ಉರ್ಫಿಗೆ ಬಂತು ಇಂಥ ಆಫರ್‌! ತರಾಟೆ ತೆಗೆದುಕೊಂಡ ನಟಿ

ನಟಿ ಉರ್ಫಿ ಜಾವೇದ್ ಸದಾ ಚರ್ಚೆಯಲ್ಲಿರ್ತಾರೆ. ಅವರ ಡ್ರೆಸ್ಸಿಂಗ್ ಸೆನ್ಸ್ ಸಾಕಷ್ಟು ಸುದ್ದಿ ಮಾಡ್ತಿರುತ್ತದೆ. ಆದ್ರೀಗ ಉರ್ಫಿಗೆ ಕಂಪನಿಯೊಂದು ನೀಡಿದ ಆಫರ್ ನಟಿಯ ಕೋಪಕ್ಕೆ ಕಾರಣವಾಗಿದೆ. ಸ್ಟ್ರಿಪ್ ಮಾಡ್ತೀರಾ ಎಂಬ ಪ್ರಶ್ನೆಗೆ ಉರ್ಫಿ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ. 
 

big company offered Urfi Javed to perform a strip act roo

ಫ್ಯಾಷನ್ ಕ್ವೀನ್ ಉರ್ಫಿ ಜಾವೇದ್ (Fashion Queen Urfi Javed), ಕಂಡ ಎಲ್ಲ ವಸ್ತುವನ್ನು ತಮ್ಮ ಡ್ರೆಸ್ ಮಾಡಿಕೊಳ್ತಾರೆ. ಎಲೆಯಿಂದ ಹಿಡಿದು ಕಸದವರೆಗೆ ಎಲ್ಲವೂ ಉರ್ಫಿ ಜಾವೇದ್ ಡ್ರೆಸ್ (Dress) ಆಗಿದ್ದನ್ನು ನೀವೆಲ್ಲ ನೋಡಿದ್ದೀರಿ. ಚಿತ್ರವಿಚಿತ್ರ ಡ್ರೆಸ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದ್ರೂ, ಸಾಕಷ್ಟು ಟ್ರೋಲ್ ಆದ್ರೂ ಉರ್ಫಿ ಮಾತ್ರ ತಲೆ ಕೆಡಿಸಿಕೊಳ್ಳೋದಿಲ್ಲ. ತನ್ನ ಕ್ಲೈಂಟ್ ನೀಡುವ ಎಲ್ಲ ಡ್ರೆಸ್ ಗಳನ್ನು ಆಕೆ ಧರಿಸಿ, ಫೋಟೋಕ್ಕೆ ಫೋಸ್ ನೀಡ್ತಾಳೆ. ಅದೆಷ್ಟೇ ಚಿಕ್ಕ ಬಟ್ಟೆ ಧರಿಸಿದ್ರೂ ಉರ್ಫಿ ತನ್ನದೇ ಆದ ಕೆಲ ರೂಲ್ಸ್ ಫಾಲೋ ಮಾಡ್ತಿದ್ದಾಳೆ. ಯಾವುದೇ ಕಾರಣಕ್ಕೂ ಆ ನಿಯಮಗಳನ್ನು ಮುರಿಯೋದಿಲ್ಲ. ಅದಕ್ಕೆ ಈಗ ಇನ್ನೊಂದು ಎಗ್ಸಾಂಪಲ್ ಸಿಕ್ಕಿದೆ.

ಭಿನ್ನ ಬಟ್ಟೆ ಧರಿಸ್ತಾರೆ, ಅಲ್ಲಿ ಇಲ್ಲಿ ಒಂದಿಷ್ಟು ಮೈ ತೋರಿಸ್ತಾರೆ ಅಂದ್ರೆ ಅವರು ಬೆತ್ತಲೆಯಾಗೋಕೆ ಸಿದ್ಧ ಎಂದಲ್ಲ. ಅದನ್ನು ಉರ್ಫಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಉರ್ಫಿಗೆ ಈಗ ಅದೇ ಆಫರ್ ನೀಡಲಾಗಿದೆ. ಮೆಸ್ಸೇಜ್ ಜೋಡಿ ಆರಂಭದಲ್ಲಿ ಕನ್ಫ್ಯೂಸ್ ಆದ ಉರ್ಫಿ ನಂತ್ರ ಕೋಪಗೊಂಡಿದ್ದಾಳೆ. ನಿಮ್ಮನ್ನು ನೋಡಿಕೊಳ್ತೇವೆ ಎಂದು ನೇರವಾಗಿ ಕಂಪನಿಗೆ ಸವಾಲು ಹಾಕಿದ್ದಾರೆ.

ಡಾ. ರಾಜ್ ಕುಮಾರ್ ಮಕ್ಕಳಿಗೆ ಇದೆಂಥ ಶಿಕ್ಷೆ? ದೊಡ್ಮನೆಗೆ ಅನಾರೋಗ್ಯದ ಶಾಪ

ಉರ್ಫಿಗೆ ಬಂದ ಮೆಸ್ಸೇಜ್ ಏನು? : ಮೌಖಿಕ ನೈರ್ಮಲ್ಯ ಬ್ರ್ಯಾಂಡ್ ಪರ್ಫೊರಾ ಉರ್ಫಿಗೆ ಆಫರ್ ನೀಡಿದೆ. ನ್ಯೂಡ್ ಆಗಲು ಸಿದ್ಧರಿದ್ದೀರಾ ಎಂದು ಕೇಳಿದೆ. ಉರ್ಫಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಕಂಪನಿಯ ವಾಟ್ಸ್ ಅಪ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಸ್ಟ್ರಿಪ್ ಮಾಡಲು ಸಿದ್ಧರಿದ್ದೀರಾ ಎಂದು ಕಂಪನಿ ಕೇಳುತ್ತದೆ. ಅದಕ್ಕೆ ಉರ್ಫಿ, ಸ್ಟ್ರಿಪ್ ಅಂದ್ರೇನು ಎನ್ನುತ್ತಾರೆ. ಅದಕ್ಕೆ ಕಂಪನಿ ಸ್ಟ್ರಿಪ್ (strip) ಮಾಡಿ ಎಂದು ವಾಪಸ್ ಮೆಸ್ಸೇಜ್ ಹಾಕಿದೆ. 

ಇದು ಸಾಧ್ಯವಿರುವ ಎಲ್ಲ ಮಿತಿಯನ್ನು ದಾಟುತ್ತಿದೆ, @perforaofficial ಬ್ರಾಂಡ್‌ಗಳೊಂದಿಗಿನ ನನ್ನ ಎಲ್ಲಾ ಅನುಭವಗಳಲ್ಲಿ, ನಾನು ಈ ರೀತಿ ಯಾವುದೇ ಸವಾಲು ಎದುರಿಸಲಿಲ್ಲ. ನನ್ನ ತಂಡ ನಿಮ್ಮನ್ನು ಸಂಪರ್ಕಿಸುತ್ತದೆ, ನಾವು ಆಕ್ಷನ್ ತೆಗೆದುಕೊಳ್ಳಲಿದ್ದೇವೆ ಎಂದು ಉರ್ಫಿ ಬರೆದಿದ್ದಾರೆ. 

ಉರ್ಫಿಗೆ ಇದು ಹೊಸದೇನಲ್ಲ.  ಫ್ಯಾಷನ್ ಮತ್ತು ವಿಚಿತ್ರ ಡ್ರೆಸ್ಸಿಂಗ್ ಸೆನ್ಸ್‌ನಿಂದ ಅನೇಕ ಬಾರಿ ಅವರು ಅತ್ಯಾಚಾರ ಮತ್ತು ಹತ್ಯೆ ಬೆದರಿಕೆ ಎದುರಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿದ್ದರು. ಉರ್ಫಿ ಇತ್ತೀಚೆಗೆ ರಿಯಾಲಿಟಿ ವೆಬ್‌ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.  ಫಾಲೋ ಕಾರ್ಲೋ ಯಾರ್  ಕಾರ್ಯಕ್ರಮದ ತಮ್ಮ ಜೀವನದ ಅನೇಕ ವಿಷ್ಯಗಳನ್ನು ಅವರು ಹಂಚಿಕೊಂಡಿದ್ದರು. ಪಂಚ್ ಬೀಟ್ ಸೀಸನ್ 2, ಬಡೇ ಭಯ್ಯಾ ಕಿ ದುಲ್ಹನಿಯಾ, ಮೇರಿ ದುರ್ಗಾ ಮತ್ತು ಬೇಪನ್ನಾ ಮುಂತಾದ ಕಾರ್ಯಕ್ರಮಗಳ ಅವರು ಪಾಲ್ಗೊಂಡಿದ್ದು,  ಬಿಗ್ ಬಾಸ್ OTT ಯ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಉರ್ಫಿ ಕಾಣಿಸಿಕೊಂಡಿದ್ದರು. 

ಸ್ಟಾರ್ ನಟರಿಗೆ ಟಕ್ಕರ್ ಕೊಟ್ಟ ನಟಿಯರು

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಉರ್ಫಿ, ಸಾಕಷ್ಟು ಬ್ರ್ಯಾಂಡ್ ಜೊತೆ ಒಪ್ಪಂದ ಮಾಡ್ಕೊಂಡಿದ್ದಾರೆ. ಉರ್ಫಿ ಗಳಿಕೆ ಕಡಿಮೆ ಏನಿಲ್ಲ. ಉರ್ಫಿ ವಾರ್ಷಿಕ ಆದಾಯ 22 ಕೋಟಿ ಎಂದು ಅಂದಾಜು ಮಾಡಲಾಗಿದೆ. ಒಟ್ಟೂ ಉರ್ಫಿ ಬಳಿ 173 ಕೋಟಿಗಿಂತಲೂ ಹೆಚ್ಚು ಆಸ್ತಿಯಿದೆ. ಇನ್ಸ್ಟಾಗ್ರಾಮ್ ನಲ್ಲಿ 5.3 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅವರು ಅದ್ರಿಂದಲೂ ಸಾಕಷ್ಟು ಹಣ ಸಂಪಾದನೆ ಮಾಡ್ತಿದ್ದಾರೆ. 

Latest Videos
Follow Us:
Download App:
  • android
  • ios