ಬಾಲಿವುಡ್ ಮಾಜಿ ನಟಿ ಸನಾ ಖಾನ್ ಮದುವೆಯಾದ ಮೇಲೆ ಸಿಕ್ಕಾಪಟ್ಟೆ ರಿಲೀಜಿಯಸ್ ಆಗಿದ್ದಾರೆ. ಧರ್ಮ, ಆಚರಣೆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ ಸನಾ.

ಇಸ್ಲಾಂ ಧರ್ಮಗುರುವನ್ನು ವಿವಾಹವಾದ ನಟಿ ಸನಾ ಖಾನ್ ಮದುವೆಯಾದ ಮೇಲೆ ಹೆಚ್ಚು ಧಾರ್ಮಿಕ ಒಲವು ತೋರಿಸುತ್ತಿದ್ದಾರೆ. ಅದಕ್ಕೂ ಮುನ್ನ ನಟಿ ತಾವು ಸಿನಿಮಾ, ಬಣ್ಣದ ಬದುಕಿನಿಂದ ಹೊರ ಬರುವುದಾಗಿ ಹೇಳಿದ್ದರು.

ದೇವರ ಸ್ವಂತ ನಾಡಿನ ಮೇಲೆ ಪ್ರೀತಿಯಾಗಿದೆ ಎಂದ ಸನ್ನಿ

ಇದೀಗ ನೀವು ಬೇಸರದಲ್ಲಿದ್ದೀರಾ..? ಹಾಗಾದ್ರೆ ನೀವು ಖಂಡಿತಾ ನಮಾಝ್ ತಪ್ಪಿಸಿರುತ್ತೀರಿ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೇ ಈ ಬಗ್ಗೆ ಒಂದು ಸೂಚನೆಯನ್ನೂ ಕೊಟ್ಟಿದ್ದಾರೆ.

ಎಂತಹ ಸಂದರ್ಭವೇ ಇರಲಿ, ಯಾವ ಸ್ಥಿತಿಯೇ ಇರಲಿ, ನಮಾಝ್ ಮಾಡುವುದನ್ನು ಮಾತ್ರ ತಪ್ಪಿಸಬೇಡಿ ಎಂದಿದ್ದಾರೆ ಸನಾ ಖಾನ್. ನಟಿ ಇಸ್ಲಾಂ ಕುರಿತ ಬಹಳಷ್ಟು ವಿಚಾರಗಳನ್ನು ಶೇರ್ ಮಾಡುತ್ತಿದ್ದಾರೆ.