Asianet Suvarna News Asianet Suvarna News

Malaika Arora: ಮಾಜಿ ಪತಿಯನ್ನು ತಬ್ಬಿಕೊಂಡು ಸುದ್ದಿಯಾಗ್ತಿದ್ದಾರೆ ನಟಿ ಮಲೈಕಾ ಅರೋರಾ!

ಸದಾ ಸುದ್ದಿಯಲ್ಲಿರುವ ನಟಿ ಮಲೈಕಾ ಅರೋರಾ ಈಗ ಮಾಜಿ ಪತಿಯಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಏನದು?
 

Arbaaz Khan and Malaika Arora hug after dropping son Arhaan at the airport
Author
First Published Jan 27, 2023, 3:48 PM IST

ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ (Arbaz Khan) ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಬಹಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ ಆದರೆ ಮಲೈಕಾ ಮತ್ತು ಅರ್ಬಾಜ್ ತಮ್ಮ ಮಗ ಅರ್ಹಾನ್‌ಗಾಗಿ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಇಬ್ಬರೂ ಆಗಾಗ್ಗೆ ತಮ್ಮ ಮಗನನ್ನು ವಿಮಾನ ನಿಲ್ದಾಣದಲ್ಲಿ ಬಿಡಲು ಬರುತ್ತಾರೆ. ಈ ಸಮಯದಲ್ಲಿ, ಮಲೈಕಾ ಮತ್ತು ಅರ್ಬಾಜ್ ನಡುವೆ ಸುಂದರವಾದ ಬಾಂಧವ್ಯ ಕಂಡುಬರುತ್ತದೆ. ಇದು ಮತ್ತೊಮ್ಮೆ ನಡೆದಿದೆ. ಅರ್ಹಾನ್ ಜೊತೆ ಮಲೈಕಾ ಮತ್ತು ಅರ್ಬಾಜ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದ್ದು, ಇದರ ವಿಡಿಯೋ ವೈರಲ್​ (vedio viral) ಆಗಿದೆ. 

ಈ ದಂಪತಿಯ ಪುತ್ರ ಅರ್ಹಾನ್ ವಿದೇಶದಲ್ಲಿ ಓದುತ್ತಿದ್ದಾನೆ.  ಆತ ತನ್ನ ಹೆತ್ತವರೊಂದಿಗೆ ಸಮಯ ಕಳೆಯಲು ಆಗಾಗ್ಗೆ ಭಾರತಕ್ಕೆ ಬರುತ್ತಲೇ ಇರುತ್ತಾನೆ. ಕೆಲ ಸಮಯದ ಹಿಂದೆ ಈತ ಮುಂಬೈಗೆ ಬಂದಿದ್ದ. ರಜೆ ಮುಗಿದು ವಾಪಸ್​ ಹೋಗುವ ಸಂದರ್ಭದಲ್ಲಿ  ಮಲೈಕಾ ಮತ್ತು ಅರ್ಬಾಜ್  ಮಗನನ್ನು ವಿಮಾನ ನಿಲ್ದಾಣದಲ್ಲಿ ಬಿಡಲು ಬಂದಿದ್ದಾರೆ.  ಈ ಸಂದರ್ಭದಲ್ಲಿ ಮಲೈಕಾ ಮತ್ತು ಮಾಜಿ ಪತಿಯನ್ನು ತಬ್ಬಿಕೊಂಡಿದ್ದಾರೆ. ಅರ್ಹಾನ್, (Arhan Khan) ಅರ್ಬಾಜ್ ಮತ್ತು ಮಲೈಕಾ ಅವರ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಇದೊಳ್ಳೆ ಕಥೆಯಾಯ್ತಲ್ಲ...! ಫುಲ್​ ಡ್ರೆಸ್​ ಹಾಕಿದ್ರೂ ಮಲೈಕಾಳನ್ನು ಬಿಡದ ನೆಟ್ಟಿಗರು!

ಅರ್ಹಾನ್ ಹೋದ ನಂತರ ಮಲೈಕಾ ಮತ್ತು ಅರ್ಬಾಜ್ ಕೂಡ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ.  ಇದಾದ ನಂತರ ಇಬ್ಬರೂ ಬೇರೆ ಬೇರೆ ದಾರಿ ಹಿಡಿದಿದ್ದಾರೆ.  ಮಲೈಕಾ ಹಾಗೂ ಅರ್ಬಾಜ್​ ಇಬ್ಬರೂ ತಂತಮ್ಮ  ಕಾರಿನಲ್ಲಿ ಕುಳಿತು ಹೊರಟುಹೋಗಿದ್ದಾರೆ.  ಈ ಫೋಟೋದ ಬಗ್ಗೆ ಸಾಕಷ್ಟು ಕಮೆಂಟ್ಸ್​ (Comments) ಬರುತ್ತಿವೆ. ಮಗನ ಸಲುವಾಗಿ ಅಪ್ಪ ಅಮ್ಮ ಒಂದಾಗಿರುವುದಕ್ಕೆ ಕೆಲವರು ಸಂತೋಷ ವ್ಯಕ್ತಪಡಿಸಿದರೆ, ಮತ್ತೊಂದು ಮದುವೆಯಾಗಿರುವಾಗ ಹೀಗೆ ಪಬ್ಲಿಕ್​ನಲ್ಲಿ ಮಾಜಿ ಪತಿಯನ್ನು ತಬ್ಬಿಕೊಂಡಿರುವುದನ್ನು ಹಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು  ಮಲೈಕಾ ಮತ್ತು ಅರ್ಬಾಜ್ ಒಟ್ಟಿಗೆ ಇರಬೇಕು ಎಂದು ಹೇಳಿದ್ದಾರೆ.

ಅಂದಹಾಗೆ ಮಲೈಕಾ ಅರ್ಬಾಜ್ ಖಾನ್‌ನಿಂದ ವಿಚ್ಛೇದನ (Divorce) ಪಡೆದು ನಂತರ  ನಟ ಅರ್ಜುನ್ ಕಪೂರ್ ಅವರ ಕೈ ಹಿಡಿದಿದ್ದಾರೆ. ಇಬ್ಬರ ನಡುವೆ ಬಹಳ ವಯಸ್ಸಿನ ಅಂತರವಿದೆ. ಈ ಕಾರಣಕ್ಕಾಗಿ, ಇಬ್ಬರೂ ಅನೇಕ ಬಾರಿ ಟ್ರೋಲಿಂಗ್ ಎದುರಿಸಬೇಕಾಗಿದೆ. ಅದೇ ಇನ್ನೊಂದೆಡೆ,  ಅರ್ಬಾಜ್ ಖಾನ್ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಇಬ್ಬರ ಮದುವೆಯ ಸುದ್ದಿಯೂ ಮುನ್ನೆಲೆಗೆ ಬಂದಿತ್ತು. ಆದರೆ ಇಬ್ಬರೂ ಈ ವರದಿಗಳನ್ನು ಅಲ್ಲಗಳೆದಿದ್ದಾರೆ.

Aishwarya Rajesh: ದೇವಾಲಯದೊಳಗೆ ಮುಟ್ಟಾದ ಸ್ತ್ರೀ: ನಟಿ ಐಶ್ವರ್ಯಾ ಹೇಳಿಕೆಗೆ ಆಸ್ತಿಕರು ಕಿಡಿ!

ಇತ್ತೀಚೆಗೆ ಮಲೈಕಾ ಅರೋರಾ ಭಾರಿ ಸುದ್ದಿಯಾಗಿದ್ದರು. ಇದಕ್ಕೆ  ಕಾರಣ, ಅವರು ಗರ್ಭಿಣಿ (Pregnant) ಎಂದು ಗಾಳಿಸುದ್ದಿ ಹರಡಿತ್ತು. ಬದಲಾಗಿ  ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಪತಿ ಅರ್ಬಾಜ್​ ಖಾನ್​ (Arbaaz Khan) ಮತ್ತು  ತಮ್ಮ ಮದುವೆ ವಿಷಯದ ಬಗ್ಗೆ ಅವರು  ಹೇಳಿಕೊಂಡಿದ್ದರು. ತಾವಾಗಿಯೇ  ಅರ್ಬಾಜ್ ಖಾನ್​ ಅವರಿಗೆ ಪ್ರಪೋಸ್ ಮಾಡಿದ್ದ ವಿಷಯವನ್ನೂ ಹೇಳಿದ್ದರು. ನಂತರ ಅವರಿಗೆ ಡಿವೋರ್ಸ್​ ಕೊಟ್ಟಿದ್ದರು. 49 ವರ್ಷದ ಮಲೈಕಅ ಅರೋರಾ ಈಗ  ತಮಗಿಂತ  12 ವರ್ಷ ಚಿಕ್ಕವರಾಗಿರುವ  37 ವರ್ಷದ ಅರ್ಜುನ್ ಕಪೂರ್ (Arjun Kapoor)  ಜೊತೆಗೆ  ಕೆಲ ವರ್ಷಗಳಿಂದ ಒಟ್ಟಿಗೇ ಇದ್ದಾರೆ ಎನ್ನಲಾಗುತ್ತಿದ್ದು, ಅವರಿಂದಲೇ ಮಲೈಕಾ  ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯನೂ ಹರಡುತ್ತಿದೆ. ಆದರೆ ಈ ಬಗ್ಗೆ ನಟಿ ಏನನ್ನೂ ಹೇಳಲಿಲ್ಲ. ಸದಾ ತಮ್ಮ ಅಂಗಾಂಗಗಳನ್ನು ತೋರಿಸುವ ಅತ್ಯಂತ ಕಡಿಮೆ ಬಟ್ಟೆ ತೊಡುವ ಮಲೈಕಾ ಅವರು ಇತ್ತೀಚೆಗೆ ಫುಲ್​  ಡ್ರೆಸ್​ ಧರಿಸಿ ಭಾರಿ ಟ್ರೋಲ್​  ಕೂಡ ಆಗಿದ್ದರು. 

 
 
 
 
 
 
 
 
 
 
 
 
 
 
 

A post shared by Koimoi.com (@koimoi)

Follow Us:
Download App:
  • android
  • ios