Asianet Suvarna News Asianet Suvarna News

ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ ನೋಡಿ ಸ್ಪರ್ಧಿಗಳು ಶಾಕ್

ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿ ಕಂಡು ಮನೆ ಮಂದಿ ಶಾಕ್. ಅಯ್ಯೋ ಎನಿದು ಸರ್ಪ್ರೈಸ್‌ ಎಂದ ವೀಕ್ಷಕರು ....

Bigg boss Hindi season 16 house witnesses entry of a cute dog as a new member vcs
Author
First Published Dec 26, 2022, 3:09 PM IST

ಹಿಂದಿ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 16 ದಿನಕ್ಕೊಂದು ವಿಭಿನ್ನ ಟ್ವಿಸ್ಟ್‌ಗಳನ್ನು ನೋಡುವ ಮೂಲಕ ವೀಕ್ಷಕರನ್ನು ಮನೋರಂಜಿಸುತ್ತಿದ್ದಾರೆ. ಅಲ್ಲದೆ ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಸ್ಪರ್ಧಿಗಳಿಗೆ ಏನಾದರೂ ಮನೋರಂಜನೆ ಅಥವಾ ಗಿಫ್ಟ್‌ ಕೊಡಬೇಕು ಎಂದು ಹೊಸ ಸದಸ್ಯರ ಎಂಟ್ರಿ ಕೊಡಿಸಿದ್ದಾರೆ. ಬಿಡುಗಡೆ ಆಗಿರುವ ಪ್ರೋಮೋ ನೋಡಿ ಎಲ್ಲರೂ ಖುಷ್ ಆಗಿದ್ದಾರೆ....

ಬಿಗ್ ಬಾಸ್‌ ಮನೆಯಲ್ಲಿ ಕ್ರಿಸ್ಮಸ್‌ ಮತ್ತು ಹೊಸ ವರ್ಷ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ ಹೀಗಾಗಿ ಸ್ಪರ್ಧಿಗಳು ಇಷ್ಟ ಪಡುವಂತೆ ಒಂದು ದಿನ ಇರಲಿದೆ ಹಾಗೇ ಅವರು ಕೇಳಿದ್ದನ್ನು ಅಥವಾ ಮಿಸ್ ಮಾಡಿಕೊಂಡಿದ್ದನ್ನು ನೀಡಲಾಗುತ್ತದೆ ಎಂದರು. ಮನೆಯವರನ್ನು ನೋಡಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ ಅಂತ ಬಿಗ್ ಬಾಸ್ ಮೊದಲೇ ಕುಟುಂಬದವರನ್ನು ಕರೆಸುವುದಿಲ್ಲ ಬದಲಿಗೆ ತಮ್ಮ ಪ್ರೀತಿಯ ಅಥವಾ ಒಂದು ಪ್ರೀತಿಯ ಶ್ವಾನವನ್ನು ಕರೆಸಲಾಗುತ್ತದೆ ಎಂದರು. ಕೆಲವು ಬೆಕ್ಕು ಕೆಲವರು ನಾಯಿ ಹೇಳಿದ್ದರು....ಆದರೆ ಎಂಟ್ರಿ ಕೊಟ್ಟಿದ್ದು ಮಾಹಿಮ್. 

ಹೌದು! ಸೇಂಟ್ ಬರ್ನಾರ್ಡ್ ಜಾತಿಗೆ ಸೇರಿದ ಶ್ವಾನ ಬಿಗ್ ಬಾಸ್ ಮುಖ್ಯ ದ್ವಾರದಿಂದ ಪ್ರವೇಶ ಪಡೆದುಕೊಳ್ಳುತ್ತದೆ. ಆಗ ಬಿಗ್ ಬಾಸ್‌ ಮನೆಯ ಹೊಸ ಸದಸ್ಯರನ್ನು ಬರ ಮಾಡಿಕೊಳ್ಳಿ ಅವರ ಹೆಸರು ಮಾಹಿಮ್ ಎಂದು ಹೇಳುತ್ತಾರೆ. ಅಬ್ದು ರೋಜಿಕ್ ಮಾಹಿಮ್‌ ಜೊತೆ ಆಟವಾಡುತ್ತಿರುವ ಪ್ರೋಮೋವನ್ನು ಬಿಗ್ ಬಾಸ್ ಅಪ್ಲೋಡ್ ಮಾಡಿದ್ದಾರೆ. ಅಬ್ದು ಮತ್ತು ಮಾಹಿಮ್ ತುಂಟಾಟವನ್ನು ವೀಕ್ಷಕರು ಎಂಜಾಯ್ ಮಾಡಲಿದ್ದಾರ. 

Bigg boss Hindi season 16 house witnesses entry of a cute dog as a new member vcs

ಅಬ್ದು ರೋಜಿಕ್  ರೀ- ಎಂಟ್ರಿ:

ವೃತ್ತಿ ಜೀವನದಲ್ಲಿ ಮಾಡಿಕೊಂಡಿರುವ ಕೆಲವೊಂದು ಕಮಿಟ್‌ಮೆಂಟ್‌ಗಳಿಂದ ಅಬ್ದು ರೋಜಿಕ್‌ ಬಿಗ್ ಬಾಸ್‌ ಮನೆಯಿಂದ ಕಳೆದ ವಾರ ಹೊರ ನಡೆದಿದ್ದರು. ಅಬ್ದು ಇಲ್ಲದೆ ಈ ಸೀಸನ್‌ ನೋಡಲು ಬೇಸರ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರು ಅಷ್ಟರಲ್ಲಿ ಅಬ್ದು ರೀ- ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಡುತ್ತಿದ್ದಂತೆ ಶಿವ ಠಾಕರೆ ಮತ್ತು ನಿಮೃತ್ ಕೌರ್ ಅಹ್ಲುವಾಲಿಯಾ ಅವರನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ. 

ಪಾಪ-ಮಮ್ಮ ಅನ್ಕೊಂಡು ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅಮೂಲ್ಯ ಗೌಡ

ಕನ್ನಡ ಬಿಗ್ ಬಾಸ್ ಅಪ್ಡೇಟ್ಸ್‌: 

ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 9 ಪ್ರಸಾರವಾಗುತ್ತಿದೆ. ಡಿಸೆಂಬರ್ 30 ಮತ್ತು 31 ಫಿನಾಲೆ ದಿನ ಎಂದು ಘೋಷಣೆ ಮಾಡಲಾಗಿದೆ. ಫಿನಾಲೆ ವಾರಕ್ಕೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಆರ್ಯವರ್ಧನ್, ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ಕಾಲಿಟ್ಟಿದ್ದಾರೆ. ಒಟ್ಟು 18 ಸ್ಪರ್ಧಿಗಳಿದ್ದ ಮನೆಯಲ್ಲಿ ಈಗ ಕೇವಲ 6 ಮಂದಿ ಇದ್ದಾರೆ. ಫಿನಾಲೆ ವಾರ ಹೇಗಿರುತ್ತೆ? ಏನೆಲ್ಲಾ ಮಾಡಬಹುದು, ಸುದೀಪ್ ಯಾವ ಡ್ರೆಸ್‌ ಹಾಕಲಿದ್ದಾರೆ, ಟ್ರೋಫಿ ಜೊತೆ ಎಷ್ಟು ಹಣ ಕೊಡಲಿದ್ದಾರೆ ಎಂದು ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by ColorsTV (@colorstv)

Follow Us:
Download App:
  • android
  • ios