟೆ. ನನಗೆ ನನ್ನ ಮುಂದಿನ ಜೀವನದ ಬಗ್ಗೆ ಭವಿಷ್ಯದ ಬಗ್ಗೆ ಯೋಚನೆ ಬಂದು ಭಯವಾಗಿತ್ತು. ಆದರೆ ನಾನು ಕ್ಯಾನ್ಸರ್‌ ಎದುರಿಸಲೇಬೇಕಿತ್ತು. ನಾನು ಡಾಕ್ಟರ್ ಹೇಳಿದಂತೆ ಕೀಮೋ ಥೆರಪಿ ತೆಗೆದುಕೊಂಡೆ. ಆದರೆ ಮನದಲ್ಲಿ ' ಈ ಖಾಯಿಲೆಯಿಂದ ನಾನು ಬಚಾವ್ಆಗಲೇಬೇಕು' ಎಂದು ದೃಢ ನಿರ್ಧಾರ ಮಾಡಿಕೊಂಡು ಬೈಕ್ ಹತ್ತಿದೆ. ಬಳಿಕ ಎರಡು ತಾಸು ನಿರಂತರವಾಗಿ ಸೈಕಲ್ ತುಳಿದು ದೇಹ ದಣಿಸಿದೆ. ನಾನು ಅದರಿಂದ ಹೊರಬರಲು ದೇಹದಂಡನೆಗೆ ತೊಡಗಿದೆ. 

ಕಾಶೀನಾಥ್ ಶಿಷ್ಯ ಭಗತ್ ರಾಜ್‌ ಬಟ್ಟೆ ಬಗ್ಗೆ ಸಿನಿಮಾ ಮಾಡಿದ್ರಾ? ಯಾರಿದು ಬಾಲಿವುಡ್‌ ನಟ ಕಮಲ್?

ನಿರಂತರವಾಗಿ ನಾನು ಎರಡು-ಮೂರು ತಿಂಗಳು ಜಿಮ್‌ನಲ್ಲಿ ಬೆವರು ಸುರಿಸಿದೆ. ನಾನು ಕ್ಯಾನ್ಸರ್ ಜಯಿಸಿದ್ದೆ, ಆ ಕಾಯಿಲೆಯ ಕಪಿಮುಷ್ಠಿಯಿಂದ ಹೊರಗೆ ಬಂದಿದ್ದೆ. ನನ್ನ ಪ್ರಕಾರ ವೈದ್ಯಲೋಕ ಕ್ಯಾನ್ಸರ್ ಗುಣಪಡಿಸುವ ಮೆಡಿಸಿನ್ ಹೊಂದಿದೆ. ಆದರೆ, ಔಷಧಿ ಕಂಪನಿಗಳ ಮಾಫಿಯಾ ಕಾರಣಕ್ಕೆ ಅಥವಾ ಬೇರೇನೋ ಒಳ ಒಪ್ಪಂದದ ಕಾರಣಕ್ಕೆ ಕ್ಯಾನ್ಸರ್ ಮೆಡಿಸಿನ್ ಪೇಶಂಟ್ಸ್‌ಗಳಿಗೆ ಸಿಗುತ್ತಿಲ್ಲ. ಕ್ಯಾನ್ಸರ್ ಔಷಧ ದೊರಕದೇ ಬಹಳಷ್ಟು ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ನಾವಿಬ್ಬರೂ ಒಟ್ಟಿಗೇ ಇರಬೇಕೆಂದು ಪೋಷಕರನ್ನೂ ದೂರ ಮಾಡಿದ್ವಿ; ಕಾಜೋಲ್ ದೇವಗನ್

ನಾನು ಫಾರ್ಮಾಸಿಟಿಕಲ್ ಕಂಪನಿಗಳಿಗೆ ಕೈ ಮುಗಿದು ಕೇಳಿಕೊಳ್ಳುವುದು ಇಷ್ಟೇ. ನಿಮ್ಮ ಬಳಿ ಕ್ಯಾನ್ಸರ್ ಗುಣ ಪಡಿಸುವ ಔಷಧಗಳಿವೆ. ದಯವಿಟ್ಟು ಅವುಗಳನ್ನು ಉಪಯೋಗಿಸಲು ಕೊಟ್ಟು ಅನಾವಶ್ಯಕ ಜೀವ ಕಳೆದುಕೊಳ್ಳುತ್ತಿರುವ ಜೀವಗಳನ್ನು ಉಳಿಸಿ. ಜೀವಗಳನ್ನು ಉಳಿಸುವುದು ತುಂಬಾ ಮುಖ್ಯ' ಎಂದಿದ್ದಾರೆ ನಟ ಸಂಜಯ್ ದತ್.

ಗೌರಿ ಜೊತೆ ಲವ್ ಹೇಗಾಯ್ತು ಎಂಬ ಸ್ಟೋರಿಯನ್ನು ಚಾಚೂ ತಪ್ಪದೇ ಹೇಳಿದ ಶಾರುಖ್ ಖಾನ್!

Latest Videos
Follow Us:
Download App:
  • android
  • ios