* ಗೇಟ್ ಮುರಿದು ಒಳನುಗ್ಗಲೆತ್ನ: ಲಾಠಿ ಚಾರ್ಜ್* ಪುನೀತ್ ಅಭಿಮಾನಿಗಳ ಕಿಡಿ* ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಬೆಂಗಳೂರು(ಮಾ.26): ಬಹು ನಿರೀಕ್ಷೆಯ, ಬಾಹುಬಲಿ ಖ್ಯಾತಿಯ ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶನದ ‘ಆರ್‌ಆರ್‌ಆರ್’(RRR) ಚಲನಚಿತ್ರ ಶುಕ್ರವಾರ ರಾಜ್ಯದೆಲ್ಲೆಡೆ(Karnataka) ಭರ್ಜರಿ ಪ್ರದರ್ಶನ ಕಂಡಿತು. ರಾಯಚೂರಿನ ಪೂರ್ಣಿಮಾ ಹಾಗೂ ಎಸ್ಎನ್ಟಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ(Fans) ಚಿತ್ರವೀಕ್ಷಣೆಗೆ ಭಾರೀ ಗದ್ದಲವೇ ನಡೆಯಿತು.
ಚಿತ್ರಮಂದಿರ(Theater) ಹೌಸ್ಫುಲ್ ಆಗಿದ್ದರಿಂದ ಟಿಕೆಟ್(Ticket) ಸಿಗದೆ ನಿರಾಶೆಗೊಂಡ ಕೆಲ ಅಭಿಮಾನಿಗಳು ಟಿಕೆಟ್ನ ಕಲರ್ ಜೆರಾಕ್ಸ್ ಮಾಡಿಕೊಂಡು ಬಂದಿದ್ದಲ್ಲದೆ, ಗೇಟ್ ಹಾಗೂ ಬಾಗಿಲು ಮುರಿದು ಒಳ ನುಗ್ಗಿದ ಘಟನೆಯೂ ನಡೆಯಿತು. ಇದರಿಂದ ಚಿತ್ರಮಂದಿರದಲ್ಲಿ ಕೆಲಕಾಲ ಆತಂಕ, ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಏಕಾಏಕಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು(Police) ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ಕೈಮೀರಿದಾಗ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
RRR Film Review: ಅಬ್ಬಬ್ಬಾ... ರಾಜಮೌಳಿಯ ದೃಶ್ಯ ವೈಭವ!
ಮುಂಜಾನೆ ಶೋ:
ಚಿಕ್ಕಬಳ್ಳಾಪುರದ(Chikkaballapur) ಬಾಲಾಜಿ ಹಾಗೂ ಗಾಯತ್ರಿ ಚಿತ್ರ ಮಂದಿರಗಳಲ್ಲಿ ಆರ್‌ಆರ್‌ಆರ್ ಚಿತ್ರ ಮುಂಜಾನೆ 3.30ಕ್ಕೇ ಪ್ರದರ್ಶನಗೊಂಡಿದ್ದು ವಿಶೇಷ. ಈ ಚಿತ್ರಮಂದಿರಗಳಲ್ಲಿ ಒಂದೇ ದಿನ ಆರು ಶೋಗಳು ನಡೆದವು.
ಪುನೀತ್ ಅಭಿಮಾನಿಗಳ ಕಿಡಿ:
ಇನ್ನು ವಿಜಯನಗರ(Vijayanagara) ಜಿಲ್ಲೆಯ ಹೊಸಪೇಟೆ(Hosapete) ನಗರದ ಮೀರ್ ಆಲಂ ಚಿತ್ರಮಂದಿರದ ಎದುರು ಆರ್‌ಆರ್‌ಆರ್ ಚಿತ್ರದ ಪೋಸ್ಟರ್ ಹಾಕಿದ್ದನ್ನು ಕಂಡು ಪುನೀತ್ ರಾಜಕುಮಾರ್(Puneeth Rajkumar) ಅಭಿಮಾನಿಗಳು ಪ್ರತಿಭಟಿಸಿದ ಪ್ರಸಂಗ ನಡೆಯಿತು. ತಕ್ಷಣ ಚಿತ್ರಮಂದಿರದ ಮಾಲೀಕರು ಚಿತ್ರದ ಪೋಸ್ಟರ್ ತೆಗೆದಿದ್ದಾರೆ. ಬಳಿಕ ಆರ್‌ಆರ್‌ಆರ್ ಚಿತ್ರ ಯಾವುದೇ ಅಡ್ಡಿ ಇಲ್ಲದೆ ಪ್ರದರ್ಶನಗೊಂಡಿತು.
ಮಾತೃಭಾಷೆ ಮಾನ ಉಳಿಸಿದ ನಟ, ಕನ್ನಡಿಗರ ಹೃದಯ ಗೆದ್ದ Jr NTR
ರಾಜಮೌಳಿ ನಿರ್ದೇಶನದ RRR ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ. ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ಸಿನಿಮಾ ಎಲ್ಲೆಡೆ ಪ್ರದರ್ಶನವಾಗ್ತಿದ್ದು, ಮಲ್ಟಿ ಸ್ಟಾರರ್ ಚಿತ್ರಕ್ಕೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಬಾಹುಬಲಿ ಸಿನಿಮಾದ ದಾಖಲೆಯನ್ನ ತಮ್ಮದೇ ಸಿನಿಮಾ ಮೂಲಕ ಮುರಿದಿದ್ದಾರೆ ನಿರ್ದೇಶಕ ರಾಜಮೌಳಿ. ಇನ್ನು ಸಿನಿಮಾದ ಮೇಕಿಂಗ್ , ಗ್ರಾಫಿಕ್ಸ್ , ಕಥೆ ಪ್ರತಿಯೊಂot ವಿಚಾರದಲ್ಲಿಯೂ ರಾಜಮೌಳಿ ಯಶಸ್ಸು ಕಂಡಿದ್ದು ಥ್ರಿಬಲ್ ಆರ್ ಸಿನಿಮಾ ಪ್ರೇಕ್ಷಕರಿಗೆ ಹಬ್ಬವನ್ನುಂಟು ಮಾಡಿದೆ.
RRR Review ರಾಜಮೌಳಿ ಚಿತ್ರಕ್ಕೆ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ ಕನ್ನಡಿಗರು?
ತ್ರಿಬಲ್ ಆರ್ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂದಿದ್ದು, ವಿಶೇಷ ಅಂದ್ರೆ ಕನ್ನಡದ ಸಿನಿಮಾ ಅಭಿಮಾನಿಗಳಿಗೆ ರಾಜಮೌಳಿ ಆ್ಯಂಡ್ ಟೀಂ ಭರ್ಜರಿ ಎಂಟರ್ಟೈನ್ಮೆಂಟ್ ಕೊಟ್ಟಿದೆ. ಹೌದು ಈಗಾಗಾಲೇ ರಾಜ್ಯಾರದ್ಯಂತ RRR ಸಿನಿಮಾದ ಕನ್ನಡ ವರ್ಷನ್ ರಿಲೀಸ್ ಆಗಿದ್ದು, ಹೆಚ್ಚೆಚ್ಚು ಪ್ರೇಕ್ಷಕರು ಕನ್ನಡ ವರ್ಷನ್ ನೋಡಲು ನಿರ್ಧರಿಸಿದ್ದಾರೆ. ಕಾರಣ ಥ್ರಿಬಲ್ ಆರ್ ಚಿತ್ರದ ಕನ್ನಡ ವರ್ಷನ್ ಗೆ ರಾಮ್ ಚರಣ್ ಹಾಗೂ ಜ್ಯೂ ಎನ್ ಟಿ ಆರ್ ಅವ್ರೇ ಡಬ್ಬಿಂಗ್ ಮಾಡಿದ್ದಾರೆ. ಸಾಮಾನ್ಯವಾಗಿ ಅನ್ಯ ಭಾಷೆಯ ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್‌ಗಳನ್ನು ಬಳಸಿಕೊಂಡು, ಡಬ್ ಮಾಡಿಸುತ್ತಾರೆ,. ಆದ್ರೆ ಈ ಭಾರಿ ರಾಜಮೌಳಿ ಚಿತ್ರದ ನಾಯಕರಿಂದಲೇ ಡಬ್ಬಿಂಗ್ (Dubbinng) ಮಾಡಿಸಿದ್ದಾರೆ. ಕನ್ನಡ ಸಿನಿಮಾ ಪ್ರೇಮಿಗಳ (Kannada Cine Lovers) ಮನ ಗೆದ್ದಿದ್ದಾರೆ.
NTR ಕನ್ನಡ ಪ್ರೇಮಕ್ಕೆ ಮನಸೋತ ಕನ್ನಡಿಗರು
ಮಾತೃಭಾಷೆ ಪ್ರತಿಯೊಬ್ಬರಲ್ಲಿಯೂ ಬೆರೆತು ಹೋಗಿರುತ್ತೆ ಅನ್ನೋದಕ್ಕೆ ಜ್ಯೂ ಎನ್‌ಟಿಆರ್ ಸಾಕ್ಷಿ. ತಾರಕ್ ಆಂಧ್ರದಲ್ಲಿ ಇದ್ದರೂ ಎಂದಿಗೂ ತಮ್ಮ ಮಾತೃ ಭಾಷೆ ಬಗ್ಗೆ ಹೇಳಿಕೊಳ್ಳಲು ಅಂಜಿಕೆ ಮಾಡಿಕೊಂಡಿಲ್ಲ. ಈ ಹಿಂದೆಯೂ ರಿಯಾಲಿಟಿ ಶೋಗಳಲ್ಲಿ 'ನನಗೆ ಕನ್ನಡ ಬರುತ್ತೆ' (I know Kannada) ನಮ್ಮ ತಾಯಿ (Mother) ಕನ್ನಡದವರು ಎಂದೆ ಹೆಮ್ಮೆಯಿಂದ ವೇದಿಕೆಯಲ್ಲಿ ಕನ್ನಡ ಮಾತನಾಡಿದ್ದರು. ಅದಾದ ನಂತರ RRR ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿದ್ದರು. ಇನ್ನು ಡಬ್ಬಿಂಗ್ ಸಮಯಲ್ಲಿ ತಮ್ಮ ತಾಯಿಯಿಂದ ಟಿಪ್ಸ್ ಕೂಡ ಪಡೆದುಕೊಂಡಿದ್ದರಂತೆ! ಜ್ಯೂ ಎನ್ ಟಿ ಆರ್ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದಾಗ ತಾಯಿ ಶಾಲಿನಿ ಕನ್ನಡಿಗರು ತುಂಬಾ ಸ್ಟ್ರಾಂಗ್. ಭಾಷೆ ಬಗ್ಗೆ ಅಭಿಮಾನ, ಪ್ರೀತಿಯೊಂದಿಗೆ ಜ್ಞಾನ ಹೊಂದಿದ್ದಾರೆ. ತಪ್ಪು ಮಾಡಿದ್ರೆ ಕ್ಷಮಿಸೋದಿಲ್ಲ, ಹುಷಾರಾಗಿ ಡಬ್ಬಿಂಗ್ ಮಾಡು ಎಂದಿದ್ದರಂತೆ. ಅದಷ್ಟೇ ಅಲ್ಲದೆ ಒಂದಿಷ್ಟು ಪದಗಳ ಉಚ್ಛಾರವನ್ನೂ ಹೇಳಿ ಕೊಟ್ಟಿದ್ದರಂತೆ. ಆ ಸಲಹೆಗಳನ್ನ ಪಡೆದುಕೊಂಡಿದ್ದ ಜ್ಯೂ ಎನ್‌ಟಿ ಆರ್ ಅಚ್ಚುಕಟ್ಟಾಗಿ ಡಬ್ಬಿಂಗ್ ಮಾಡಿದ್ದಾರೆ. ಥ್ರಿಬ್ಬಲ್ ಆರ್ ಸಿನಿಮಾದಲ್ಲಿ ಜ್ಯೂ ಎನ್‌ಟಿ ಆರ್ ಡಬ್ಬಿಂಗ್ ಎಲ್ಲರ ಗಮನ ಸೆಳೆಯೋದ್ರ ಜೊತೆಗೆ ಕನ್ನಡಿಗರ ಹೃದಯ ಗೆದ್ದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
