ಬಹುಭಾಷಾ ನಟ ಅರ್ಜುನ್ ಸರ್ಜಾ ಟಾಲಿವುಡ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕಿಲಾಡಿ ಸಿನಿಮಾ ಸೆಟ್‌ನಲ್ಲಿ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟ

ಟಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅರ್ಜುನ್ ಸರ್ಜಾ. ಹೊಸ ಸಿನಿಮಾದ ಸೆಟ್‌ನಲ್ಲಿ ಫೋಟೋ ಶೇರ್ ಮಾಡಿದ ನಟ, ಕಿಲಾಡಿ ಸಿನಿಮಾ ಸೆಟ್‌ನಲ್ಲಿ 2021ರಲ್ಲಿಹೊಸ ಆರಂಭ ಎಂದು ಕ್ಯಾಪ್ಶನ್ ಬರೆದಿದ್ದಾರೆ.

Add Asianetnews Kannada as a Preferred SourcegooglePreferred

ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ ನಂತರ ಕಿಲಾಡಿ ಮೂಲಕ ಟಾಲಿವುಡ್‌ನಲ್ಲಿ ಮಿಂಚಲಿದ್ದಾರೆ ಅರ್ಜುನ್ ಸರ್ಜಾ. ರವಿ ತೇಜ ಬರ್ತ್‌ಡೇ ದಿನ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಭರವಸೆ ಮೂಡಿಸುವಂತೆ ಮೂಡಿ ಬಂದಿದೆ.

ಡೂಡಲ್ ಆರ್ಟಿಸ್ಟ್‌ ತೋಳಲ್ಲಿ ನಗ್ತಿದ್ದಾರೆ ಶ್ರುತಿ ಹಾಸನ್..? ಯಾರೀತ ಶಂತನು..?

ಸಿನಿಮಾದಲ್ಲಿ ಹೀರೋ ಪಾತ್ರ ಎರಡಾಗಿ ಕಾಣಿಸಿಕೊಳ್ಳಲಿದೆ. ಇದರಲ್ಲಿ ಮೀನಾಕ್ಷಿ ಚೌಧರಿ ಮತ್ತು ಡಿಂಪಲ್ ಹಾಯತಿ ಫೀಮೇಲ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಲಾಡಿ ಸಿನಿಮಾ ಈ ವರ್ಷ ಬೇಸಗೆಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

View post on Instagram