ಕಸ್ಟಡಿಯಲ್ಲಿರೋ ಆರ್ಯನ್ ಖಾನ್‌ಗೆ ಸೈನ್ಸ್ ಬುಕ್ ವಿಜ್ಞಾನ ಪುಸ್ತಕ ಕೊಡಿ ಎಂದ ಶಾರೂಖ್ ಮಗ ಕಸ್ಟಡಿ ಇಂದು ಕೊನೆಯಾಗುತ್ತಾ ?

ಶಾರೂಖ್ ಖಾನ್ ಮಗ ಆರ್ಯನ್ ಖಾನ್(Aryan Khan) ಎನ್‌ಸಿಬಿ ಜೊತೆ ಸಹಕರಿಸುತ್ತಲೇ ಬಂದಿದ್ದಾರೆ. ಎನ್‌ಸಿಬಿ ಕಸ್ಟಡಿಯಲ್ಲಿರುವ ಶಾರೂಖ್ ಮಗ ವಿಜ್ಞಾನ ಪುಸ್ತಕಕ್ಕೆ ಬೇಡಿಕೆ ಇಟ್ಟಿದ್ದಾನೆ. ಅದನ್ನು ಅಧಿಕಾರಿಗಳು ಒದಗಿಸಿದ್ದಾರೆ ಎನ್ನಲಾಗಿದೆ. 

ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿರುದ್ಧ ಮಾದಕವಸ್ತು ನಿಗ್ರಹ ದಳ (NCB) ಬಹುತೇಕ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಗುರುವಾರ ಆತ​ನನ್ನು ತನ್ನ ವಶ​ದಿಂದ ಬಿಟ್ಟು​ಕೊ​ಡುವ ಸಾಧ್ಯತೆ ಇದೆ ಎಂದು ಮೂಲ​ಗಳು ತಿಳಿ​ಸಿ​ವೆ.

ಆರ್ಯನ್‌ ಖಾನ್‌ಗೆ ಆತ ಕೇಳಿದ ವಿಜ್ಞಾನ ಪುಸ್ತಕವನ್ನು ಒದಗಿಸಲಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ. ಆರ್ಯನ್‌ ಸೇರಿ ಬಂಧಿತರಿಗೆ ಎನ್‌ಸಿಬಿ ಪ್ರಧಾನ ಕಚೇರಿ ಬಳಿ ಇರುವ ನ್ಯಾಷನಲ್‌ ಹಿಂದೂ ರೆಸ್ಟೋರೆಂಟ್‌ನಿಂದ ಊಟ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಆರೋಪಿಗಳ ಮೊಬೈಲ್‌ ಫೋನ್‌ ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ಆರ್ಯನ್‌ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ.

ಹೀಗಾಗಿ ಆರ್ಯನ್ ಖಾನ್ ನ್ಯಾಯಾಂಗ ವಶಕ್ಕೆ ಹೋಗ​ಬ​ಹುದು ಅಥವಾ ಆತನ ವಕೀ​ಲರ ಬೇಡಿಕೆ ಅನು​ಸಾರ ಜಾಮೀನು ಸಿಗ​ಬ​ಹುದು ಎಂದು ವರ​ದಿ​ಗಳು ಹೇಳಿ​ದೆ.

ಡ್ರಗ್ಸ್‌ ಪಾರ್ಟಿ ರೈಡ್‌ನಲ್ಲಿ BJP ಉಪಾಧ್ಯಕ್ಷ: NCB ವಿರುದ್ಧ ಕೆಂಗಣ್ಣು

ಆರ್ಯನ್‌ ಖಾನ್‌ ವಿರುದ್ಧ ಪ್ರಕರಣವನ್ನು ಸಾಬೀತುಪಡಿಸಿಸಲು ಎನ್‌ಸಿಬಿ ವಿಚಾರಣೆ ವೇಳೆ ಆತ ನೀಡಿರುವ ಹೇಳಿಕೆ ಮತ್ತು ಆರ್ಯನ್‌ ವಾಟ್ಸ್‌ ಚಾಟ್‌ ಸಾಕ್ಷ್ಯವೇ ಸಾಕು ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ. ಬಂಧನದ ದಿನ ಆರ್ಯನ್‌ ಖಾನ್‌ ಡ್ರಗ್‌ ಸೇವಿಸಿದ್ದನೇ ಎಂದು ಮೂತ್ರ ಪರೀಕ್ಷೆ ಅಥವಾ ಮತ್ತಿತರ ಯಾವುದೇ ಪರೀಕ್ಷೆ ನಡೆಸಿಲ್ಲ. ಔಪಚಾರಿಕವಾಗಿ ವೈದ್ಯಕೀಯ ಪರೀಕ್ಷೆ ಮಾತ್ರ ನಡೆಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂಬೈನ ಐಷಾರಾಮಿ ಕ್ರೂಸ್‌ ಹಡಗಿನಲ್ಲಿ ನಿಷೇಧಿತ ಮಾದಕ ವಸ್ತು ಸೇವಿಸಿ ಪಾರ್ಟಿ ನಡೆಸುತ್ತಿದ್ದ ಪ್ರಕರಣ ಸಂಬಂಧ ಆರ್ಯನ ಖಾನ್‌ ನನ್ನು ಎನ್‌ಸಿಬಿ ಬಂಧಿಸಿತ್ತು.