ಮಗಧೀರ ಸಿನಿಮಾದಲ್ಲಿ ಶ್ರೀಹರಿ ಪಾತ್ರ ಮಾಡಿದ್ದ ಹಿರಿಯ ನಟ ಶ್ರೀಹರಿ ಕುರಿತು ಸಿನಿಮಾ ಬರಲಿದೆ ಎಂಬ ಮಾತು ಕೇಳಿ ಬಂದಿದೆ. ದಿವಂಗತ ನಟ ಶ್ರೀಹರಿ ಪತ್ನಿ ಡಿಸ್ಕೋ ಶಾಂತಿ ನಟನ ಜೀವನವನ್ನು ತೆರೆ ಮೇಲೆ ತರುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಶ್ರೀಹರಿಯ ಮಗ ಮೇಘಾಂಶ ತಂದೆಯ ಪಾತ್ರವನ್ನು ತೆರೆ ಮೇಲೆ ನಿರ್ವಹಿಸಲಿದ್ದಾರೆ. 1964ರಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಎಲ್ಲಮಾರುವಿನಲ್ಲಿ ಜನಿಸಿಸ ಶ್ರೀಹರಿ ಕುಟುಂಬ ಹೈದರಾಬಾದ್‌ನ ಬಾಲನಗರದಲ್ಲಿ ನೆಲೆಸಿತ್ತು.

ಸಮಂತಾ ಸಂಭಾವನೆ ಬೇಡಿಕೆ ಕೇಳಿ ನಿರ್ಮಾಪಕರೇ ಸುಸ್ತು..!

ಶ್ರೀಹರಿ ಸ್ಟಂಟ್ ಫೈಟರ್ ಆಗಿ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದರು. ಆದರೆ ನಂತರ ತಮ್ಮ ನಟನೆಯಿಂದಲೇ ನಟ ಅಭಿಮಾನಿಗಳ ಮನಸಲ್ಲಲಿ ತಮ್ಮದೇ ಸ್ಥಾನ ಸೃಷ್ಟಿಸಿಕೊಂಡಿದ್ದಾರೆ.

ಮಗಧೀರ ಸಿನಿಮಾದಲ್ಲಿ ಶೇರ್‌ಖಾನ್ ಹಾಗೂ ಸೋಲಮನ್ ಪಾತ್ರ ಎಂದಿಗೂ ಮೆರೆಯಲಾಗದು. ಈ ಪಾತ್ರಗಳ ಮೂಲಕ ಶ್ರೀಹರಿ ಎಲ್ಲರಿಗೂ ಚಿರಪರಿಚಿತರಾದರು. ನಂತರ ಆಹಾ ಎನ ಪೆಲ್ಲತನ ಸಿನಿಮಾದಲ್ಲಿ ದುರ್ಗಾ ಮೂಲಕ ಹೆಸರಾದರು.

ಸುಶಾಂತ್ ಕೇಸ್ CBIಗೆ: ಸುಪ್ರೀಂ ತೀರ್ಪು ಸ್ವಾಗತಿಸಿದ ಬಾಲಿವುಡ್ ಸ್ಟಾರ್ಸ್

ವೃಂದಾವನ್, ಡಾನ್ ಸೀನು, ಬ್ರೋಕರ್, ಧೀ, ಸಿಂಹಾಚಲಂ, ದೇವ, ಸಂಬಯ್ಯ ಶ್ರೀಹರಿಯ ಪ್ರಮುಖ ಸಿನಿಮಾಗಳು. ಶ್ರೀಹರಿ 2013 ಅಕ್ಟೋಬರ್‌ 9ರಂದು 49ನೇ ವಯಸ್ಸಿನಲ್ಲಿ ನಿಧನರಾದರು.

ವಿಶ್ವ ಛಾಯಾಗ್ರಹಣ ದಿನ: ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾದ ರಾಜು ಡವಳಗಿ ತೆಗೆದ ವಿಡಿಯೋ

"