ಬಿಗ್‌ಬಾಸ್ ಟ್ಯಾಲೆಂಟ್ ಮ್ಯಾನೇಜರ್ ಪಿಸ್ತಾ ಧಕಡ್ ಅವರ ಸಾವಿನ ಸುದ್ದಿಯನ್ನು ಬಿಗ್‌ಬಾಸ್ 13ರ ಹಿಮಾಂಶಿ ಖುರಾನ ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪಿಸ್ತ ಅವರ ಪೋಸ್ಟ್ ಹಾಕಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಪಿಸ್ತ ಅವರು ಬಿಗ್‌ಬಾಸ್ ಹೋಸ್ಟ್ ಸಲ್ಮಾನ್ ಖಾನ್ ಅವರ ಜೊತೆಗಿರುವ ಫೋಟೋ ಪೋಸ್ಟ್ ಮಾಡಿ RIP ಪಿಸ್ತ, ನಿಮ್ಮ ಸಾವಿನ ಸುದ್ದಿ ಈಗಷ್ಟೇ ಸಿಕ್ಕಿತು. ಈಗಲೂ ಶಾಕ್‌ನಲ್ಲಿದ್ದೇನೆ, ಬದುಕು ಎಷ್ಟು ಅನಿಶ್ಚಿತ ಎಂದಿದ್ದಾರೆ.

ಬಿಕಿನಿಯಿಂದ ಮ್ಯಾಕ್ಸಿ ತನಕ: ಪೂಜಾ ಹೆಗ್ಡೆಯ ಹಾಟ್ ಫ್ಯಾಷನ್ ವಾರ್ಡ್‌ರೋಬ್

ಒಂದಷ್ಟು ಸಮಯದಿಂದ ಬಿಗ್‌ಬಾಸ್ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪಿಸ್ತ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಟೂವೀಲ್ಹರ್‌ನಲ್ಲಿ ಬರುತ್ತಿದ್ದಾಗ 24 ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ಸುತ್ತಲೂ ಕತ್ತಲಿದ್ದ ಕಾರಣ ಹೊಂಡ ಕಾಣಿಸದೆ ವಾಹನ ಅಪಘಾತವಾಗಿದೆ. ರಸ್ತೆಗೆ ಬಿದ್ದ ಪಿಸ್ತ ಮೇಲೆ ವ್ಯಾನ್ ಒಂದು ಹರಿದಿತ್ತು.