ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಿಗ್ ಬಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಮುಂಬೈನ ನಾನವಟಿ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಬಚ್ಚನ್ ಎಂದಿನಂತೆ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು, ಏನೂ ಆಗಿಲ್ಲವೆಂಬಂತೆ ಇರುವುದರಿಂದ ಏನಾಗದಿದೆ ಎಂಬುವುದು ಅರ್ಥವಾಗದೇ ಗೊಂದಲಕ್ಕೂ ಒಳಗಾಗಿದ್ದಾರೆ ಕೆಲವರು.

ನಟ ಅಮಿತಾಭ್ ಬಚ್ಚನ್‌ಗೆ ದಾದಾ ಸಾಹೇಬ್ ಫಾಲ್ಕೆ ಗರಿ

 

ಕಳೆದು ಹಲವು ತಿಂಗಳಿಂದ ಯಕೃತ್ ಸಮಸ್ಯೆಯಿಂದ ಬಳಲುತ್ತಿರುವ ಬಚ್ಚನ್ ಆರೋಗ್ಯದಲ್ಲಿ ಮಂಗಳವಾರ ಅತೀವ ಏರು ಪೇರು ಕಂಡಿತ್ತು. ಅದಕ್ಕೆ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವಿಶೇಷ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದು, ಅಭಿಮಾನಿಗಳ ಆತಂಕದ ಪ್ರಶ್ನೆಗಳಿಗೆ ಆಸ್ಪತ್ರೆಯ ವೈದ್ಯರೇ ಉತ್ತರಿಸಿದ್ದಾರೆ. ಮಿಸ್ಟರ್ ಬಚ್ಚನ್ ರೂಟೀನ್ ಚೆಕ್ ಅಪ್‌ಗೆ ಬಂದಿದ್ದು, ಆರೋಗ್ಯದಿಂದ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಲು ಕೆಬಿಸಿಗೆ ಪಾಕ್‌ ಮೊರೆ!

 

77 ವರ್ಷಗಳಾದರೂ ಎಂಗ್ ಆಗಿಯೇ ಕಾಣುವ ಅಮಿತಾಬ್, ಈ ಹಿಂದೆಯೇ ತಮ್ಮ ಲಿವರ್ ಕೇವಲ ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದರು. ಇದಕ್ಕೆ ಅಗತ್ಯ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದ್ದರು.

 

ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಬಚ್ಚನ್ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಕರ್ವಾ ಚೌತಿ ಅಂಗವಾಗಿ ತಮ್ಮ ಬ್ಲಾಗ್‌ನಲ್ಲಿಯೇ 'The Better half!ಗಂಡನಿಗಾಗಿ ಉಪವಾಸ ಇರುವವರಿಗೆ ಕರ್ವಾ ಚೌತ್‌ ಶುಭಾಶಯಗಳು,' ಎಂದು ಪತ್ನಿ ಜಯಾಳೊಂದಿಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಉತ್ತರ ಗೊತ್ತಿದ್ರೂ ಏಳು ಕೋಟಿ ಜಸ್ಟ್‌ ಮಿಸ್‌!

ಸದ್ಯ ಮೂರು ದಿನಗಳಿಂದ ಬಚ್ಚನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಹೆಪಟೈಟಿಸಿ ಬಿ ಸಮಸ್ಯೆಯಿಂದ ಬಳಲುತ್ತಿದ್ದರು ಬಚ್ಚನ್. ಬಾಲವುಡ್ ಬಿಗ್ ಸ್ಕೀನ್‌ನಲ್ಲಿ ಮಾತ್ರವಲ್ಲ, ಹಿಂದಿ ಕೋಟ್ಯಾಧಿಪತಿ ಮೂಲಕವೂ ಅಮಿತಾಬ್ ಮನೆ ಮಾತಾಗಿದ್ದಾರೆ. ತಮ್ಮ ಕಂಚಿನ ಶಾರೀರ, ಆಜಾನುಬಾಹು ಶರೀರ, ಮನೋಜ್ಞ ಅಭಿನಯದಿಂದ ಅಮಿತಾಬ್ ಬಾಲಿವುಡ್‌ ಅನಭಿಷಕ್ತ ನಟನಾಗಿ ಮೆರೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ರೈತನ ಮಗನಾದ ಕೋಟ್ಯಧಿಪತಿ, 7 ಕೋಟಿ ತಪ್ಪಿಸಿತು ಆ ಒಂದು ಪ್ರಶ್ನೆ!