ಬಾಹುಬಲಿ ಸರಣಿ ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆದು ವ್ಯಾಪಕವಾಗಿ ಖ್ಯಾತಿ ಗಳಿಸಿದ ದಕ್ಷಿಣದ ಜನಪ್ರಿಯ ಚಿತ್ರಕಥೆಗಾರ ಕೆ.ವಿ.ವಿಜೇಂದ್ರ ಪ್ರಸಾದ್ ಅವರು ಮುಂಬರುವ ಬಹುಭಾಷಾ ಚಿತ್ರ ಸೀತಾ- ದಿ ಅವತಾರದ ಸ್ಕ್ರಿಪ್ಟ್ ಬರೆಯಲು ಸಜ್ಜಾಗಿದ್ದಾರೆ.

ಅಲೌಕಿಕ್ ದೇಸಾಯಿ ನಿರ್ದೇಶನದ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ದೃಶ್ಯಂ 2 ಸಿನಿಮಾದ ಮೋಹನ್‌ಲಾಲ್ ತುಂಟ ಮಗಳು ಇವಳೇ

ಬಾಹುಬಲಿಯ ಯಶಸ್ಸಿನ ನಂತರ, ಕೆ.ವಿ.ವಿಜಯೇಂದ್ರ ಪ್ರಸಾದ್ ಹಿಂದಿಯ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಮತ್ತು ವಿಜಯ್ನ ತಮಿಳು ಚಿತ್ರ ಮರ್ಸಲ್‌ಗೆ ಕೆಲಸ ಮಾಡಿದ್ದರು.

ಇವರು ಭಜರಂಗಿ ಭೈಜಾನ್, ಮಗಧೀರ, ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ: ದಿ ಕನ್‌ಕ್ಲೂಷನ್ ಮುಂತಾದ ಇತರ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.