ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಲಕ ವಿಶ್ವದ ಗಮನ ಸೆಳೆದವರು ಮನೋಜ್ ಬಾಜಪೇಯಿ. ಅಷ್ಟು ವರ್ಷದಿಂದ ಮುಂಬೈಯಲ್ಲಿದ್ದರೂ ನಾನಿನ್ನೂ ಬಿಹಾರಿ ಹುಡುಗನೇ ಅಂತ ಅವ್ರು ಹೇಳಿದ್ಯಾಕೆ..
ಪ್ರೈಮ್‌ನಲ್ಲಿ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಬಂದಮೇಲೆ ಮನೋಜ್ ಬಾಜಪೇಯಿ ಅಂದ್ರೆ ಹಲವರಿಗೆ ನೆನಪಾಗೋದು ಇಂಟಲಿಜೆನ್ಸ್ ಆಫೀಸರ್ ಶ್ರೀಕಾಂತ್ ತಿವಾರಿನೇ. ಆ ಲೆವೆಲ್‌ನ ಪ್ರಸಿದ್ಧಿ, ಹಣ ಎರಡನ್ನೂ ಫ್ಯಾಮಿಲಿ ಮ್ಯಾನ್ ಅವರಿಗೆ ತಂದುಕೊಟ್ಟಿದೆ. ಅದರ ಜೊತೆಗೆ ಡಯಲ್ 100 ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆ ಬಂದರೂ ಮನೋಜ್ ಆಕ್ಟಿಂಗ್‌ಗೆ ಎಲ್ಲರೂ ವೆರಿಗುಡ್ ಅಂದಿದ್ದಾರೆ. ಇಂಥಾ ಪ್ರತಿಭಾವಂತ ನಟ ಮುಂಬೈಗೆ ಬಂದು ಕೆಲವು ದಶಕಗಳಾಗಿವೆ. ಇಲ್ಲೇ ಮನೆಯಿದೆ, ಪತ್ನಿ ಮಗಳ ಜೊತೆಗೆ ಇಲ್ಲೇ ಇರುತ್ತಾರೆ. ಇಷ್ಟೆಲ್ಲ ಆದರೂ ಅವರಿಗೆ ಇಂದಿಗೂ ಮುಂಬೈ ಅವರ ನೆಲ ಅಂತ ಅನಿಸಿಲ್ಲವಂತೆ. ಮುಂಬೈಗೆ ನಾನು ಹೊರಗಿನವನು ಅಂತಲೇ ಅವರ ಅಂತರಂಗ ಸದಾ ಹೇಳುತ್ತಿರುತ್ತಂತೆ.
ಮನೋಜ್ ಬಾಜಪೇಯಿ ಫ್ಯಾಮಿಲಿ ಮ್ಯಾನ್‌ನಲ್ಲಿ ಅಪ್ಪಟ ಮಧ್ಯಮ ವರ್ಗದ ವ್ಯಕ್ತಿ. ಕಾಸು ಕಾಸನ್ನೂ ಲೆಕ್ಕ ಮಾಡಿ ಖರ್ಚು ಮಾಡುವ, ಹಳೆಯ ಮೈಂಡ್‌ಸೆಟ್‌ನಲ್ಲೇ ಇರುವ, ಕುಟುಂಬ ಸಮಸ್ಯೆಗಳ ಒದ್ದಾಟದ ನಡುವೆಯೂ ಇಂಟೆಲಿಜೆನ್ಸ್‌ನಲ್ಲಿ ವರ್ಕ್ ಮಾಡುವ ಅಗಾಧ ಚಾಣಾಕ್ಷತನದ ವ್ಯಕ್ತಿ. ಆದರೆ ರಿಯಲ್ ಲೈಫ್‌ನಲ್ಲಿ ಅವರು ಶ್ರೀಮಂತ ವ್ಯಕ್ತಿ. ಇದೀಗ ತಾನೇ ಬ್ರಾಂಡ್ ನ್ಯೂ ಲಕ್ಸುರಿ ಕಾರ್‌ನ ಒಡೆಯನಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ನಟರ ಬಳಿ ಇಂಥಾ ಕಾರುಗಳಿರುವುದು ಸಾಮಾನ್ಯವೇ. ಆದರೆ ಮನೋಜ್ ಇತರ ನಟರ ಹಾಗಲ್ಲ. ಇವತ್ತು ಅವರು ಗಳಿಸಿರುವ ಒಂದೊಂದು ಕಾಸೂ ಸ್ವತಃ ಅವರೇ ದುಡಿದು ಗಳಿಸಿದ್ದು. ತಂದೆಯ ಆಸ್ತಿಯಾಗಲಿ, ಹಣವಾಗಲಿ ಅವರಿಗೆ ಬಂದಿಲ್ಲ. ಮನೋಜ್ ಬಾಜಪೇಯಿ ಹಿನ್ನೆಲೆಯೂ ಇಂಟರೆಸ್ಟಿಂಗ್.
ಪಾರದರ್ಶಕ ಕಂಗನಾ.. 'ಅಂಧ ಭಕ್ತರೇ ಏನಂತೀರಿ ನಿಮ್ಮಕ್ಕನ ಈ ಸಂಸ್ಕಾರಕ್ಕೆ?'
ಮನೋಜ್ ಬಾಜಪೇಯಿ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಲ್ವ ಅನ್ನುವ ಸಣ್ಣ ಊರಲ್ಲಿ ಹುಟ್ಟಿದ್ದು. ತಂದೆ ಕೃಷಿಕರು. ತಾಯಿ ಹೌಸ್‌ವೈಫ್. ಐದು ಜನ ಸಹೋದರ ಸಹೋದರಿಯರಿದ್ದ ಕುಟುಂಬದಲ್ಲಿ ಮನೋಜ್ ಎರಡನೇ ಮಗ. ಆಗ ಮಕ್ಕಳನ್ನು ಓದಿಸುವುದೇ ಸವಾಲು. ಮನೋಜ್ ಸಣ್ಣ ಹಟ್ಟಿಶಾಲೆಯಲ್ಲಿ ನಾಲ್ಕನೇ ಕ್ಲಾಸ್‌ವರೆಗೂ ಓದಿದ್ದು. ಶಾಲೆಗೆ ರಜೆ ಇರುವಾಗ ಮನೋಜ್ ಹೊಲದಲ್ಲಿ ದುಡಿಯಲು ಹೋಗುತ್ತಿದ್ದರು. ಆದರೆ ಚಿಕ್ಕ ವಯಸ್ಸಿನಿಂದಲೂ ಅವರಿಗೆ ತಾನೊಬ್ಬ ನಟನಾಗಬೇಕೆಂಬ ಕನಸಿತ್ತು. ಮುಂದೆ ಹದಿನೇಳನೇ ವಯಸ್ಸಿಗೆ ದೆಹಲಿಗೆ ಬಂದಾಗ ಮನೋಜ್ ಅವರನ್ನು ಸೆಳೆದದ್ದು ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ. ಓಮ್ ಪುರಿ, ನಾಸಿರುದ್ದೀನ್ ಶಾ ಅವರಂಥ ನಟರನ್ನು ಬೆಳೆಸಿದ ಎನ್‌ಎಸ್‌ಡಿಗೆ ತಾನೂ ಹೋಗಬೇಕೆಂದು ಬಯಸಿದರು. ಆದರೆ ಬ್ಯಾಡ್‌ಲಕ್. ಅವರಿಗೆ ಪ್ರವೇಶ ಸಿಗಲಿಲ್ಲ. ಛಲ ಬಿಡದೇ ಮೂರು ಸಲ ಪ್ರಯತ್ನಿಸಿದರು. ಮೂರನೇ ಸಲವೂ ಇವರ ಅರ್ಜಿ ರಿಜೆಕ್ಟ್ ಆದಾಗ ಹತಾಶೆಯಿಂದ ಆತ್ಮಹತ್ಯೆಗೆ ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ಬೇರೆ ನಾಟಕ ತಂಡಗಳ ಮೂಲಕ, ಸಿನಿಮಾ ಮೂಲಕ ಹೆಸರು ಸಂಪಾದಿಸಿದ್ದ ಮನೋಜ್ ನಾಲ್ಕನೇ ಸಲ ಮತ್ತೆ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ಅಪ್ಲೈ ಮಾಡಿದರು. ಅದೃಷ್ಟವೋ ದುರಾದೃಷ್ಟವೋ, ವಿದ್ಯಾರ್ಥಿಯಾಗಿ ಅಲ್ಲ, ಟೀಚರ್ ಆಗಿ ಬನ್ನಿ ಅನ್ನೋ ಆಹ್ವಾನ ಎನ್‌ಎಸ್‌ಡಿಯಿಂದ ಸಿಕ್ಕಿತು.
ನಟಿ ರಾಧಿಕಾ ಆಪ್ಟೆ ಟಾಪ್ಲೆಸ್ ಇಂಟಿಮೇಟ್ ಫೋಟೋ ವೈರಲ್; ಬಹಿಷ್ಕಾರಕ್ಕೆ ಒತ್ತಾಯ!
ಸಿನಿಮಾ ಬದುಕಿನುದ್ದಕ್ಕೂ ಸ್ಟ್ರಗಲ್ ಮಾಡುತ್ತಲೇ ಬಂದಿರುವ ಮನೋಜ್ ಬಾಜಪೇಯಿ ಬದುಕು ಇವತ್ತು ಬದಲಾಗಿದೆ. ಅವರೂ ಲಕ್ಸುರಿ ಕಾರು, ಮನೆ ಕಾಣುವಂತಾಗಿದೆ. ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಹಾಲಿವುಡ್‌ನಲ್ಲೂ ಆಫರ್‌ಗಳು ಬಂದಿವೆ. ಮನೋಜ್ ಇವತ್ತು ಓಟಿಟಿಯ ಸೂಪರ್ ಸ್ಟಾರ್ ಅಂತಲೇ ಗುರುತಿಸಿಕೊಂಡಿದ್ದಾರೆ.

ಇಷ್ಟೆಲ್ಲ ಆದರೂ ಅವರು ಇವತ್ತಿಗೂ ಸ್ವಲ್ಪ ಬಿಡುವು ಸಿಕ್ಕರೂ ನೇರ ಬಿಹಾರದ ತನ್ನ ಹಳ್ಳಿಗೆ ಹೋಗಿ ಬಿಡುತ್ತಾರೆ. ತಿಂಗಳಲ್ಲಿ ಒಮ್ಮೆಯಾದರೂ ಅಲ್ಲಿಗೆ ಹೋಗದೇ ಇದ್ದರೆ ಅವರಿಗೆ ನೆಮ್ಮದಿ ಇರೋದಿಲ್ಲ. 'ಮೊದ ಮೊದಲು ಸಿನಿಮಾಕ್ಕಾಗಿ ಬಿಹಾರದ ನನ್ನ ಊರಿಂದ ಮುಂಬೈಗೆ ಬರುತ್ತಿದ್ದೆ. ಆಮೇಲೆ ಹೆಂಡತಿ, ಮಕ್ಕಳಿಗಾಗಿ ಬರುತ್ತಿದ್ದೇನೆ. ಇವತ್ತು ನಾನು ತಕ್ಕಮಟ್ಟಿನ ಬೆಳವಣಿಗೆ ಸಾಧಿಸಿದ್ದರೂ, ಮುಂಬೈಗೆ ನಾನು ಪರಕೀಯನೇ. ಇದು ನನ್ನ ನೆಲ, ನನ್ನ ಮನೆ ಅಂತ ಯಾವತ್ತೂ ಅನಿಸಿಲ್ಲ' ಅನ್ನುತ್ತಾರೆ ಮನೋಜ್. ಇವತ್ತು ತನ್ನ ಮುಂದಿರುವ ಎಲ್ಲ ಲಕ್ಸುರಿಗಳ ನಡುವೆಯೂ ತನ್ನೂರನ್ನು, ಅಲ್ಲಿನ ನೆಲವನ್ನು ನೆನೆಸುತ್ತಲೇ ಇರುವ ಈ ನಟ ತನ್ನ ಸರಳತೆಯಿಂದಲೂ ನಮಗೆ ಹತ್ತಿರವಾಗತ್ತಾರೆ.
ಪ್ರೀತಿಗೆ ಫಿಲ್ಟರ್ ಇಲ್ಲ ಎನ್ನುತ್ತ ಗಂಡನಿಗೆ ಓಪನ್ನಾಗಿ ಕಿಸ್ ಮಾಡಿದ ಬಿಗ್ಬಾಸ್ ಬ್ಯೂಟಿ!
