ಕ್ಯಾನ್ಸರ್‌ ಗೆದ್ದ ಯುವ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

ಬಂಗಾಲಿಯ ಖ್ಯಾತ ನಟಿ  ಐಂದ್ರಿಲಾ ಶರ್ಮಾ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ (ನವೆಂಬರ್ 20) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದರು. 

Bengali actress Aindrila Sharma passes away at the age of 24 sgk

ಬಂಗಾಲಿಯ ಖ್ಯಾತ ನಟಿ  ಐಂದ್ರಿಲಾ ಶರ್ಮಾ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ (ನವೆಂಬರ್ 20) ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ನವೆಂಬರ್ 20) ಮಧ್ಯಾಹ್ನ ಕೊನೆಯುಸಿರೆಳೆದರು. ಐಂದ್ರಿಲಾ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕೊನೆಯುಸಿರೆಳೆದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಐಂದ್ರಿಲಾಶರ್ಮಾ ಬಾಯ್ ಫ್ರೆಂಡ್ ವದಂತಿಯನ್ನು ತಳ್ಳಿ ಹಾಕಿದ್ದರು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಿಪಿಆರ್ ಮಾಡಲಾಯಿತು. ಆದರೆ  ಐಂದ್ರಿಲಾ ದೇಹ ಸ್ಪಂದಿಸಲಿಲ್ಲ. ಹಾಗಾಗಿ ಅವರನ್ನು ವೆಂಟಿಲೇಟರ್ ಬೆಂಬಲಕ್ಕೆ ಇರಿಸಲಾಯಿತು. ಅಂಡ್ರಿಲಾ ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಂಡ್ರಿಲಾ ಇಂದು ಇಹಲೋಕ ತ್ಯಜಿಸಿದರು.

ಐಂದ್ರಿಲಾ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬಂಗಾಲಿ ಕಿರುತೆರೆ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ. ಅಂದಹಾಗೆ ನಟಿ ಐಂದ್ರಿಲಾ ಕ್ಯಾನ್ಸರ್‌ ರೋಗಕ್ಕೆ ಒಳಗಾಗಿದ್ದರು. ಇತ್ತೀಚಿಗಷ್ಟೆ ಕ್ಯಾನ್ಸರ್ ನಿಂದ ಗುಣಮುಖರಾಗಿದ್ದರು. ಕ್ಯಾನ್ಸರ್ ಗೆದ್ದ ನಟಿ ಮತ್ತೆ ಬಣ್ಣ ಹಚ್ಚಲು ಸ್ಜಜಾಗಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು ಕ್ಯಾನ್ಸರ್ ನಿಂದ ಗುಣಮುಖರಾಗುತ್ತಿದ್ದಂತೆ  ಅಂಡ್ರಿಯಾ ಬ್ರೈನ್ ಸ್ಟ್ರೋಕ್‌ಗೆ ಒಳಗಾದರು. ಮತ್ತೆ ಐಂದ್ರಿಲಾ ಆಸ್ಪತ್ರೆಗೆ ದಾಖಲಾದರು. ಎರಡೂ ಕಾಯಿಲೆಯಿಂದ ಸುಧಾರಿಸಿಕೊಂಡಿದ್ದ ಅಂಡ್ರಿಯಾ ಇದೀಗ ಹೃದಯಾಘಾತಕ್ಕೆ ಬಲಿಯಾದರು.
 
Tabassum passes away: ಪ್ರಖ್ಯಾತ ನಟಿ, ನಿರೂಪಕಿ ತಬಸ್ಸುಮ್‌ ವಿಧಿವಶ

ಐಂದ್ರಿಲಾ ಬಂಗಾಲಿಯಲ್ಲಿ ತುಂಬಾ ಪ್ರಸಿದ್ಧ ನಟಿ. 'ಜುಮುರ್' ಟಿವಿ ಶೋ ಮೂಲಕ  ಶೋಬಿಜ್‌ಗೆ ಕಾಲಿಟ್ಟರು. ಬಳಿಕ ಅಂಡ್ರಿಲಾ 'ಜಿಯೋನ್ ಕತಿ', 'ಜಿಬೋನ್ ಜ್ಯೋತಿ' ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಧಾರಾವಾಹಿ ಜೊತೆಗೆ ವೆಬ್ ಸರಣಿಯಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ 'ಭಾಗರ್' ವೆಬ್ ಸರಣಿಯನ್ನು ಮುಗಿಸಿದ್ದರು. ಬಳಿಕ ಅಂಡ್ರಿಯಾ ಸ್ಥಿತಿ ಗಂಭೀರವಾಗಿತ್ತು. ನಟಿ ಐಂದ್ರಿಲಾ ಶರ್ಮಾ ಚೇತರಿಸಿಕೊಳ್ಳಲಿ ಸಿನಿಮಾ ಗಣ್ಯರು ಮತ್ತು ಅಭಿಮಾನಿಗಳು ಪ್ರಾರ್ಥಿಸಿದ್ದರು. ಆದರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಕಠಿಣ ಹೋರಾಟ ನಡೆಸಿ 24 ವಯಸ್ಸಿಗೆ ಬದುಕು ನಿಲ್ಲಿಸಿ ಹೊರಟು ಹೋದರು. 

Latest Videos
Follow Us:
Download App:
  • android
  • ios