Asianet Suvarna News Asianet Suvarna News

ನಾಗ ಚೈತನ್ಯ-ಶೋಭಿತಾ ನಿಶ್ಚಾರ್ಥ ಬೆನ್ನಲ್ಲೇ ಅಚ್ಚರಿ ಭವಿಷ್ಯ ನುಡಿದ ಜ್ಯೋತಿಷಿ!

ನಟ ನಾಗ ಚೈತನ್ಯ ನಿಶ್ಚಿತಾರ್ಥ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯದ ಕುರಿತು ನಾಗ ಚೈತನ್ಯ ಅಭಿಮಾನಿಗಳು ಗರಂ ಆಗಿದ್ದಾರೆ.

Astrologer venu swamy shocking prediction after naga chaitanya sobhita engagement ckm
Author
First Published Aug 12, 2024, 1:43 PM IST | Last Updated Aug 12, 2024, 2:45 PM IST

ಹೈದರಾಬಾದ್(ಆ.12) ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ನಿಶ್ಚಿತಾರ್ಥದಿಂದ ಕುಟುಂಬ ಸದಸ್ಯರು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಟಿ ಸಮಂತಾ ಮದುವೆಯಾಗಿ ವಿಚ್ಚೇದನ ಪಡೆದಿದ್ದ ನಾಗ ಚೈತನ್ಯ ಇದೀಗ 2ನೇ ಮದುವೆಗೆ ಸಜ್ಜಾಗಿದ್ದಾರೆ. ಹಲವು ಕಾರಣಗಳಿಂದ ನಾಗ ಚೈತನ್ಯ ನಿಶ್ಚಿತಾರ್ಥ ಭಾರಿ ಸದ್ದು ಮಾಡಿದೆ. ಆಧರೆ ನಿಶ್ಚಾರ್ಥದ ಬೆನ್ನಲ್ಲೇ ವಿವಾದಿತ ಜ್ಯೋತಿಷಿ  ವೇಣು ಸ್ವಾಮಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಇದು ನಾಗ ಚೈತನ್ಯ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಾಗ ಚೈತನ್ಯ ಹಾಗೂ ಶೋಭಿತ ನಿಶ್ಚಿತಾರ್ಥ ಸಮಯ ಸರಿಯಿಲ್ಲ ಎಂದು ಎಚ್ಚರಿಸಿದ ವೇಣಸ್ವಾಮಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಇವರಿಬ್ಬರ ಮದುವೆ ಹಾಗೂ ಮುಂದಿನ ಭವಿಷ್ಯದ ಕುರಿತು ಜ್ಯೋತಿಷಿ ಹೇಳಿದ್ದಾರೆ. ವೇಣುಸ್ವಾಮಿ ನುಡಿದ ಭವಿಷ್ಯದ ಪ್ರಕಾರ ನಾಗ ಚೈನ್ಯ ಹಾಗೂ ಶೋಭಿತಾ 2027ರಲ್ಲಿ ಬೇರೆಯಾಗಲಿದ್ದಾರೆ ಎಂದಿದ್ದಾರೆ. ಈ ಭವಿಷ್ಯ ಇದೀಗ ಆಕ್ರೋಶಕ್ಕೆ ಕಾರಣಾಗಿದೆ. 

ನಾಗ ಚೈತನ್ಯ ನಿಶ್ಚಿತಾರ್ಥ ಬೆನ್ನಲೆ ಸಮಂತಾಗೆ ಪ್ರಪೋಸ್ ಮಾಡಿದ ಯೂಟ್ಯೂಬರ್; ಜಿಮ್‌ ಇದೆ ಎಂದು ಒಪ್ಪೆಬಿಟ್ರಾ ನಟಿ?

ಶೋಭಿತಾ ಹಾಗೂ ನಾಗ ಚೈತನ್ಯ ರಾಶಿ ಫಲ ಹೊಂದಿಕೆಯಾಗುತ್ತಿಲ್ಲ. ನಿಶ್ಚಿತಾರ್ಥದ ಸಮಯವೂ ಉತ್ತಮವಾಗಿಲ್ಲ. ಜ್ಯೋತಿಷ್ಯದ ಪ್ರಕಾರ ನಾಗ ಚೈತನ್ಯ ಹಾಗೂ ಶೋಭಿತಾ ಸಂಸಾರ 2027ರಲ್ಲಿ ವಿಚ್ಚೇಧನ ಪಡೆಯುವ ಸಾಧ್ಯತೆ ಇದೆ ಎಂದಿದ್ದಾರೆ. ಇದು ಜ್ಯೋತಿಷ್ಯದಲ್ಲಿ ತೋರಿಸುತ್ತಿರುವ ಮಾಹಿತಿ. ಆದರೆ ಇದು ಸುಳ್ಳಾಗಲಿ, ಅವರಿಬ್ಬರು ಉತ್ತಮವಾಗಿ ಸಂಸಾರ ನಡೆಸಲಿ ಎಂದು ವೇಣುಸ್ವಾಮಿ ಹೇಳಿದ್ದಾರೆ.

ಈ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ಮದುವೆಯಾಗಿ ವಿಚ್ಚೇದನ ಪಡೆದಿರುವ ನಾಗ ಚೈತನ್ಯ ಹಲವು ಸಂಕಷ್ಟಗಳಿಂದ ಹೊರಬಂದು ಮತ್ತೊಂದು ಮದುವೆಗ ಸಜ್ಜಾಗಿದ್ದಾರೆ. ಈ ವೇಳೆ ಈ ರೀತಿಯ ಅಪಶಕುನ ನುಡಿಯಬೇಡಿ. ಅವರು ಚೆನ್ನಾಗಿ ಸಂಸಾರ ನಡೆಸುತ್ತಾರೆ. ಈ ಕುರಿತು ಅನುಮಾನವೇ ಬೇಡ. ಮತ್ತೆ ನಮ್ಮ ಹೀರೋಗೆ ಸಂಕಷ್ಟ ಒಡ್ಡಬೇಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಮತ್ತೆ ಕೆಲವರು, ಈ ರೀತಿ ಸುಳ್ಳು ಭವಿಷ್ಯ ನುಡಿದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಜ್ಯೋತಿಷಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

 

ಇದೇ ವೇಳೆ ನಾಗ ಚೈತನ್ಯ ಕೆಲ ವರ್ಷಗಳ ಹಿಂದೆ ಜ್ಯೋತಿಷಿ ಕುರಿತು ನೀಡಿದ್ದ  ಹೇಳಿಕೆಯೊಂದು ವೈರಲ್ ಆಗುತ್ತದೆ. ಜ್ಯೂತಿಷ್ಯವನ್ನು ನಾನು ನಂಬುತ್ತೇನೆ. ಆದರೆ ಅದು ಪಾಸಿಟಿವ್ ಇದ್ದರೆ ಮಾತ್ರ. ಇಲ್ಲದಿದ್ದರೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಇದೇ ವಿಡಿಯೋವನ್ನು ಹಲವರು ಪೋಸ್ಟ್ ಮಾಡಿ ವೇಣು ಸ್ವಾಮಿಗೆ ಉತ್ತರ ನೀಡಿದ್ದಾರೆ

ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥದಲ್ಲಿ ಭಾಗಿಯಾದ ಫ್ಯಾಮಿಲಿಯ ಫೋಟೋಗಳು ಬಹಿರಂಗ
 

Latest Videos
Follow Us:
Download App:
  • android
  • ios