ಶೂಟಿಂಗ್ ವೇಳೆ ಬ್ರೇನ್ ಸ್ಟ್ರೋಕ್, ಮಾತನಾಡುವ ಸಾಮರ್ಥ್ಯ ಕಳೆದುಕೊಂಡ 'ಆಶಿಕಿ' ನಟ
'LAC' ಸಿನಿಮಾ ಚಿತ್ರೀಕರಣದ ವೇಳೆ ನಟ ರಾಹುಲ್ ರಾಯ್‌ಗೆ ಬ್ರೈನ್ ಸ್ಟ್ರೋಕ್. ಮುಂಬೈನ ನಾನಾವಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
2021ರ ಬಹು ನಿರೀಕ್ಷಿತ 'LAC: live the battle' ಸಿನಿಮಾವನ್ನು ಕಾರ್ಗಿಲ್‌ನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ತುಂಬಾ ಚಳಿ ಹಾಗೂ ಹಿಮಾ ವಾತಾವರಣ ಇದ್ದ ಕಾರಣ ರಾಹುಲ್‌ಗೆ ಬ್ರೈನ್ ಸ್ಟ್ರೋಕ್ ಆಗಿದೆ ಎನ್ನಲಾಗಿದೆ. ತಕ್ಷಣವೇ ಚಿತ್ರತಂಡ ರಾಹುಲ್ ಅವರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ.
ಮುಸ್ಲಿಂ ಗಾಯಕನ ಪಾರ್ಸಿ ಪತ್ನಿ: ಮತಾಂತರವಾಗಲು ಅತ್ತೆಮನೆ ಕಿರುಕುಳ
ಕಾಶ್ಮೀರದ ಶ್ರೀನಗರದಲ್ಲಿ ಚಿತ್ರೀಕರಣ ಮಾಡುತ್ತಿದ್ದ ರಾಹುಲ್ ಬ್ರೈನ್ ಸ್ಟ್ರೋಕ್‌ನಿಂದ ಸ್ಥಳದಲ್ಲಿಯೇ ಕುಸಿದು ಬಿದಿದ್ದಾರೆ. ಇಡೀ ಚಿತ್ರತಂಡ ಶ್ರೀನಗರದಿಂದ ಮುಂಬೈಗೆ ಪ್ರಯಣಿಸಿ ರಾಹುಲ್‌ಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಒದಗಿಸಿದ್ದಾರೆ. 52 ವರ್ಷದ ರಾಹುಲ್‌ಗೆ ಕೋವಿಡ್19 ಪರೀಕ್ಷೆ ಮಾಡಲಾಗಿತ್ತು. ರಿಪೋರ್ಟ್‌ನಲ್ಲಿ ನೆಗೆಟಿವ್ ಎಂದು ತಿಳಿದು ಬಂದಿದೆ. ರಾಹುಲ್ ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೈಜ ಘಟನೆ ಆಧಾರಿತ ಈ ಚಿತ್ರಕ್ಕೆ ನಿತಿನ್ ಕುಮಾರ್ ಗುಪ್ತಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಹಾಗೂ ಚೈತ್ರಾ ವಕೀಲ್ ಶರ್ಮಾ ನಿರ್ಮಾಣ ಮಾಡುತ್ತಿದ್ದಾರೆ. ಮೈನಸ್ 15 ಡಿಗ್ರಿ ಇದ್ದ ಕಾರಣ ರಾಹುಲ್‌ಗೆ ಹೀಗಾಗಿದ್ದು, ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ಭರವಸೆಯನ್ನು ತಂಡ ನೀಡಿದೆ.
ಮದುವೆಯಾದ ಮೇಲೆ ಬಾಲ್ಯದ ಕ್ರಶ್ ಬಗ್ಗೆ ಬಾಯ್ಬಿಟ್ಟ ಕರೀನಾ ಕಪೂರ್!
1990ರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಆಶಿಕಿ' ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ರಾಯ್ ಬಿ-ಟೌನ್‌ನ ಬಹು ಬೇಡಿಕೆಯ ನಟನಾಗಿ ಮಿಂಚಿದ್ದಾರೆ. ಕನ್ನಡದ ಸುಮನ್ ರಂಗನಾಥ್ ಅವರನ್ನು ವರಿಸಿದ ಇವರು ಕೆಲವು ವರ್ಷಗಳು ಸಂಸಾರ ನಡೆಸಿ, ಬೇರೆಯಾಗಿದ್ದರು.